More

    ತ್ರಿವಳಿ ತಲಾಖ್​ ವಿರುದ್ಧದ ಹೋರಾಟಗಾರ್ತಿಯೀಗ ಮಹಿಳಾ ಆಯೋಗದ ಉಪಾಧ್ಯಕ್ಷೆ

    ಡೆಹಾರಡೂನ್: 2017ರಲ್ಲಿ ಸುಪ್ರೀಂಕೋರ್ಟ್​ ಒಂದು ಐತಿಹಾಸಿಕ ತೀರ್ಪು ನೀಡಿತ್ತು. ಅದೇ ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ ತ್ರಿವಳಿ ತಲಾಖ್​ ಪದ್ಧತಿಯನ್ನು ಅಸಿಂಧು ಎಂದು ಘೋಷಿಸಿದ್ದು.

    ಇಂಥ ಒಂದು ತಲೆತಲಾಂತರಗಳ ಪದ್ಧತಿ ವಿರುದ್ಧ ದನಿ ಎತ್ತಿದವರಲ್ಲಿ ಒಬ್ಬರು ಸಾಯರಾ ಬಾನು. ಕಳೆದ ವಾರ ಬಿಜೆಪಿ ಸೇರ್ಪಡೆಯಾಗಿದ್ದ ಸಾಯರಾ ಅವರನ್ನು ಇದೀಗ ಉತ್ತರಾಖಂಡದ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆಯನ್ನಾಗಿ ನೇಮಿಸಲಾಗಿದೆ. ಇದು ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ಹುದ್ದೆಯಾಗಿದೆ.

    2016ರಲ್ಲಿ ಸಾಯರಾ ತ್ರಿವಳಿ ತಲಾಖ್‌ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. 15 ವರ್ಷಗಳ ದಾಂಪತ್ಯದ ಬಳಿಕ ಆಕೆಯ ಗಂಡ ಆಕೆಗೆ ತಲಾಖ್ ನೀಡಿದ್ದ. ಇವರ ಜತೆ ಜತೆಗೆ ಆಫ್ರಿನ್​ ರೆಹಮಾನ್‌, ಗುಲ್ಶನ್‌ ಪರ್ವೀನ್‌, ಇಶ್ರತ್‌ ಜಹಾನ್‌ ಮತ್ತು ಆತಿಯಾ ಸಾಬ್ರಿ ಎಂಬ ಇತರ ನಾಳ್ವರು ಮಹಿಳೆಯರ ಅರ್ಜಿಗಳನ್ನೂ ಒಟ್ಟು ಸೇರಿಸಿ ವಿಚಾರಣೆ ನಡೆಸಲಾಗಿತ್ತು.

    ಇದನ್ನೂ ಓದಿ: ಬಿಜೆಪಿ ಇರಲ್ಲ, ಜೆಡಿಎಸ್ ಬಗ್ಗೆ ಮಾತನಾಡೋಲ್ಲ ; ಶಿರಾ ಕ್ಷೇತ್ರದಲ್ಲಿ ಡಿಕೆಶಿ ಮತಬೇಟೆ

    ನಂತರ ಸುಪ್ರೀಂಕೋರ್ಟ್​ ತ್ರಿವಳಿ ತಲಾಖ್​ ನಿಷೇಧ ಮಾಡಿತ್ತು. ಬಿಜೆಪಿ ಸೇರುವ ಮೂಲಕ ತಾವು ಮುಸ್ಲಿಂ ಮಹಿಳೆಯರಿಗೆ ಪಕ್ಷದ ಸಿದ್ಧಾಂತಗಳ ಮನವರಿಕೆ ಮಾಡುವುದಾಗಿ ಸಾಯರಾ ಹೇಳಿದ್ದರು.

    ಇವರ ಜತೆ, ಜ್ಯೋತಿ ಷಾ, ಪುಷ್ಪ ಪಾಸ್ವಾನ್ ಅವರುಗಳನ್ನು ಉತ್ತರಾಖಂಡ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ಮುಖ್ಯಮಂತ್ರಿ ತ್ರೀವೇಂದ್ರ ಸಿಂಗ್ ರಾವತ್ ಮಾತನಾಡಿ, ಈ ನೇಮಕಾತಿಗಳು ಮಹಿಳೆಯರ ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸಲು ಹಾಗೂ ಆಯೋಗದಲ್ಲಿ ಬಾಕಿ ಇರುವ ಎಲ್ಲಾ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ನೆರವಾಗಲಿವೆ ಎಂದು ಹೇಳಿದ್ದಾರೆ.

    ಹೊಸ ಲವರ್​ಗೆ ಗ್ರಹಚಾರ ತಂದಿಟ್ಟ ಪ್ರೇಯಸಿ- ಸಾಗರದ ಡಬಲ್​ ಮರ್ಡರ್​ ಕೇಸ್​ ಭೇದಿಸಿದ ಪೊಲೀಸರು!

    ಫ್ಯಾನ್ಸಿ​ ನಂಬರ್​ನಲ್ಲಿ ಸಾರಿಗೆ ಇಲಾಖೆ ದಾಖಲೆ: 0001 ಸಂಖ್ಯೆಗೆ ಎಷ್ಟು ಹಣ ಕೊಟ್ರು ಗೊತ್ತಾ?

    ಸೌತ್​ ಬೇಡ ನಾರ್ತ್​ ಬೇಕು… ಅಯ್ಯೋ ನಂಗೆ ಅಮ್ಮನ ನೋಡ್ಬೇಕು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts