More

    ಮನುಷ್ಯ ಜನ್ಮ ಸಕಲ ಜೀವರಾಶಿಗಳಲ್ಲಿ ಶ್ರೇಷ್ಠ


    ಯಾದಗಿರಿ: ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಪರಿಪಾಲನೆ ಮತ್ತು ಅಧ್ಯಾತ್ಮ ಚಿಂತನೆಯ ಜಗದ್ಗುರು ರೇಣುಕಾಚಾರ್ಯರಾದಿಯಾಗಿ ಬಸವಾದಿ ಶರಣಪರಂಪರೆ, ದಾಸ ಶ್ರೇಷ್ಠರು ಮತ್ತು ಸಂತ ಮಹಾತ್ಮರ ಇತಿಹಾಸದಲ್ಲಿ ಗುರು ಸ್ಥಾನಕ್ಕೆ ವಿಶೇಷ ಸ್ಥಾನ ನೀಡಲಾಗಿದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವಿರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

    ಗುರುಮಠಕಲ್ ಪಟ್ಟಣದ ನಾರಾಯಣಪೂರ ಬಡಾವಣೆಯಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿ ಪುನರ್ ಪ್ರತಿಷ್ಠಾಪನೆ ಮತ್ತು ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣದ ಮಂಗಲ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ನೆರದ ಭಕ್ತರಿಗೆ ಹಿತೋಪದೇಶ ನೀಡಿ, ಮನುಷ್ಯ ಜನ್ಮ ದೊಡ್ಡದು, ಅಲ್ಲದೆ ಸಕಲ ಜೀವರಾಶಿಗಳಲ್ಲಿ ಶ್ರೇಷ್ಠವೆನಿಸಿದೆ. ಇಂಥ ಜನ್ಮ ಪಡೆದಾಗ ಬದುಕಿನ ಮೌಲ್ಯಗಳಿಗೆ ಅರ್ಥ ಬರುವಂತೆ ಜೀವನ ಸಾಗಿಸಬೇಕು ಎಂದರು.

    ಧರ್ಮದ ಹೆಸರಲ್ಲಿ ಸಂಪ್ರದಾಯಗಳನ್ನು ಅವಹೇಳನ ಮಾಡಿ ಧರ್ಮಕ್ಕೆ ಅಪಚಾರ ಮಾಡವ ಕೃತ್ಯಗಳನ್ನು ಖಂಡಿಸಿದ ಜಗದ್ಗುರುಗಳು, ಆಧುನಿಕಯುಗದಲ್ಲಿ ಮಾನವನು ಗುರುಪರಂಪರೆಯ ಸಂಪ್ರದಾಯಗಳನ್ನು ಬದಿಗೊತ್ತಿ ಧಮರ್ಾಚರಣೆಯನ್ನು ಮರೆಯುತ್ತಿದ್ದಾನೆ ಎಂದು ಹೇಳಿದರು.

    ಗೋತ್ರಪುರುಷ ವೀರಭದ್ರೇಶ್ವರ ಮೂರ್ತಿ ಪುನರ್ ಪ್ರತಿಷ್ಠಾಪನೆಗಾಗಿ ಅನೇಕ ದಶಕಗಳ ಕಾಲದ ಕನಸನ್ನು ಪಂಚಾಚಾರ್ಯರ ಪುರಪ್ರವೇಶದಿಂದ ಪೂರ್ಣಗೊಂಡಿದೆ. ಅಡ್ಡಪಲ್ಲಕ್ಕಿ ಉತ್ಸವ, ಮುತ್ತೈದೆಯರಿಗೆ ಉಡಿತುಂಬಿ ಧರ್ಮಜಾಗೃತಿ ಮೂಡಿಸಿದ್ದು ನಮಗೆ ಮತ್ತು ವಿವಿಧ ಮಠಾಧೀಶರಿಗೆ ಸಂತಸ ತಂದಿದೆ. ಪಂಚಪೀಠಗಳ ಬಣ್ಣಗಳು ಸ್ತ್ರೀಯರ ಗೌರವದ ಪ್ರತೀಕವಾಗಿವೆ. ಆಧುನಿಕತೆಯ ಹೆಸರಿನಲ್ಲಿ ವೀರಶೈವ ಸಂಪ್ರದಾಯಗಳನ್ನು ಮೀರದಂತೆ ಕಿವಿಮಾತು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts