More

    VIDEO: ಪೈಲಟ್​ಗಳಿಗೆ ಕಾಣಿಸುತ್ತಿದ್ದಾನೆ ನಿಗೂಢ ವ್ಯಕ್ತಿ! ಆಕಾಶದಲ್ಲಿ ಹಾರುತ್ತಿರುವವ ಯಾರೀತ?​

    ಲಾಸ್​ ಏಂಜಲಿಸ್​: ವಿಮಾನಗಳು ಹಾರಾಡುವ ಎತ್ತರದಲ್ಲಿ ಮನುಷ್ಯನೊಬ್ಬ ಸದಾ ಆಕಾಶದಲ್ಲಿ ತೇಲಾಡುತ್ತಿದ್ದು, ಈ ಬಗ್ಗೆ ಪೈಲಟ್​ಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಜಾಟ್​ಪ್ಯಾಕ್​ (ಮನುಷ್ಯನಿಗೆ ಹಾರಲು ನೆರವಾಗುವ ಉಪಕರಣ) ಧರಿಸಿರುವ ಈ ನಿಗೂಢ ವ್ಯಕ್ತಿ ಈ ಹಿಂದೆಯೂ ಕಾಣಿಸಿಕೊಂಡಿದ್ದು, ಈತ ಯಾರು ಎಂಬ ಬಗ್ಗೆ ಇನ್ನೂ ಸಂದೇಹ ಪರಿಹಾರವಾಗಿಲ್ಲ. ಲಾಸ್​ ಎಂಜಲೀಸ್​ ವಿಮಾನ ನಿಲ್ದಾಣದ ಆಗಸದಲ್ಲಿ ವ್ಯಕ್ತಿಯೊಬ್ಬ ಜೆಟ್​ಪ್ಯಾಕ್​ ಅಳವಡಿಸಿಕೊಂಡು ಸುಮಾರು 3 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದುದಾಗಿ ಅಮೆರಿಕ ಏರ್​ಲೈನ್ಸ್​ ವಿಮಾನದ ಪೈಲಟ್​ಗಳು ಹೇಳಿದ್ದಾರೆ.

    ಕೆಲ ತಿಂಗಳ ಹಿಂದೆ ಕೂಡ ಈ ವ್ಯಕ್ತಿ ಕಾಣಿಸಿಕೊಂಡಿದ್ದ. ಸುಂಯ್​ ಎಂದು ಆಕಾಶದಲ್ಲಿ ತೇಲಾಡುತ್ತ ನಿಮಿಷ ಮಾತ್ರದಲ್ಲಿ ಕಣ್ಮರೆಯಾಗಿರುವ ಈ ನಿಗೂಢ ವ್ಯಕ್ತಿ ನಿನ್ನೆಯೂ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ಇವನೀಗ ಯಕ್ಷಪ್ರಶ್ನೆಯಾಗಿಯೇ ಉಳಿದಿದ್ದಾನೆ.

    ವಿಮಾನ ಹಾರಾಡುವ ಸಮುಯದಲ್ಲಿ, ವಿಮಾನಕ್ಕೆ ಕೇವಲ 300 ಗಜಗಳಷ್ಟು ಸಮೀಪದಲ್ಲಿ ಈ ವ್ಯಕ್ತಿ ಕಾಣಿಸಿಕೊಳ್ಳುತ್ತಿದ್ದಾನೆ. ಈತನನ್ನು ಈಗಾಗಲೇ ಇನ್ನೂ ಕೆಲ ಪೈಲಟ್​ಗಳು ನೀಡಿದ್ದಾರೆ. ನಿನ್ನೆ ಸಂಜೆ 6.30ರಲ್ಲಿ ವಿಮಾನ ನಿಲ್ದಾಣ ಸಮೀಪಿಸುತ್ತಿದ್ದಂತೆ ಲ್ಯಾಂಡಿಂಗ್​ಗೆ ಸಜ್ಜಾಗುತ್ತಿದ್ದಾಗ ಹಾರಾಡುತ್ತಿದ್ದ ವ್ಯಕ್ತಿಯನ್ನು ಗುರುತಿಸಿದ್ದಾಗಿ ಒಬ್ಬ ಪೈಲಟ್​ ಹೇಳಿದ್ದಾರೆ.

    ನಂತರ ಕೂಡಲೇ ವಿಮಾನ ಹಾರಾಟ ನಿಯಂತ್ರಣ ಕೇಂದ್ರದಿಂದ ಎಲ್ಲ ವಿಮಾನಗಳಿಗೂ ಮಾಹಿತಿ ರವಾನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    ಕಳೆದ ಸೆಪ್ಟೆಂಬರ್​ನಲ್ಲಿ ಮೊದಲು ಜೆಟ್​ಪ್ಯಾಕ್​ ಮನುಷ್ಯನನ್ನ ಪತ್ತೆ ಮಾಡಲಾಗಿತ್ತು. ಪೈಲೆಟ್​ಗಳು ಈತನನ್ನು ಗಮನಿಸಿದ್ದರು. ನಂತರ ಫೆಡರಲ್​ ಬ್ಯುರೋ ಆಫ್​ ಇನ್ವೆಸ್ಟಿಗೇಷನ್​​ ತನಿಖೆ ಪ್ರಾರಂಭಿಸಿತ್ತು. ನಂತರ ಅಕ್ಟೋಬರ್​​ನಲ್ಲಿ ಲಾಸ್​ ಎಂಜಲೀಸ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 6500 ಅಡಿ ಎತ್ತರದಲ್ಲಿ 2ನೇ ಬಾರಿಗೆ ಜೆಟ್​ಪ್ಯಾಕ್​ ಮನುಷ್ಯನನ್ನ ಗುರುತಿಸಲಾಗಿತ್ತು.

    ಈ ಸಮಯದಲ್ಲಿ ಪೈಲಟ್​ ಜೆಟ್​ಪ್ಯಾಕ್​ ಮನುಷ್ಯನ ವಿಡಿಯೋವನ್ನ ಸೆರೆಹಿಡಿದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಬಳಕೆದಾರರು ಹಂಚಿಕೊಂಡಿರುವ ವಿಡಿಯೋದಲ್ಲಿ ಮೋಡದ ಮಧ್ಯದಲ್ಲಿ ಚಲಿಸುತ್ತಿರೋದನ್ನ ಕಾಣಬಹುದಾಗಿದೆ.

    ಕಾರಿನ ಮೇಲೆ ನಾಲ್ಕು ಬೆರಳಿನ ವಿಚಿತ್ರ ಹೆಜ್ಜೆ ಗುರುತು: ಉತ್ತರ ಸಿಗದ ಪ್ರಶ್ನೆಗಳು..!

    ಸಂಸಾರಕ್ಕೆ ಒಪ್ಪದಾಕೆಗೆ ಡಿವೋರ್ಸ್​ ಕೊಟ್ರೆ ಕೂಲಿ ಹಣದಲ್ಲೂ ಭಾಗ ಕೊಡ್ಬೇಕಾ? ಮನೆಯ ಪಾಲೂ ನೀಡ್ಬೇಕಾ?

    ಪ್ರೈಮರಿ, ಹೈಸ್ಕೂಲ್​ ಪಾಸಾದವರಿಗೂ ಅಂಗನವಾಡಿಯಲ್ಲಿದೆ 101 ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts