More

    ಒಂದು ರೂಪಾಯಿ ದಂಡದ ವಿರುದ್ಧ ಪುನಃ ಸುಪ್ರೀಂ ಮೆಟ್ಟಿಲೇರಿದ ವಕೀಲ ಪ್ರಶಾಂತ್​ ಭೂಷಣ್​

    ನವದೆಹಲಿ: ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆಗಸ್ಟ್ 31ರಂದು ನ್ಯಾಯಾಲಯ ವಿಧಿಸಿದ್ದ ಒಂದು ರೂಪಾಯಿ ಶಿಕ್ಷೆಯ ಆದೇಶವನ್ನು ಪ್ರಶ್ನಿಸಿ ವಕೀಲ ಪ್ರಶಾಂತ್ ಭೂಷಣ್ ಅವರು ಸುಪ್ರೀಂಕೋರ್ಟ್‌ಗೆ ಪುನರ್​ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
    ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಅನ್ವಯ ಸೆಪ್ಟೆಂಬರ್ 14ರಂದು 1 ರೂಪಾಯಿ ದಂಡ ಪಾವತಿಸಿದ್ದ ಪ್ರಶಾಂತ್ ಭೂಷಣ್, ಇದೀಗ ಅದನ್ನು ಪ್ರಶ್ನಿಸಿ ಪುನರ್​ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದಾರೆ. ಅದೇ ರೀತಿ ಈ ಪ್ರಕರಣದ ವಿಚಾರಣೆಯನ್ನು ತೆರೆದ ಕೋರ್ಟ್​ನಲ್ಲಿಯೇ ನಡೆಸುವಂತೆ ಅವರು ಕೋರಿಕೊಂಡಿದ್ದಾರೆ.
    ನ್ಯಾಯಾಲಯ ಹಾಗೂ ನ್ಯಾಯಮೂರ್ತಿಗಳ ವಿರುದ್ಧ ಪ್ರಶಾಂತ್​ ಭೂಷಣ್​ ಅವರು ಮಾಡಿದ್ದ ಎರಡು ಟ್ವೀಟ್​ಗಳ ಹಿನ್ನೆಲೆಯಲ್ಲಿ ಇವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್​ ದಾಖಲಾಗಿತ್ತು.

    ಜೂನ್‌ 27ರಂದು ಮಾಡಿದ್ದ ನ್ಯಾಯಾಂಗ ನಿಂದನೆಯಾಗುವಂಥ ಟ್ವೀಟ್‌ನಲ್ಲಿ ಪ್ರಶಾಂತ್‌ ಭೂಷಣ್‌ ಅವರು, ತುರ್ತು ಪರಿಸ್ಥಿತಿ ಹೇರದೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ನಾಶ ಮಾಡಲಾಗಿದೆ. ಕಳೆದ ಆರು ವರ್ಷಗಳ ಇತಿಹಾಸ ನೋಡಿದರೆ ಇದು ತಿಳಿಯುತ್ತದೆ. ಈ ರೀತಿ ಪ್ರಜಾಪ್ರಭುತ್ವ ನಾಶ ಮಾಡುವಲ್ಲಿ ಸುಪ್ರೀಂಕೋರ್ಟ್‌ನ ಪಾತ್ರವನ್ನು ಸ್ಪಷ್ಟವಾಗಿ ನೋಡಬಹುದು. ಅದರಲ್ಲೂ ಕಳೆದ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಪಾತ್ರ ಇದರಲ್ಲಿ ಅತ್ಯಂತ ದೊಡ್ಡದಾಗಿದೆ ಎಂದಿದ್ದರು.

    ಜೂನ್‌ 29ರ ಟ್ವೀಟ್‌ನಲ್ಲಿ ನಾಗ್ಪುರದಲ್ಲಿ ರಾಜಭವನದಲ್ಲಿ ಬಿಜೆಪಿ ನಾಯಕನಿಗೆ ಸೇರಿದ 50 ಲಕ್ಷ ರೂಪಾಯಿ ಬೈಕ್‌ನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ್ದಾರೆ ಎಂದು ಆರೋಪಿಸಿದ್ದ ಅವರು, ದೇಶದ ನಾಗರಿಕರ ಮೂಲ ಹಕ್ಕಾದ ನ್ಯಾಯ ಸಿಗುವುದಕ್ಕೆ ಕರೊನಾ ಲಾಕ್‌ಡೌನ್‌ ಎಂದು ಹೇಳಿಕೊಂಡು ಕೋರ್ಟ್‌ ಕಾರ್ಯಕಲಾಪಕ್ಕೆ ರಜೆ ಹಾಕಿ ನ್ಯಾಯಮೂರ್ತಿಗಳು ಬೈಕ್‌ನಲ್ಲಿ ಜಾಲಿ ರೈಡ್ ಮಾಡುತ್ತಿದ್ದಾರೆ ಎಂದು ಟೀಕಿಸಿ ಇನ್ನೊಂದು ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದರು.

    ಇದನ್ನೂ ಓದಿ: ನನ್ನ ಅಂಗಾಂಗ ದಾನ ಮಾಡಲು ಪ್ರತಿಜ್ಞೆ ಮಾಡಿರುವೆ: ಟ್ವಿಟರ್​ನಲ್ಲಿ ಹೇಳಿಕೊಂಡ ಅಮಿತಾಭ್

    ಈ ಹಿನ್ನೆಲೆಯಲ್ಲಿ ಅವರಿಗೆ ಸುಪ್ರೀಂಕೋರ್ಟ್​ ತಪ್ಪಿತಸ್ಥ ಎಂದು ಘೋಷಿಸಿ ಒಂದು ರೂಪಾಯಿ ದಂಡಕ್ಕೆ ಆದೇಶಿಸಿತ್ತು.

    ಈ ದಂಡದ ಹಣವನ್ನು ಪಾವತಿ ಮಾಡಿದ್ದ ಪ್ರಶಾಂತ್​ ಭೂಷಣ್​, ನಾನು ದಂಡದ ಹಣವನ್ನು ಪಾವತಿ ಮಾಡಿದ್ದೇನೆ ಎಂದರೆ ಇದರರ್ಥ ನಾನು ನ್ಯಾಯಾಲಯದ ತೀರ್ಪನ್ನು ಸ್ವೀಕರಿಸಿದ್ದೇನೆ ಎಂದಲ್ಲ. ಸುಪ್ರೀಂಕೋರ್ಟ್​ನ ತೀರ್ಪಿನಂತೆ ಈ ಹಣವನ್ನು ಜಮಾ ಮಾಡಿದ್ದೇನಷ್ಟೇ. ಆದರೆ ತಮ್ಮ ಕೇಸನ್ನು ಬೇರೆ ಪೀಠಕ್ಕೆ ವರ್ಗಾಯಿಸಲು ಅನುಮತಿ ಕೋರಿ ಇದಾಗಲೇ ಶನಿವಾರ ಅರ್ಜಿ ಸಲ್ಲಿಸಿದ್ದೇನೆ. ಇದರ ಜತೆಗೆ ಈ ತೀರ್ಪಿನ ವಿರುದ್ಧ ಪುನರ್​ಪರಿಶೀಲನಾ ಅರ್ಜಿಯನ್ನೂ ಸಲ್ಲಿಸುತ್ತಿದ್ದೇನೆ ಎಂದಿದ್ದರು. ಅದರಂತೆ ಈಗ ಅರ್ಜಿ ಸಲ್ಲಿಸಿದ್ದಾರೆ.

    ಆಹಾರ ನೀಡಿ ಎಂದರೆ ಬೇರೆಬೇರೆ ಚಟುವಟಿಕೆ: ಸ್ವಿಗ್ಗಿ, ಜೊಮಾಟೊ ವಿರುದ್ಧ ಗೂಗಲ್​ ಗರಂ- ನೋಟಿಸ್​

    ನನ್ನ ಅಂಗಾಂಗ ದಾನ ಮಾಡಲು ಪ್ರತಿಜ್ಞೆ ಮಾಡಿರುವೆ: ಟ್ವಿಟರ್​ನಲ್ಲಿ ಹೇಳಿಕೊಂಡ ಅಮಿತಾಭ್

    ದಾಖಲೆ ಬರೆದ ಉತ್ತರ ಪ್ರದೇಶ: ಒಂದು ಕೋಟಿ ಜನರಿಗೆ ಕೋವಿಡ್​ ಪರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts