More

    ದಿಶಾ ಸಭೆ: ಸಂಸದೆ ಸುಮಲತಾ ಟಾಪರ್​- ಕೇಂದ್ರದ ವೆಬ್​ಸೈಟ್​ನಲ್ಲಿಯೂ ಹೆಸರು ಉಲ್ಲೇಖ

    ಮಂಡ್ಯ: ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ, ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು (ದಿಶಾ) ಅತ್ಯಂತ ಹೆಚ್ಚು ಬಾರಿ ನಡೆಸಿರುವ ಸಂಸದೆ ಸುಮಲತಾ ಅಂಬರೀಶ್​ ಅವರು ನಂಬರ್ 1 ಪಟ್ಟ ಪಡೆದುಕೊಂಡಿದ್ದಾರೆ.

    ರಾಜ್ಯದ ಕೆಲವು ಸಂಸದರು ಒಂದು, ಎರಡು ಸಭೆ ಮಾತ್ರ ನಡೆಸಿ ನಿರ್ಲಕ್ಷ್ಯ ತೋರಿದ್ದರೆ, ಕರೊನಾ ಭೀತಿಯಿದ್ದಾಗಲೂ ಸಭೆ ನಡೆಸಿ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿಗೆ ಚುರುಕು ನೀಡಿದ್ದಾರೆ ಸುಮಲತಾ. ಆದ್ದರಿಂದ ಅತಿ ಹೆಚ್ಚು ಸಭೆ ನಡೆಸಿರುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಂಸದೆಯ ಕುರಿತು ಕೇಂದ್ರ ಸರ್ಕಾರದ ವೆಬ್​ಸೈಟ್​ನಲ್ಲಿ ದಾಖಲಾಗಿದೆ.

    ಮೂರು ತಿಂಗಳಿಗೊಮ್ಮೆ ನಡೆಸಬೇಕಿರುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಿಯಮಬದ್ಧವಾಗಿ ನಡೆಸಿದ ರಾಜ್ಯದ ಮೊದಲ ಸಂಸದೆ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.

    ಪ್ರತಿ ತ್ರೈಮಾಸಿಕಕ್ಕೊಮ್ಮೆ ಎಂಬಂತೆ ವಾರ್ಷಿಕ ನಾಲ್ಕು ದಿಶಾ ಸಭೆಗಳನ್ನು ಸಂಸದರು ನಡೆಸಬೇಕು. 2020-21ನೇ ಸಾಲಿನಲ್ಲಿ ಒಂದು ತ್ರೈಮಾಸಿಕವೂ ತಪ್ಪದಂತೆ ಎಲ್ಲ ಸಭೆಗಳನ್ನು ನಡೆಸುವುದರೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
    ಚಿತ್ರದುರ್ಗ, ಕೊಡಗು, ಮೈಸೂರು, ತುಮಕೂರು ಸಂಸದರು ತಲಾ ಎರಡು ಸಭೆಗಳನ್ನು ನಡೆಸಿದ್ದರೆ, ಉಳಿದ ಜಿಲ್ಲೆಗಳ ಸಂಸದರು ಕೇವಲ ಒಂದು ಸಭೆ ನಡೆಸಿದ್ದಾರೆ. 2019ರ ಮೇ 23ರಂದು ಲೋಕಸಭೆ ಪ್ರವೇಶಿಸಿರುವ ಸುಮಲತಾ 2019-20ರಲ್ಲೂ ಕೊನೇ ಎರಡು ತ್ರೈಮಾಸಿಕ ಸಭೆಗಳನ್ನು ಯಶಸ್ವಿಯಾಗಿ ನಡೆಸಿದ್ದರು.

    ಸಂಸದರ ಅನುದಾನ ಬಳಕೆಯಲ್ಲೂ ಇವರು ರಾಜ್ಯಕ್ಕೆ 2ನೇ ಸ್ಥಾನದಲ್ಲಿದ್ದರು. ಆಗ ಮೊದಲ ಸ್ಥಾನವನ್ನು ಮೈಸೂರು ಸಂಸದ ಪ್ರತಾಪ್‌ ಸಿಂಹ ಪಡೆದಿದ್ದರು.

    ಮತ್ತೊಂದು ಭೀಕರ ಅಪಘಾತ: 13 ಮಂದಿ ಸಾವು- 18 ಮಂದಿ ಸ್ಥಿತಿ ಚಿಂತಾಜನಕ

    ಬೆಂಗಳೂರು ಲಾಕ್​ ಮಾಡಿದ ‘ಕೈ’ ಪಡೆ- ಪ್ರತಿಭಟನಾಕಾರರಿಗೆ ಡಿಕೆಶಿ ಕೊಟ್ಟರೊಂದು ‘ಟಿಪ್ಸ್​’

    ಸಭಾಪತಿ ಹುದ್ದೆಗೆ ನಾನೂ ಆಕಾಂಕ್ಷಿ, ವರಿಷ್ಠರ ಅಭಿಪ್ರಾಯವೂ ಇದೇ ಎಂದ ಹೊರಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts