More

    ಸುಪ್ರೀಂಕೋರ್ಟ್‌ಗೆ ಅವಹೇಳನ- ಖ್ಯಾತ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅಪರಾಧಿ

    ನವದೆಹಲಿ: ಸುಪ್ರೀಂಕೋರ್ಟ್‌ ಹಾಗೂ ನ್ಯಾಯಮೂರ್ತಿಗಳ ವಿರುದ್ಧ ಎರಡೆರಡು ಟ್ವೀಟ್‌ಗಳನ್ನು ಮಾಡಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಸುಪ್ರೀಂಕೋರ್ಟ್‌ ಹಿರಿಯ ಖ್ಯಾತ ವಕೀಲ ಪ್ರಶಾಂತ್‌ ಭೂಷಣ್‌ ಅವರು ಅಪರಾಧಿ ಎಂದು ಕೋರ್ಟ್‌ ತೀರ್ಪು ನೀಡಿದೆ.

    ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಹಿಂದಿನ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಮಾಡಿರುವ ಟ್ವೀಟ್ ಮಾಡಿರುವ ಪ್ರಶಾಂತ್‌ ಭೂಷಣ್‌ ಅವರು ತಪ್ಪಿತಸ್ಥ ಎಂದಿರುವ ಸುಪ್ರೀಂಕೋರ್ಟ್‌ ಶಿಕ್ಷೆಯ ಪ್ರಮಾಣವನ್ನು ಇದೇ 20ರಂದು ನೀಡಲಿದೆ.

    ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠವು ಈ ತೀರ್ಪು ನೀಡಿದೆ. ನ್ಯಾಯಾಂಗ ನಿಂದನೆ (ಕ್ರಿಮಿನಲ್) ಕಾನೂನಿನ ಅಡಿ ಇಂಥ ಅಪರಾಧಕ್ಕೆ 6 ತಿಂಗಳು ಜೈಲು ಶಿಕ್ಷೆ, 2 ಸಾವಿರ ರೂಪಾಯಿ ದಂಡ ಅಥವಾ ಇವೆರಡನ್ನೂ ವಿಧಿಸುವ ಅವಕಾಶವಿದೆ.

    ಭೂಷಣ್ ಅವರು ಕಳೆದ ಜೂನ್ 27ರಂದು ಸುಪ್ರೀಂಕೋರ್ಟ್ ವಿರುದ್ಧ ಹಾಗೂ ಜೂನ್ 29ರಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ವಿರುದ್ಧ ಟ್ವೀಟ್‌ ಮಾಡಿದ್ದರು. ಇದು ಅನೇಕ ಮಂದಿಯ ಕೆಂಗಣ್ಣಿಗೆ ಗುರಿಯಾಗಿತ್ತು. ಹಲವಾರು ಮಂದಿ ಈ ಟ್ವೀಟ್‌ಗಳನ್ನು ಶೇರ್‌ ಮಾಡುವ ಮೂಲಕ ಅವರ ವಿರುದ್ಧ ಕಿಡಿ ಕಾರಿದ್ದರು. ಇಷ್ಟು ಆಗುತ್ತಲೇ ಎರಡೂ ಟ್ವೀಟ್‌ಗಳನ್ನು ಖುದ್ದು ಟ್ವಿಟ್ಟರ್ ತೆಗೆದುಹಾಕಿತ್ತು.

    ಟ್ವೀಟ್‌ಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದ ಕೋರ್ಟ್‌ ಸ್ವಯಂಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿತ್ತು.

    ಇದನ್ನೂ ಓದಿ: ಇಷ್ಟೊತ್ತಾದ್ರೂ ತಂದೆ ಮನೆಗೆ ಬರಲಿಲ್ಲವೆಂದು ನೋಡಲು ಹೋದ ಮಗನನ್ನೂ ಬಿಡದ ಸಾವು!

    ಟ್ವೀಟ್‌ನಲ್ಲಿ ಏನಿತ್ತು? ಜೂನ್‌ 27ರಂದು ಮಾಡಿದ್ದ ನ್ಯಾಯಾಂಗ ನಿಂದನೆಯಾಗುವಂಥ ಟ್ವೀಟ್‌ನಲ್ಲಿ ಪ್ರಶಾಂತ್‌ ಭೂಷಣ್‌ ಅವರು, ತುರ್ತು ಪರಿಸ್ಥಿತಿ ಹೇರದೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ನಾಶ ಮಾಡಲಾಗಿದೆ. ಕಳೆದ ಆರು ವರ್ಷಗಳ ಇತಿಹಾಸ ನೋಡಿದರೆ ಇದು ತಿಳಿಯುತ್ತದೆ. ಈ ರೀತಿ ಪ್ರಜಾಪ್ರಭುತ್ವ ನಾಶ ಮಾಡುವಲ್ಲಿ ಸುಪ್ರೀಂಕೋರ್ಟ್‌ನ ಪಾತ್ರವನ್ನು ಸ್ಪಷ್ಟವಾಗಿ ನೋಡಬಹುದು. ಅದರಲ್ಲೂ ಕಳೆದ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಪಾತ್ರ ಇದರಲ್ಲಿ ಅತ್ಯಂತ ದೊಡ್ಡದಾಗಿದೆ ಎಂದಿದ್ದರು.

    ಜೂನ್‌ 29ರ ಟ್ವೀಟ್‌ನಲ್ಲಿ ನಾಗ್ಪುರದಲ್ಲಿ ರಾಜಭವನದಲ್ಲಿ ಬಿಜೆಪಿ ನಾಯಕನಿಗೆ ಸೇರಿದ 50 ಲಕ್ಷ ರೂಪಾಯಿ ಬೈಕ್‌ನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ್ದಾರೆ ಎಂದು ಆರೋಪಿಸಿದ್ದ ಅವರು, ದೇಶದ ನಾಗರಿಕರ ಮೂಲ ಹಕ್ಕಾದ ನ್ಯಾಯ ಸಿಗುವುದಕ್ಕೆ ಕರೊನಾ ಲಾಕ್‌ಡೌನ್‌ ಎಂದು ಹೇಳಿಕೊಂಡು ಕೋರ್ಟ್‌ ಕಾರ್ಯಕಲಾಪಕ್ಕೆ ರಜೆ ಹಾಕಿ ನ್ಯಾಯಮೂರ್ತಿಗಳು ಬೈಕ್‌ನಲ್ಲಿ ಜಾಲಿ ರೈಡ್ ಮಾಡುತ್ತಿದ್ದಾರೆ ಎಂದು ಟೀಕಿಸಿ ಇನ್ನೊಂದು ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದಾರೆ.

    ಸೆಪ್ಟೆಂಬರ್‌ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್‌ಕುಮಾರ್‌ ಏನು ಹೇಳಿದ್ದಾರೆ ಕೇಳಿ…

    ನಾಯಿಗೆ ಕೃಷ್ಣವೇಷ ಹಾಕಿ ಕಿಡಿ ಹೊತ್ತಿಸಿದ ಮಂಗಳೂರು ಮಾಡೆಲ್‌!

    ನಕ್ಸಲ್‌ ಆಗಲು ಅನುಮತಿ ಕೊಡಿ- ರಾಷ್ಟ್ರಪತಿಗೆ ಯುವಕನ ಪತ್ರ: ಆಂಧ್ರದಲ್ಲಿ ತಲ್ಲಣ!

    ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

    ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

    ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts