More

    ಪ್ರಥಮ, ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ ಸಮಯ ಬದಲು- ಇಲ್ಲಿದೆ ವಿವರ

    ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ಪಿಯು ಮಧ್ಯವಾರ್ಷಿಕ ಪರೀಕ್ಷೆಯ ಸಮಯ ಬದಲಾವಣೆ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಈ ಮೊದಲು 9ರಿಂದ 12.15ರವರೆಗೆ ಹಾಗೂ ಮಧ್ಯಾಹ್ನದ ಪರೀಕ್ಷೆಯನ್ನು 2ರಿಂದ 5.15ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಮಳೆ ಹೆಚ್ಚಾಗಿರುವ ಪರಿಣಾಮ ಸಾರ್ವಜನಿಕರ ಮನವಿ ಮೇರೆಗೆ ಬೆಳಗ್ಗಿನ ಪರೀಕ್ಷಾ ಸಮಯ ಬದಲಾವಣೆ ಮಾಡಿದೆ.

    ಬೆಳಗ್ಗೆ 9.30ರಿಂದ ಆರಂಭವಾಗಿ 12.45ರವರೆಗೆ ನಡೆಸಲು ನಿರ್ಧರಿಸಿದೆ. ಆ ಪ್ರಕಾರವಾಗಿ ಅರ್ಧಗಂಟೆ ತಡವಾಗಿ ಆರಂಭವಾಗಿ ತಡವಾಗಿ ಮುಕ್ತಾಯವಾಗಲಿದೆ. ಉಳಿದಂತೆ ಪರೀಕ್ಷಾ ದಿನಾಂಕಗಳಲ್ಲಿ ಹಾಗೂ ಮಧ್ಯಾಹ್ನದ ಪರೀಕ್ಷಾ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

    ಬಾಲಿವುಡ್‌ನಲ್ಲಿ ನಟ ಶಿವರಾಮ್‌ ದಾಖಲೆ: ಮೂವರು ಸೂಪರ್‌ಸ್ಟಾರ್‌ಗಳ ಭಾರತದ ಏಕೈಕ ಸಿನಿಮಾ ಕೊಟ್ಟವರು ಇವರೇ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts