More

    ವಾರದೊಳಗೆ ಆದೇಶ ಹಿಂಪಡೆಯದಿದ್ದರೆ ಕಾನೂನು ಹೋರಾಟ


    ವಿರಾಜಪೇಟೆ : ವಿರಾಜಪೇಟೆಯ ಚರ್ಚ್‌ಗಳು ಹೊಂದಿರುವ ಆಸ್ತಿಯನ್ನು ಮೈಸೂರು ಧರ್ಮಕೇಂದ್ರದ ಆಡಳಿತಾಧಿಕಾರಿಗಳು ಪರರಿಗೆ ಭೋಗ್ಯಕ್ಕೆ ನೀಡಿರುವ ಬಗ್ಗೆ ಚರ್ಚಿಸಲು ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಧರ್ಮ ಕೇಂದ್ರದ ಭಕ್ತಕೂಟದಿಂದ ದ್ವಿಶತಮಾನ ಸಭಾಂಗಣದಲ್ಲಿ ಬುಧವಾರ ಸಭೆ ಆಯೋಜಿಸಲಾಗಿತ್ತು.


    ವಿರಾಜಪೇಟೆಯಲ್ಲಿ ಇರುವ ಚರ್ಚ್‌ಗಳು ಹೊಂದಿರುವ ಆಸ್ತಿಗಳು ಪೂರ್ವಜರಿಂದ ಬಳುವಳಿಯಾಗಿ ದಾನವಾಗಿ ಬಂದಿದೆ. ಯಾರಿಗೂ ಅರಿವಿಲ್ಲದೆ ಆಸ್ತಿಯನ್ನು ಪರರಿಗೆ ಭೋಗ್ಯಕ್ಕೆ ನೀಡಿರುವುದು ಖಂಡನೀಯ. ಭೋಗ್ಯಕ್ಕೆ ನೀಡಿರುವ ಆಸ್ತಿಯ ಆದೇಶವನ್ನು ಒಂದು ವಾರದೊಳಗೆ ಹಿಂಪಡೆಯದಿದ್ದರೆ ಪ್ರತಿಭಟನೆ ಮತ್ತು ಕಾನೂನಿನ ಮೊರೆ ಹೋಗುವುದಾಗಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.


    ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿದೇಶಕ ಪಿ.ಎಸ್.ಮಚ್ಚಾಡೋ ಮಾತನಾಡಿ, ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯಕ್ಕೆ ಸುಮಾರು 250 ವರ್ಷಗಳ ಇತಿಹಾಸವಿದೆ. ನಮ್ಮ ಪೂರ್ವಜರು ದೇವಾಲಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಮತ್ತು ದೇವಾಲಯದ ನಿರ್ವಹಣೆಗಾಗಿ ಸುಮಾರು 45 ಎಕರೆ ಕಾಫಿ ತೋಟ ಮತ್ತು 35 ಎಕರೆ ಗದ್ದೆಯನ್ನು ಉದಾರವಾಗಿ ನೀಡಿದ್ದಾರೆ ಎಂದರು.


    ದಶಮಾನಗಳಿಂದ ಕಾಫಿ ತೋಟ ಮತ್ತು ಗದ್ದೆಗಳಿಂದ ಬರುವ ಆದಾಯವನ್ನು ಇತರ ಚರ್ಚ್‌ಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿತ್ತು. ಆದರೆ, 2024 ರಿಂದ ವಿರಾಜಪೇಟೆ ಚರ್ಚ್‌ಗಳ ಆಸ್ತಿಯ ಅಧಿಕಾರವನ್ನು ಮೈಸೂರಿನ ಪ್ರಧಾನ ಧರ್ಮ ಕೇಂದ್ರದ ಆಡಳಿತಾಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಇದೀಗ ಹೊಸ ವರಸೆಯಂತೆ, ಪರಿಪಾಲನ ಸಮಿತಿ, ಹಣಕಾಸು ಸಮಿತಿ ಹಾಗೂ ಭಕ್ತರಿಗೆ ಅರಿವಿಗೆ ಬಾರದಂತೆ ಪರರಿಗೆ ಭೋಗ್ಯ ನೀಡಿರುವುದಾಗಿ ಅದೇಶ ಹೊರಡಿಸಿದ್ದಾರೆ. ಇದು ಧರ್ಮಕೇಂದ್ರದ ಅಸಂಖ್ಯಾತ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತ ವಿಚಾರವಾಗಿದೆ. ಕೂಡಲೇ ಅದೇಶವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಭಕ್ತರಿಂದ ಸಾಮೂಹಿಕ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಮುಖಂಡರಾದ ಜೋಕಿಂ ರೋಡ್ರಿಗಸ್ಸ್, ಜ್ಯೂಡಿ ವಾಜ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts