More

    VIDEO: ಪತ್ನಿಯ ಅಗಲಿಕೆ ನಂತರ ಅಧೀರರಾಗಿದ್ದ ಚನ್ನವೀರ ಕಣವಿ- ಅವರ ಆಶಯದಂತೆ ಪಕ್ಕದಲ್ಲಿಯೇ ಸಮಾಧಿ

    ಧಾರವಾಡ: ಕರೊನಾ ಸೋಂಕಿನಿಂದ ಬಳಲುತ್ತಿದ್ದು, ತಿಂಗಳವರೆಗೆ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕವಿ ಚನ್ನವೀರ ಕಣವಿ ಇಂದು ಬೆಳಗ್ಗೆ ಎಲ್ಲರನ್ನೂ ಅಗಲಿದ್ದಾರೆ. ಎರಡು ವರ್ಷಗಳ ಹಿಂದೆ ಅಂದರೆ 2020 ಮೇ 22ರಂದು ಅವರ ಪತ್ನಿ ಸಾಹಿತಿಯೂ ಆಗಿದ್ದ ಶಾಂತಾದೇವಿ ಕಣವಿ (87) ಅವರು ಮೃತಪಟ್ಟಿದ್ದರು. ಅವರ ಅಗಲಿಕೆಯ ನಂತರ ಅಧೀರರಾಗಿದ್ದ ಚನ್ನವೀರ ಕಣವಿಯವರು ತಾವು ಮೃತಪಟ್ಟ ಬಳಿಕ ಪತ್ನಿಯ ಸಮಾಧಿಯ ಪಕ್ಕದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸುವಂತೆ ಮನೆಯವರಿಗೆ ತಿಳಿಸಿದ್ದರು.

    ಇದೀಗ ಅವರ ಮನವಿಯಂತೆಯೇ ಅಮ್ಮನ ಸಮಾಧಿ ಪಕ್ಕದಲ್ಲಿಯೇ ತಂದೆಯವರ ಅಂತ್ಯಸಂಸ್ಕಾರ ನಡೆಸುವುದಾಗಿ ಪುತ್ರ ಪ್ರಿಯದರ್ಶಿ ಹೇಳಿದ್ದಾರೆ.

    ತಮ್ಮ ತಂದೆ ಅನಾರೋಗ್ಯದಿಂದ ಜ. 14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಎಲ್ಲ ಅಂಗಾಂಗಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದವು. ಆದರೆ ಶ್ವಾಸಕೋಶಕ್ಕೆ ಸೋಂಕು ಇತ್ತು. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಪ್ರಿಯದರ್ಶಿ ಹೇಳಿದರು.

    ಕಣವಿ ಅವರ ಪಾರ್ಥಿವ ಶರೀರವನ್ನು ಕೆಸಿಡಿ ಆವರಣದಲ್ಲಿ ಇಡಲಾಗಿದೆ. ಮುಖ್ಯಮಂತ್ರಿ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರ ಅಂತಿಮ ದರ್ಶನಕ್ಕೆ ಧಾರವಾಡಕ್ಕೆ ಆಗಮಿಸುತ್ತಿದ್ದಾರೆ. ಕೆಸಿಡಿ ಕಾಲೇಜ್ ಆವರಣದಲ್ಲಿ ಸಂಜೆ 4ರವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

    ಇದೇ ವೇಳೆ ಅಂತಿಮ ದರ್ಶನಕ್ಕೆ ಆಗಮಿಸಿದ ಗದಗ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ‌, ‘ನಾಡು, ನುಡಿ ಕಾಳಜಿ ಅತಂತ್ಯ ಅನನ್ಯವಾಗಿದ್ದು. ಆಡಳಿತ ಭಾಷೆ ಕನ್ನಡ ಆಗಬೇಕೆಂಬ ಆಶಯ ಅವರಿಗಿತ್ತು. ಕನ್ನಡ ಮಾಧ್ಯನದಲ್ಲಿ ಉನ್ನತ ಶಿಕ್ಷಣ ದೊರೆಯಬೇಕೆಂಬ ಆಶಯ ಅವರದಿತ್ತು. ಸರ್ಕಾರ ಅವರ ಆಶಯ ಈಡೇರಿಸುವ ಕಾರ್ಯ ಮಾಡಬೇಕು , ಮರಣೋತ್ತರವಾದರೂ ರಾಷ್ಟ್ರಕವಿ ಘೋಷಣೆ ಮಾಡಬೇಕು’ ಎಂದು ಹೇಳಿದರು.

    ಕಣವಿ ಅವರ ಪಾರ್ಥಿವ ಶರೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts