ಕನ್ನಡದ ಖ್ಯಾತ ನಟಿಯೊಬ್ಬಳು ಮಂಚಕ್ಕೆ ಕರೆದಿದ್ಲು: ಶಾಕಿಂಗ್​ ಹೇಳಿಕೆ ನೀಡಿದ ನಿರ್ದೇಶಕ

geeta
Published on

ಬೆಂಗಳೂರು: ಸಿನಿಮಾ ರಂಗದಲ್ಲಿ ಪುರುಷರ ವಿರುದ್ಧ ನಟಿಯರು ಹೇಳಿಕೆ ನೀಡುವುದು ಸಾಮಾನ್ಯ. ಕಾಸ್ಟ್​ ಕೌಚಿಂಗ್​, ಮೀ ಟೂ ಇವೆಲ್ಲಾ ಇತ್ತೀಚೆಗೆ ಭಾರಿ ವಿವಾದ ಸೃಷ್ಟಿಸಿರುವ ಹೇಳಿಕೆಗಳು. ಆದರೆ ಇದೀಗ ಖ್ಯಾತಿ ನಿರ್ದೇಶಕರೊಬ್ಬರು ನಟಿಯೊಬ್ಬರ ಬಗ್ಗೆ ಹೇಳಿಕೆ ನೀಡಿರುವುದು ಸಿನಿರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ತೆಲುಗು ನಟ ನಿರ್ದೇಶಕ ಗೀತಾ ಕೃಷ್ಣ ಈ ವಿವಾದಾತ್ಮಕ‌ ಹೇಳಿಕೆ ನೀಡಿದ್ದಾರೆ. ಯುಟ್ಯೂಬ್ ಸಂದರ್ಶನದಲ್ಲಿ ಕನ್ನಡ ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೆ ನೀಡಿರುವ ಅವರು, ತಮಿಳು ಚಿತ್ರರಂಗದವರು ತುಂಬಾ ಅಸಹ್ಯ, ಕನ್ನಡದವರಂತೂ ಇನ್ನೂ ಅಸಹ್ಯ ಎಂದಿದ್ದಾರೆ.

ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ. ನಟಿಯಿಂದ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಕನ್ನಡದ. ಖ್ಯಾತ ನಟಿಯೊಬ್ಬಳು ನನಗೆ ಮಂಚಕ್ಕೆ ಕರೆದಿದ್ಲು. ಅವಕಾಶಕ್ಲಾಗಿ ಮಂಚ ಏರೋದು ಕನ್ನಡದಲ್ಲಿ ಕಾಮನ್. ನಾನು ಕನ್ನಡದ ಸಹವಾಸ ಬೇಡ ಅಂತ ಓಡಿ ಬಂದೆ ಎಂದು ಹೇಳಿಕೆ ನೀಡಿದ್ದಾರೆ. ಇವರು ತೆಲುಗುವಿನಲ್ಲಿ ಕೆಲವೊಂದು ಚಿತ್ರಗಳ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net