More

    ಸಂಸದನ ಪತ್ನಿ ಟ್ರಸ್ಟ್‌ಗೆ ನಿವೇಶನ: ಹೈಕೋರ್ಟ್‌ ಕೆಂಡಾಮಂಡಲ- ಗೃಹ ಮಂಡಳಿಗೆ 1 ಲಕ್ಷ ರೂ. ದಂಡ

    ಕಲಬುರಗಿ: ಸಂಸದ ಡಾ. ಉಮೇಶ್ ಜಾಧವ್ ಪತ್ನಿ ಅವರ ಹೆಸರಿನಲ್ಲಿ ಇರುವ ಚಾರಿಟೆಬಲ್‌ ಟ್ರಸ್ಟ್‌ಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಕೆಲವೇ ಲಕ್ಷ ರೂಪಾಯಿಗಳಲ್ಲಿ ನೀಡಿರುವ ಕರ್ನಾಟಕ ಗೃಹ ಮಂಡಳಿಗೆ (ಕೆಎಚ್‌ಬಿ) ಹೈಕೋರ್ಟ್‌ನ ಕಲಬುರಗಿ ಪೀಠ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

    ಕೆಎಚ್‌ಬಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ನ್ಯಾಯಮೂರ್ತಿಗಳು, ಇನ್ನು 30 ದಿನಗಳ ಒಳಗೆ ನಿವೇಶವನ್ನು ವಾಪಸ್ ಪಡೆಯುವಂತೆ ನಿರ್ದೇಶಿಸಿದೆ.

    ಅಸಲಿಗೆ ಜಾಧವ್‌ ಅವರ ಪತ್ನಿ ಯಾವುದೇ ಚಾರಿಟೆಬಲ್‌ ಟ್ರಸ್ಟ್‌ ನಡೆಸುತ್ತಿಲ್ಲ. ಆದಾಗ್ಯೂ ಕೆಎಚ್‌ಬಿ ಅವರಿಗೆ 10 ಕೋಟಿ ರೂಪಾಯಿ ಬೆಲೆಯ ನಿವೇಶನ 3.87 ಲಕ್ಷ ರೂಪಾಯಿಗೆ ಹಂಚಿಕೆ ಮಾಡಿದೆ. 2004ರಲ್ಲಿ ಶಿಕ್ಷಣ ಸಂಸ್ಥೆ ನಿರ್ಮಿಸುವುದಾಗಿ ಜಾಧವ್‌ ಅವರು ಈ ನಿವೇಶನ ಪಡೆದುಕೊಂಡಿದ್ದಾರೆ. ಇದರಲ್ಲಿ ಅಕ್ರಮ ನಡೆದಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ ಈ ಆದೇಶ ಹೊರಡಿಸಿದೆ.

    ಕೆಎಚ್‌ಬಿ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್‌, ‘ಇದು ಯಾವ ರೀತಿಯ ಕರ್ನಾಟಕ ಗೃಹ ಮಂಡಳಿ? ಸರ್ಕಾರದ ಸಂಸ್ಥೆಯೇ ಹೀಗೆ ನಿಯಮ ಉಲ್ಲಂಘಿಸಿದರೆ ಹೇಗೆ। ಟೆಂಡರ್ ಇಲ್ಲದೆ ನಿವೇಶನ‌ ಹಂಚಿಕೆ ಹೇಗೆ ಮಾಡಲಾಗಿದೆ ಎಂದು ಪ್ರಶ್ನಿಸಿದೆ. ಇಂತಹ ಹಂಚಿಕೆ ಅರಾಜಕತೆಗೆ ಅವಕಾಶ ಕಲ್ಪಿಸಲಿದೆ. ಬೇಕಾಬಿಟ್ಟಿ ಹಂಚಿಕೆ ಮಾಡಲು ಅವಕಾಶ ಮಾಡಿಕೊಟ್ಟಂತಾಗಲಿದೆ ಎಂದು ಹೇಳಿರುವ ನ್ಯಾಯಮೂರ್ತಿಗಳು ದಂಡ ವಿಧಿಸಿದ್ದಾರೆ.

    ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್‌: ವಿವಿಧ ಜಿಲ್ಲೆಗಳಲ್ಲಿ 3006 ಹೆಲ್ತ್‌ ಆಫೀಸರ್‌ ನೇಮಕ

    ಸೀರೆಯುಟ್ಟ ಪತ್ರಕರ್ತೆಯಿಂದ ರೆಸ್ಟೋರೆಂಟ್‌ ಕ್ಲೋಸ್‌: ಎಡವಟ್ಟು ಮಾಡಿದ ಓನರ್‌ಗೆ ಗ್ರಹಚಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts