More

    ವೀಕೆಂಡ್‌ ಕರ್ಫ್ಯೂನಲ್ಲೇ ಮದುವೆ ಫಿಕ್ಸ್‌ ಆಗಿಬಿಟ್ಟಿದ್ಯಾ? ಹಾಗಿದ್ರೆ ಇವೆಲ್ಲಾ ನಿಯಮಗಳ ಪಾಲನೆ ಕಡ್ಡಾಯ…

    ಬೆಂಗಳೂರು: ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅದರ ನಿಯಂತ್ರಣಕ್ಕೆ ಇದಾಗಲೇ ಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಣೆ ಮಾಡಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಮೇ 4ರವರೆಗೆ ಕರ್ಫ್ಯೂ ಘೋಷಣೆಯಾಗಿದೆ.

    ಆದರೆ ಇದಾಗಲೇ ಕೆಲವರ ಮದುವೆಗಳು ಈ ದಿನಗಳಲ್ಲಿ ಫಿಕ್ಸ್‌ ಆಗಿಬಿಟ್ಟಿದೆ. ಕರೊನಾ ಅಂತೂ ಸದ್ಯ ಮುಗಿಯುವಂತೆ ಕಾಣಿಸುತ್ತಿಲ್ಲ. ಆದ್ದರಿಂದ ಫಿಕ್ಸ್‌ ಆಗಿರುವ ಮುಹೂರ್ತವನ್ನು ಮುಂದೂಡಿದರೂ ಯಾವುದೇ ಪ್ರಯೋಜನವಿಲ್ಲ. ಕೇವಲ 50 ಮಂದಿಗೆ ಮದುವೆಗೆ ಅವಕಾಶ ಕಲ್ಪಿಸಿರುವುದು ಇದಾಗಲೇ ಹಲವರಿಗೆ ತಿಳಿದಿದೆ. ಆದರೆ ವೀಕೆಂಡ್‌ಗಳಲ್ಲಿ ಮದುವೆ ಫಿಕ್ಸ್‌ ಆಗಿದ್ದರೆ ಏನು ಮಾಡಬೇಕು?
    ಈ ಕುರಿತು ಸರ್ಕಾರದ ನಿಯಮದಲ್ಲಿ ಏನಿದೆ ನೋಡಿ:

    ಈ ಅವಧಿಯಲ್ಲಿ ಮದುವೆಯಾಗಬಹುದು, ಇದಾಗಲೇ ಮುಹೂರ್ತ ಫಿಕ್ಸ್‌ ಆಗಿದ್ದರೆ ಅಥವಾ ಮುಹೂರ್ತ ಇದ್ದರೆ ಮದುವೆ ಮಾಡಿಕೊಳ್ಳಲೇನೂ ಅಡ್ಡಿ ಇಲ್ಲ. ಆದರೆ ಮೊದಲೇ ಹೇಳಿದಂತೆ 50 ಮಂದಿಗೆ ಮಾತ್ರ ಅವಕಾಶ. ಆ 50 ಮಂದಿ ಯಾರು ಎಂಬುದನ್ನು ಮೊದಲೇ ಮದುಮಕ್ಕಳ ಕುಟುಂಬದವರು ಪಟ್ಟಿ ತಯಾರಿಸಬೇಕು. ಆ ಪಟ್ಟಿಯನ್ನು ಸ್ಥಳೀಯಾಡಳಿತಕ್ಕೆ ತೋರಿಸಿ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯ. ಮದುವೆ ಫೋಟೋಗ್ರಾಫರ್ಸ್, ಪುರೋಹಿತರು ಎಲ್ಲರೂ 50 ಜನರ ಪಟ್ಟಿಗೇ ಸೇರುತ್ತಾರೆ.

    ಪಟ್ಟಿಯಲ್ಲಿರುವ 50 ಜನರು ಅನುಮತಿ ಪಡೆದ ಪತ್ರ ತರಬೇಕು. ಇದರ ಜತೆಗೆ, ಮದುವೆ ಆಮಂತ್ರಣ ಪತ್ರಿಕೆ ಹಾಗೂ ಮದುವೆಗೆ ಹೋಗುವವರ ಐಡಿ ಕಾರ್ಡ್ ರೆಡಿ ಮಾಡಬೇಕು. ಇವುಗಳನ್ನು ಅಂದರೆ ಅನುಮತಿ ಪತ್ರ, ಆಮಂತ್ರಣ ಪತ್ರಿಕೆ ಹಾಗೂ ಐಡಿಕಾರ್ಡ್‌ಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಪೊಲೀಸರಿಗೆ ತೋರಿಸಿ ಪ್ರಯಾಣಿಸಬಹುದು.

    ಇಷ್ಟೇ ಸಾಲದು. ಮದುವೆ ಆಮಂತ್ರಣ ಪತ್ರಿಕೆಯ ಮೂಲ ಪ್ರತಿ ಪ್ರಯಾಣದ ವೇಳೆ ಜತೆಯಲ್ಲಿ ಇಟ್ಟುಕೊಂಡಿರಬೇಕು. ಮದುವೆಯ ಅತಿಥಿಗಳ ಲಿಸ್ಟ್‌ನಲ್ಲಿ ಇರುವವರು ಐಡಿ ತೋರಿಸಿದರಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಮದುವೆಗೆ ಹೋಗುವ ಕಾರಿನಲ್ಲಿ ಏಳೆಂಟು ಜನರನ್ನು ತುಂಬಿಸುವಂತಿಲ್ಲ. ಪಾಸ್ ಮತ್ತು ಐಡಿ ಕಾರ್ಡ್ ಬಳಸಿ ಕುಟುಂಬದ ಜತೆ ಸಂಚರಿಸಲು ಅವಕಾಶವಿಲ್ಲ. ಯಾರ ಹೆಸರಿನಲ್ಲಿ ಪಾಸ್ ಮತ್ತು ಐಡಿ ಕಾರ್ಡ್ ಇದೆಯೋ ಅವರಿಗಷ್ಟೇ ಸಂಚಾರಕ್ಕೆ ಅವಕಾಶ.

    ದೇವಸ್ಥಾನಗಳಲ್ಲಿ ‌ಮದುವೆಗೆ ಅನುಮತಿ ಇದೆ. 50 ಜನರ ಸಮ್ಮುಖದಲ್ಲಿ ಮದುವೆ ನಡೆಯಬೇಕು. ಉಳಿದ ನಿಯಮಗಳು ಅನ್ವಯ. ದೇವಸ್ಥಾನದ ಧಾರ್ಮಿಕ ಕಾರ್ಯಗಳನ್ನು ಅರ್ಚಕರು ಸೇರಿಕೊಂಡು ಮಾಡಬೇಕು. ಆದರೆ ಯಾವುದೇ ಸಾರ್ವಜನಿಕರು ಈ ಆಚರಣೆಯಲ್ಲಿ ಭಾಗಿಯಾಗಲು ನಿಷೇಧವಿದೆ. ಈ ಆದೇಶ ಇವತ್ತಿನಿಂದಲೇ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲಿ ಜಾರಿಯಾಗಲಿದೆ.

    ಸಿಡಿ ಕೇಸ್‌ ನಂತರ ತೆರೆಮರೆಗೆ ಸರಿದಿದ್ದ ಜಾರಕಿಹೊಳಿ ಮಾಡಿದರು ಟ್ವೀಟ್‌- ಸಂತಸದಲ್ಲಿ ತೇಲಾಡಿದ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts