More

    ಅತ್ತೆಯ ಮೇಲೆ ಅಳಿಯನಿಂದ ಅತ್ಯಾಚಾರ! ಪೊಲೀಸರಿಗೆ ಹೆದರಿ ಆತ್ಮಹತ್ಯೆಗೆ ಯತ್ನ

    ಚೆನ್ನೈ: ಅಳಿಯನೊಬ್ಬ ತನ್ನ ವಿಧವೆ ಅತ್ತೆಯ ಮೇಲೆ ಅತ್ಯಾಚಾರ ಎಸಗಿ ಆನಂತರ ತಾನು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.

    39 ವರ್ಷದ ಅಳಿಯನೊಬ್ಬ ತನ್ನ 50 ವರ್ಷದ ವಿಧವೆ ಅತ್ತೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಇದಾಗಿದೆ. ಪನ್ರುತಿ ಗ್ರಾಮದಲ್ಲಿ ಅತ್ತೆ ವಾಸವಾಗಿದ್ದಾರೆ. ಗಂಡನನ್ನು ಕಳೆದುಕೊಂಡಿದ್ದ ಇವರು ಒಬ್ಬರೇ ನೆಲೆಸಿದ್ದರು.

    ಅಲ್ಲೇ ಸಮೀಪದಲ್ಲಿ ನೆಲೆಸಿರುವ ಆರೋಪಿ ಅಳಿಯ, ಅತ್ತೆಯ ಮನೆಗೆ ಬಂದು ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ನಡೆದಿರುವ ಕುರಿತು ದೂರು ದಾಖಲು ಮಾಡುವುದಿಲ್ಲ ಎಂದು ಅಳಿಯ ಅಂದುಕೊಂಡಿದ್ದ. ಆದರೆ ಸಂತ್ರಸ್ತೆ ಈ ಬಗ್ಗೆ ದೂರು ನೀಡಿದ್ದಾರೆ. ಇದರಿಂದ ಹೆದರಿ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.

    ಇದನ್ನೂ ಓದಿ: ಕರೊನಾ ಗುಣಮುಖ: ಟ್ರಂಪ್ ಡಿಸ್​ಚಾರ್ಜ್​- ಶ್ವೇತಭವನಕ್ಕೆ ಕಾಲಿಡುತ್ತಲೇ ಮಾಡಿದ್ದು ಹುಬ್ಬೇರಿಸುವ ಕೆಲಸ!

    ಭಾನುವಾರ ಆರೋಪಿ ತನ್ನ ಅತ್ತೆಯ ಮನೆಗೆ ಹೋಗಿದ್ದಾನೆ. ಅಲ್ಲಿ ಏಕಾಏಕಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಸಂತ್ರಸ್ತೆ ಆಂತರಿಕ ಗಾಯಗಳಿಂದ ಬಳಲುತ್ತಿದ್ದು, ಕೂಡಲೇ ಆಕೆಯನ್ನು ಕಡಲೂರು ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಸಂತ್ರಸ್ತೆಯನ್ನು ಪರೀಕ್ಷೆ ಮಾಡಿದ ನಂತರ ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳ ತಂಡವು ಸಂತ್ರಸ್ತೆಯನ್ನು ಭೇಟಿ ಮಾಡಿ ಪ್ರಾಥಮಿಕ ವಿಚಾರಣೆ ನಡೆಸಿದೆ. ಸಂತ್ರಸ್ತೆ ನೀಡಿದ ಮಾಹಿತಿಯ ಆಧಾರದ ಮೇಲೆ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

    ಇಷ್ಟು ಆಗುತ್ತಿದ್ದಂತೆಯೇ ಇನ್ನು ಪೊಲೀಸರು ತನ್ನನ್ನು ಬಂಧಿಸುತ್ತಾರೆ ಎಂದು ತಿಳಿದ ಅಳಿಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಇದನ್ನು ನೋಡಿದ ನೆರೆಹೊರೆಯವರು ಕೂಡಲೇ ಆತನನ್ನು ಕಾಪಾಡಿದ್ದಾರೆ. ಸದ್ಯಕ್ಕೆ ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮುತ್ತಪ್ಪ ರೈ ಮಗನಿಗೆ ಡ್ರಗ್ಸ್​ ನಂಟು? ನಸುಕಿನಲ್ಲಿಯೇ ಸಿಸಿಬಿ ಶಾಕ್​- ಮನೆ ಮೇಲೆ ದಾಳಿ

    ದಸರಾ ಖಾಸಗಿ ದರ್ಬಾರು ನೋಡುವ ಭಾಗ್ಯ ಈ ಬಾರಿ ಯಾರಿಗೂ ಇಲ್ಲ

    ಚುನಾವಣಾಧಿಕಾರಿಯಾಗಿ ತೃತೀಯ ಲಿಂಗಿ: ಇತಿಹಾಸ ಸೃಷ್ಟಿಸಿದ ಬಿಹಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts