More

    ಪಾಕಿಸ್ತಾನದಿಂದ ಹಾರಿ ಬಂದು ಯೋಧನ ಮೇಲೆ ಕುಳಿತ ಪಾರಿವಾಳ! ಕಾಲಿನಲ್ಲಿ ನಿಗೂಢ ಸಂಖ್ಯೆಗಳು…

    ಅಮೃತಸರ: ಪಾಕಿಸ್ತಾನದಿಂದ ನಿಗೂಢ ಪಾರಿವಾಳವೊಂದು ಭಾರತಕ್ಕೆ ಹಾರಿಬಂದಿದ್ದು, ಇದೀಗ ಈ ಬಗ್ಗೆ ಸಾಕಷ್ಟು ತನಿಖೆ ಶುರುವಾಗಿದೆ, ಜತೆಗೆ ಈ ಪಾರಿವಾಳದ ವಿರುದ್ಧ ಎಫ್‌ಐಆರ್‌ ದಾಖಲೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

    ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಒಳನುಸುಳವವರನ್ನು ಹಿಡಿದು ಪ್ರಕರಣ ದಾಖಲಿಸುವುದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕೆಲಸ. ಇದೀಗ ಈ ಪರಿವಾಳ ಕೂಡ ಗಡಿಯೊಳಕ್ಕೆ ನುಸುಳಿದೆ. ಪಂಜಾಬ್‌ ಅಮೃತಸರದಲ್ಲಿನ ರೋರಾವಾಲಾ ಪೋಸ್ಟ್‌ನಲ್ಲಿರುವ ಗಡಿ ಭದ್ರತಾ ಪಡೆಯ ಜವಾನನ ಭುಜದ ಮೇಲೆ ಬಂದು ಕುಳಿತಿದೆ.

    ಪಾಕಿಸ್ತಾನದಿಂದ ಭಾರತದೊಳಗೆ ಹಾರಿ ಬಂದಿರುವ ಪಾರಿವಾಳದ ವಿರುದ್ಧ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಎಫ್ ಐಆರ್ ದಾಖಲಿಸುವಂತೆ ಒತ್ತಾಯ ಮಾಡಲಾಗುತ್ತಿದೆ, ಜತೆಗೆ ಈ ಕುರಿತು ಪೊಲೀಸ್ ಇಲಾಖೆಯ ಅಭಿಪ್ರಾಯವನ್ನು ಬಿಎಸ್‌ಎಫ್‌ ಕೇಳುತ್ತಿದೆ.

    ಪಾರಿವಾಳದ ಕಾಲಿನಲ್ಲಿ ಸಣ್ಣ ಪೇಪರ್ ತುಂಡನ್ನು ಕಟ್ಟಲಾಗಿದ್ದು, ಇದರಲ್ಲಿ ಕೆಲ ನಿಗೂಢ ಸಂಖ್ಯೆಗಳನ್ನು ಪತ್ತೆ ಮಾಡಲಾಗಿದೆ. ಪಾರಿವಾಳ ಗಡಿಯುದ್ದಕ್ಕೂ ಹಾರಾಟ ನಡೆಸಿದ್ದು, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ಬಿಎಸ್‌ಎಫ್‌ ಬೇಡಿಕೆ.

    ಪಾರಿವಾಳವು ಪಕ್ಷಿಯಾಗಿರುವುದರಿಂದ, ಅದರ ವಿರುದ್ಧ ಎಫ್‌ಐಆರ್ ದಾಖಲಿಸುವುದು ಸಮಂಜಸವಲ್ಲ ಎನ್ನುವುದು ನನ್ನ ಅಭಿಪ್ರಾಯ. ಈ ವಿಷಯವನ್ನು ನಮ್ಮ ಕಾನೂನು ತಜ್ಞರಿಗೆ ಹಸ್ತಾಂತರಿಸಿದ್ದೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧ್ರುವ್ ದಹಿಯಾ ಹೇಳಿದ್ದಾರೆ. ಪಾರಿವಾಳದ ಕಾಲಿಗೆ ಕಟ್ಟಲಾಗಿದ್ದ ಸಂಖ್ಯೆಯನ್ನು ವಿಶ್ಲೇಷಿಸಲಾಗುತ್ತಿದ್ದು, ಗೂಢಚರ್ಯೆ ಯತ್ನಗಳನ್ನು ಶಂಕಿಸಲಾಗುತ್ತಿದೆ ಎಂದಿದ್ದಾರೆ.

    ವೀಕೆಂಡ್‌ ಕರ್ಫ್ಯೂನಲ್ಲೇ ಮದುವೆ ಫಿಕ್ಸ್‌ ಆಗಿಬಿಟ್ಟಿದ್ಯಾ? ಹಾಗಿದ್ರೆ ಇವೆಲ್ಲಾ ನಿಯಮಗಳ ಪಾಲನೆ ಕಡ್ಡಾಯ…

    ಅಮ್ಮನಿಗೆ ತವರಿನಿಂದ ಬಂದ ಆಸ್ತಿಯಲ್ಲಿ ಮಕ್ಕಳಿಗೆ ಯಾವಾಗ, ಎಷ್ಟು ಭಾಗ ಪಾಲು ಸಿಗುತ್ತದೆ?

    ಸಿಡಿ ಕೇಸ್‌ ನಂತರ ತೆರೆಮರೆಗೆ ಸರಿದಿದ್ದ ಜಾರಕಿಹೊಳಿ ಮಾಡಿದರು ಟ್ವೀಟ್‌- ಸಂತಸದಲ್ಲಿ ತೇಲಾಡಿದ ಅಭಿಮಾನಿಗಳು

    ಮಗ ಸುಂದರ ಆಗಿರೋದೇ ತಪ್ಪಾಗಿಬಿಟ್ಟಿದೆ ಮೇಡಂ… ಅಹಂ ಮಿತಿಮೀರಿದೆ- ಸರಿ ದಾರಿಗೆ ತರೋದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts