More

    ಗಂಡ ಬದುಕಿದ್ದರೆ ಆತನ ಸ್ವಯಾರ್ಜಿತ ಆಸ್ತಿಗೆ ಪತ್ನಿ ಹಕ್ಕುದಾರಳಲ್ಲ- ಕಾನೂನು ಏನು ಹೇಳುತ್ತದೆ ನೋಡಿ…

    ಗಂಡ ಬದುಕಿದ್ದರೆ ಆತನ ಸ್ವಯಾರ್ಜಿತ ಆಸ್ತಿಗೆ ಪತ್ನಿ ಹಕ್ಕುದಾರಳಲ್ಲ- ಕಾನೂನು ಏನು ಹೇಳುತ್ತದೆ ನೋಡಿ...ಪ್ರಶ್ನೆ: ನನಗೆ ಮತ್ತು ಮನೆಯವರ ನಡುವೆ ಚಿಕ್ಕ ಮನಸ್ತಾಪವಾಗಿದೆ. ನಮ್ಮ ಯಜಮಾನರ ಹೆಸರಿನಲ್ಲಿ ಎರಡು ಸೈಟು ಇದೆ. ಬ್ಯಾಂಕಿನಲ್ಲಿ ತುಂಬ ಹಣವಿದೆ. ನಿವೃತ್ತಿ ಆದಾಗ ತುಂಬ ಹಣ ಬಂದಿದೆ.

    10 ಲಕ್ಷ ಹಣಕ್ಕೆ ನಾಮಿನಿಯಾಗಿ ನನ್ನನ್ನು ಮಾಡಿದ್ದರು. ಈಗ ಅದನ್ನು ರದ್ದು ಮಾಡಿ ಅವರ ತಮ್ಮನ ಹೆಸರನ್ನು ಮಾಡಿದ್ದಾರೆ. ನನ್ನ ಸ್ವಯಾರ್ಜಿತ, ನಾನು ಯಾರಿಗಾದರೂ ಕೊಡುತ್ತೇನೆ. ನಿಮಗೆ ಯಾರಿಗೂ ನಯಾ ಪೈಸೆಯೂ ಕೊಡುವುದಿಲ್ಲ ಎನ್ನುತ್ತಿದ್ದಾರೆ. ನನಗೆ ಹೆದರಿಕೆ ಆಗುತ್ತಿದೆ. ನನ್ನ ಪ್ರಶ್ನೆ ಏನೆಂದರೆ ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಹಕ್ಕು ಇಲ್ಲವೇ? ನಾನು ನನ್ನ ಜೀವನೋಪಾಯಕ್ಕೆ ಏನು ಮಾಡಬೇಕು?

    ಉತ್ತರ: ನಮ್ಮ ದೇಶದಲ್ಲಿ ವಿವಾಹಿತ ಮಹಿಳೆಗೆ ತನ್ನ ಗಂಡನ ಆಸ್ತಿಯಲ್ಲಿ ಆತ ಬದುಕಿರುವವರೆಗೆ ಭಾಗ ಕೇಳುವ ಹಕ್ಕು ಇರುವುದಿಲ್ಲ. ನಿಮ್ಮ ಯಜಮಾನರ ಸ್ವಯಾರ್ಜಿತ ಆಸ್ತಿಯನ್ನು ಅವರು ತಮ್ಮ ಜೀವಿತ ಕಾಲದಲ್ಲಿ ಯಾರಿಗೆ ಬೇಕಾದರೂ ಕ್ರಯ/ದಾನ ಇತ್ಯಾದಿ ಮಾಡಬಹುದು. ನಿಮಗೆ ಅದನ್ನು ಪ್ರಶ್ನಿಸುವ ಹಕ್ಕು ಇರುವುದಿಲ್ಲ.

    ಆದರೆ, ನಿಮಗೆ ನಿಮ್ಮ ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಇರುತ್ತದೆ. ನೀವು ಯಾವುದಾದರೂ ವಕೀಲರನ್ನು ಸಂಪರ್ಕಿಸಿ ಜೀವನಾಂಶಕ್ಕಾಗಿ ದಾವೆಯನ್ನು ಹಾಕಿ. ನೀವು ಈ ದಾವೆಯಲ್ಲಿ ನಿಮ್ಮ ಯಜಮಾನರ ಹೆಸರಿನಲ್ಲಿರುವ ಠೇವಣಿ ಹಣದ ಮೇಲೆ ಚಾರ್ಜ್ ಪಡೆಯಬಹುದು. ಇದರಿಂದ ನಿಮ್ಮ ಯಜಮಾನರು ನಿಮಗೆ ಜೀವನಾಂಶ ಕೊಡುವುದನ್ನು ನಿಲ್ಲಿಸಿದರೆ ಅವರ ಠೆವಣಿ ಹಣದಿಂದ ನಿಮಗೆ ಜೀವನಾಂಶ ಕೊಡುವಂತೆ ನ್ಯಾಯಾಲಯ ಆದೇಶ ಮಾಡುತ್ತದೆ.

    ಆದರೆ, ಯಾವುದಕ್ಕೂ ನೀವು ದಾವೆ ಹಾಕುವ ಮುಂಚೆ ಹಿರಿಯರನ್ನು ಹಿತೈಷಿಗಳನ್ನು ಕರೆಯಿಸಿ ಮಾತನಾಡಿ ನೋಡಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಅವರು ನಿಮಗೆ ಜಿವನಾಂಶ ಮಾತ್ರ ನ್ಯಾಯಾಲಯದಲ್ಲಿ ಕೊಡಲು ಒಪ್ಪಿ ತಮ್ಮ ಆಸ್ತಿಗಳನ್ನೆಲ್ಲ ಬೇರೆಯವರ ಪಾಲು ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯ ಆಗುವುದಿಲ್ಲ. ಆಸ್ತಿ ಬೇಕಾದರೆ ಬಾಂಧವ್ಯವನ್ನೂ ಉಳಿಸಿಕೊಳ್ಳಬೇಕಾಗುತ್ತದೆ. ಯೋಚಿಸಿ ನೋಡಿ.

    VIDEO: ಪತ್ನಿಯ ಅಗಲಿಕೆ ನಂತರ ಅಧೀರರಾಗಿದ್ದ ಚನ್ನವೀರ ಕಣವಿ- ಅವರ ಆಶಯದಂತೆ ಪಕ್ಕದಲ್ಲಿಯೇ ಸಮಾಧಿ

    ಜಮ್ಮು-ಕಾಶ್ಮೀರದಲ್ಲಿ ಸಿದ್ಧವಾಗ್ತಿದೆ ದೇಶದ ಮೊದಲ ಕೇಬಲ್‌ ಸೇತುವೆ: ಐಫೆಲ್‌ ಟವರ್‌ಗಿಂತಲೂ ಎತ್ತರ ಇದರ ಅಳತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts