More

    ವೈಕುಂಠ ಏಕಾದಶಿಯಂದು ತಿರುಮಲನಿಗೆ ಬಂಪರ್‌: ಒಂದೇ ದಿನ ಹರಿದುಬಂತು ದಾಖಲೆಯ ಹಣ

    ತಿರುಮಲ: ಅತ್ಯಂತ ಸಿರಿವಂತ ದೇವರು ಎಂದೇ ಹೆಸರುವಾಸಿಯಾದ ದೇವರೆಂದರೆ ತಿರುಪತಿಯ ತಿರುಮಲ. ದಿನವೊಂದಕ್ಕೆ ಕೋಟಿ ಕೋಟಿಗಟ್ಟಲೆ ಹಣ, ಚಿನ್ನಾಭರಣ, ವಜ್ರಾಭರಣ ಎಲ್ಲವನ್ನೂ ನೋಡುವ ಏಕೈಕ ದೇವರು ಎಂದರೆ ಈತನೇ ಇರಬೇಕು.

    ಕರೊನಾ ಹಿನ್ನೆಲೆಯಲ್ಲಿ ದೇವಾಲಯ ಬಂದ್‌ ಮಾಡಿರುವ ಹಿನ್ನೆಲೆಯಲ್ಲಿ ತಮ್ಮ ಇಚ್ಛೆಯ ದೇವರನ್ನು ನೋಡದೇ ಭಕ್ತಾದಿಗಳು ಮರುಗುತ್ತಿದ್ದರು. ನಂತರ ಕರೊನಾ ಇದ್ದರೂ ಅನಿವಾರ್ಯವಾಗಿ ದೇವಾಲಯವನ್ನು ತೆರೆಯಲಾಗಿತ್ತು. ಜೂನ್ 8 ರಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶ್ರೀವಾರಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

    ಅದಾದ ನಂತರವೂ ಭಕ್ತರು ಕರೊನಾ ವೈರಸ್‌ ಇದ್ದರೂ ಲೆಕ್ಕಿಸದೇ ದೇಗುಲಕ್ಕೆ ಧಾವಿಸಿ ತಮ್ಮ ಕೈಲಾದಷ್ಟು ಕಾಣಿಕೆ ನೀಡಿ ಹೋಗುತ್ತಿದ್ದರು. ಈ ಕಾಣಿಕೆ ಕೋಟಿಯನ್ನು ಮೀರುತ್ತಲೇ ಸಾಗಿತ್ತು. ನಂತರ ಸೆಪ್ಟೆಂಬರ್ 6 ರಂದು ಒಂದೇ ದಿನ ಹುಂಡಿಯಲ್ಲಿನ ಸಂಗ್ರಹ 1 ಕೋಟಿ ರೂ. ದಾಟಿ ದಾಖಲೆಯಾಗಿತ್ತು.

    ಆದರೆ ಇದೀಗ ಅಂದರೆ ನಿನ್ನೆ ಕುಂಠ ಏಕಾದಶಿಯ ದಿನವಾಗಿದ್ದ ಹಿನ್ನೆಲೆಯಲ್ಲಿ ತಿರುಪತಿಯ ದರ್ಶನ ಭರ್ಜರಿಯಾಗಿ ನಡೆದಿತ್ತು. ಒಂದೇ ದಿನ 42,825 ಭಕ್ತರು ತಿರುಮಲ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನ ಪಡೆದಿದ್ದಾರೆ. ಇವರೆಲ್ಲರೂ ಹಾಕಿರುವ ಕಾಣಿಕೆಯ ಹಣವು ಒಂದೇ ದಿನದ ಹಿಂದಿನ ದಾಖಲೆಗಳನ್ನು ಮೀರಿದೆ.

    ಅಂದರೆ ನಿನ್ನೆ ಒಂದೇ ದಿನ 4.39 ಕೋಟಿ ರೂ. ಸಂಗ್ರಹವಾಗಿದೆ. ಈ ಕುರಿತು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಮಾಹಿತಿ ನೀಡಿದೆ. ಈ ಪರಿಯ ಹಣ ಸಂಗ್ರಹವಾಗಿರುವುದು ದಾಖಲೆಯ ಪ್ರಮಾಣ. ಕರೊನಾ ನಡುವೆಯೂ, ಯಾವುದೇ ವೈರಸ್‌ ಲೆಕ್ಕಸಿದೇ ಭಕ್ತರು ತಮ್ಮ ದೇವನನ್ನು ನೋಡಲು ತಂಡೋಪತಂಡವಾಗಿ ಬಂದಿದ್ದರು. ಎಲ್ಲ ರೀತಿಯ ಮುಂಜಾಗರೂಕತಾ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದಿದ್ದಾರೆ.

    ಮಗನ ಮದುವೆಗೆ ನೆರವಾದದ್ದೇ ತಪ್ಪಾಯ್ತು: ಗಂಡ ಹತ್ತಿರ ಸೇರಿಸುತ್ತಿಲ್ಲ- ಅವರ ಆಸ್ತಿ ಸಿಗುವುದಿಲ್ಲವೆ?

    ಈ ಯುವಕನ ಕಾರಿನ ನಂಬರ್‌ ಪ್ಲೇಟ್‌ಗೆ 52 ಕೋಟಿ ರೂ.! ಅದ್ಯಾಕೆ ಅಂತೀರಾ?

    ಮಕ್ಕಳಿಗಾಗಿ ಮದುವೆಯಾದರು: ಎರಡನೇ ಪತ್ನಿಯಾದ ಮಾತ್ರಕ್ಕೆ ನನಗೆ ಬಯಕೆಗಳು ಇರುವುದು ತಪ್ಪೆ?

    ವಿವಿಧ ಪದವೀಧರರಿಗೆ ಐಡಿಬಿಐ ಬ್ಯಾಂಕ್‌ನಲ್ಲಿವೆ 134 ಹುದ್ದೆಗಳು

    ಲವ್‌ ಜಿಹಾದಿಗಳಿಗೆ ಪಾಠ ಕಲಿಸಲು ರೆಡಿಯಾಯ್ತು ಇನ್ನೊಂದು ರಾಜ್ಯ: ಧರ್ಮ ಮುಚ್ಚಿಟ್ಟರೆ ಇನ್ನೂ ಕಠಿಣ ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts