More

    ರೆಡ್​ಲೈನ್​ ಎಂಬ ಲಕ್ಷ್ಮಣ ರೇಖೆ: ದಾಟಿ ಬಂದರೆ ಚೀನಿಯರಿಗಿಲ್ಲ ಉಳಿಗಾಲ- ಯೋಧರ ಖಡಕ್​ ವಾರ್ನಿಂಗ್​

    ಲಡಾಖ್: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸಂಘರ್ಷ ತಾರಕಕ್ಕೇರುತ್ತಿರುವಂತೆಯೇ ಪ್ಯಾಂಗಾಂಗ್‍ತ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆ ಪ್ರದೇಶದಲ್ಲಿ ಮುಳ್ಳುತಂತಿ ಬೇಲಿಗಳನ್ನು ಭಾರತೀಯ ಸೇನಾಪಡೆ ನಿರ್ಮಿಸಿ ಇದಕ್ಕೆ ರೆಡ್‍ಲೈನ್ ಎಂದು ಘೋಷಿಸಿದೆ.

    ಒಂದು ವೇಳೆ ಈ ರೆಡ್​ಲೈನ್​ ನನ್ನೇನಾದರೂ ದಾಟುವ ದುಸ್ಸಾಹಸ ಮಾಡಿದರೆ, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು (ಪಿಎಲ್‍ಎ) ಯಾವುದೇ ಮುಲಾಜಿಲ್ಲದೆ ಹೊಡೆದೋಡಿಸುತ್ತೇವೆ ಎಂದು ಭಾರತೀಯ ಯೋಧರು ಎಚ್ಚರಿಕೆ ನೀಡಿದ್ದಾರೆ.

    ಪೂರ್ವ ಲಡಾಖ್‍ನ ಗಡಿ ಪ್ರದೇಶದ ಅತ್ಯಂತ ಎತ್ತರದ ಸ್ಥಳವಾದ ಫಿಂಗರ್ ಫೋರ್​ ಅನ್ನು ಭಾರತೀಯ ಸೇನಾಪಡೆಗಳು ಇದೇ ವೇಳೆ ವಶಕ್ಕೆ ಪಡೆದಿವೆ. ಈ ಹಿಂದೆ ಚೀನಾ ಸೈನಿಕರು ಇದೇ ಫಿಂಗರ್ ಫೋರ್ ಮತ್ತು ಸುತ್ತಮುತ್ತಲ ಪ್ರದೇಶವನ್ನು ಅತಿಕ್ರಮಣ ಮಾಡಲು ಮುಂದಾಗಿ ವಿಫಲರಾಗಿ ಮರಳಿದ್ದರು.

    ಇದೀಗ ಈ ಸ್ಥಳವನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡಿರುವ ಭಾರತದ ಯೋಧರು, ಇದರ ಜತೆಗೆ ಪ್ಯಾಂಗಾಂಗ್‍ತ್ಸೋ ಸರೋವರದ ದಕ್ಷಿಣ ಮತ್ತು ಉತ್ತರ ದಂಡೆಯಲ್ಲಿ ಮುಳ್ಳು ತಂತಿಬೇಲಿಗಳನ್ನು ಅಳವಡಿಸಿ ಅದನ್ನು ರೆಡ್​ಲೈನ್​ ಎಂದು ಘೋಷಿಸಿದ್ದಾರೆ.

    ಇದನ್ನೂ ಓದಿ: ರಾಮನ ಹಣಕ್ಕೆ ಕನ್ನ ಹಾಕಿದ ಖದೀಮರು: ಲಕ್ಷಾಂತರ ರೂಪಾಯಿ ವಿತ್​ಡ್ರಾ!

    ಈ ಪ್ರದೇಶವನ್ನು ಅತ್ಯಂತ ಸುರಕ್ಷಿತವಾಗಿದ್ದು, ಇಲ್ಲಿಂದ ಚೀನಾ ಸೈನಿಕರ ಎಲ್ಲ ಚಲನವವಲನವನ್ನೂ ಗಮನಿಸಲು ಸಾಧ್ಯವಿದೆ. ಇನ್ನು ಮುಂದೆ ಈ ಪ್ರದೇಶಕ್ಕೆ ಚೀನಾದ ಯಾವುದೇ ಅತಿಕ್ರಮಣವನ್ನು ವಿಫಲಗೊಳಿಸಲು ನಾವು ಸಜ್ಜಾಗಿದ್ದೇವೆ ಮತ್ತು ಅತ್ಯಂತ ಸಮರ್ಥರಾಗಿದ್ದೇವೆ ಎಂದು ಸೇನೆಯ ಮೂಲಗಳು ಹೇಳಿವೆ.

    ಅತ್ತ ಚೀನಾ ಕೂಡ ಸುಮ್ಮನೇ ಕುಳಿತಿಲ್ಲ. ಪ್ಯಾಂಗಾಂಗ್‍ತ್ಸೋ ಸರೋವರದ ಉತ್ತರ ಭಾಗದ ಇನ್ನೊಂದು ಕಡೆಯಲ್ಲಿ ಅದು ಅನಧಿಕೃತ ನಿರ್ಮಾಣ ಮತ್ತು ಸೇನಾ ಜಮಾವಣೆಯನ್ನು ಮುಂದುವರೆಸಿದೆ.

    ಇದೆ ವೇಳೆ, ಲಡಾಖ್‌ನ ಎಲ್​ಎಸಿ ಬಳಿ ಉದ್ವಿಗ್ನ ಪರಿಸ್ಥಿತಿ ಕುರಿತಂತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಇಂದು ದ್ವಿಪಕ್ಷೀಯ ಮಾತುಕತೆ ನಡೆಸಲು ಸಜ್ಜಾಗಿದ್ದಾರೆ.

    ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸಲು ಇವರಿಬ್ಬರು ಮಾಸ್ಕೊದಲ್ಲಿದ್ದಾರೆ. ದ್ವಿಪಕ್ಷೀಯ ಮಾತುಕತೆಯಲ್ಲಿ ಲಡಾಖ್‌ ಪರಿಸ್ಥಿತಿಯನ್ನು ತಿಳಿಗೊಳಿಸುವ ಬಗ್ಗೆ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.

    ಕೇರಳದ ಸ್ಮಗ್ಲಿಂಗ್​ ರಾಣಿಗೂ, ಕರ್ನಾಟಕದ ಡ್ರಗ್ಸ್​ ದಂಧೆಗೂ ಲಿಂಕ್​: ತನಿಖೆಯಿಂದ ಬಯಲು!

    ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಅತ್ಯಾಚಾರ ಮಾಡಿದ ಆಂಬ್ಯುಲೆನ್ಸ್ ಚಾಲಕ!

    11ರ ಪೋರನಿಂದ 9 ವರ್ಷದ ಬಾಲಕಿಯ ಕೊಲೆ: ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!

    ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್​ ಹತ್ತಿದ್ದ ಕರೊನಾ ಸೋಂಕಿತೆ ತಲುಪಿದ್ದು ದೆಹಲಿ! ಆಗಿದ್ದೇನು?

    ರಾಮನ ಹಣಕ್ಕೆ ಕನ್ನ ಹಾಕಿದ ಖದೀಮರು: ಲಕ್ಷಾಂತರ ರೂಪಾಯಿ ವಿತ್​ಡ್ರಾ!

    2024ರಲ್ಲಿಯೂ ಹಿಂದುತ್ವವೇ ಗೆಲ್ಲಲಿದೆ ಎಂದ ಸುಬ್ರಮಣಿಯನ್​ ಸ್ವಾಮಿ ಕೇಂದ್ರವನ್ನು ಟೀಕಿಸಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts