More

    ಎಚ್ಚರಿಕೆಗಿಲ್ಲ ಬೆಲೆ: ಸಿದ್ದರಾಮಯ್ಯ, ಶಿವಕುಮಾರ್​, ಪರಮೇಶ್ವರ ಅರೆಸ್ಟ್​!

    ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ರೈತರ ಚಳವಳಿಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್​ ಪಕ್ಷದ ಮುಖಂಡರು ನಿಯಮ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ನಗರದ ಮಹಾರಾಣಿ ಕಾಲೇಜು ಬಳಿ ತಡೆದ ಪೊಲೀಸರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಜಿ.ಪರಮೇಶ್ವರ ಸೇರಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಮೆಜೆಸ್ಟಿಕ್​ನಿಂದ ಆರಂಭವಾದ ರ್ಯಾಲಿ ರಾಜಭವನದತ್ತ ಹೊರಟಿತು. ರಾಜಭವನ ಮುತ್ತಿಗೆ ಹಾಕಲು ಹೊರಟ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯಿತು.

    ಬಿಎಂಟಿಸಿ ಬಸ್​ನಲ್ಲಿ ಒತ್ತಾಯಪೂರ್ವಕವಾಗಿ ಹತ್ತಿಸಿಕೊಂಡು ಕರೆದೊಯ್ದರು. ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು ನಾಲ್ಕು ಬಿಎಂಟಿಸಿ ಬಸ್​ನಲ್ಲಿ ತುಂಬಿಸಿಕೊಂಡು ಕರೆದೊಯ್ಯುಲಾಯಿತು.

    ಅಷ್ಟಕ್ಕೂ ಇಂಥದ್ದೊಂದು ಕ್ರಮ ತೆಗೆದುಕೊಳ್ಳಲು ಕಾರಣ, ಕಾಂಗ್ರೆಸ್ ವತಿಯಿಂದ ಆಯೋಜಿಸಿರುವ ರಾಜಭವನ ಚಲೋ ರ್ಯಾಲಿಗೆ ಅನುಮತಿ ನೀಡಿರಲಿಲ್ಲ.

    ಕರೊನಾ ನಿಯಮಾವಳಿ ಪ್ರಕಾರ 200 ಕ್ಕೂ ಹೆಚ್ಚು ಜನರು ಸೇರುವ ಆಗಿಲ್ಲ. ನಿಯಮ ಉಲ್ಲಂಘನೆಯಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದರು. ಇದರ ಹೊರತಾಗಿಯೂ ರಾಜಭವನ ಮುತ್ತಿಕ್ಕುವ ಪ್ರಯತ್ನ ಮಾಡಲಾಗಿದೆ.

    ನಿನ್ನ ಜತೆ ಮಲಗಲ್ಲ- ಡಿವೋರ್ಸೂ ಕೊಡಲ್ಲ ಎಂದರೆ ಕಾನೂನಿನಲ್ಲಿ ಪತಿ ಏನು ಮಾಡಬಹುದು?

    ಉನ್ನತ ಹುದ್ದೆಗಾಗಿ ಯುವರಾಜ್​ಗೆ ಲಂಚ ನೀಡಿದ ನಿವೃತ್ತ ನ್ಯಾಯಮೂರ್ತಿ ವಿರುದ್ಧ ದೂರು

    ದಿಶಾ ಸಭೆ: ಸಂಸದೆ ಸುಮಲತಾ ಟಾಪರ್​- ಕೇಂದ್ರದ ವೆಬ್​ಸೈಟ್​ನಲ್ಲಿಯೂ ಹೆಸರು ಉಲ್ಲೇಖ

    ಉನ್ನತ ಶಿಕ್ಷಣಕ್ಕಾಗಿ ಉಕ್ರೇನ್​ಗೆ ಹೋಗಿದ್ದ ಬೀದರ್​ ಹುಡುಗನ ಅಪಹರಣ ಸುಖಾಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts