More

    ಸುಪ್ರಸಿದ್ಧ ನಟಿ ಮರ್ಲಿನ್‌ ಮನ್ರೋಳನ್ನು ನೆನಪಿಸಿದ ಗೂಬೆ- ವಿಡಿಯೋ ವೈರಲ್​

    ವಾಷಿಂಗ್ಟನ್​: ಮರ್ಲಿನ್‌ ಮನ್ರೋ… ಯಾರಿಗೆ ತಾನೇ ಈ ಹೆಸರು ಗೊತ್ತಿಲ್ಲ? ಅಮೆರಿಕದ ನಟಿ, ಗಾಯಕಿ ಮತ್ತು ರೂಪದರ್ಶಿಯಾಗಿದ್ದ .ಈಕೆ 50ರ ದಶಕದಿಂದಲೂ ಜಗತ್ಪ್ರಸಿದ್ಧಿ ಹೊಂದಿದಾಕೆ. ಅದರಲ್ಲಿ 1954ರಲ್ಲಿ ಈಕೆ ಕೊಟ್ಟ ಒಂದು ಪೋಸ್​ನಿಂದ ರಾತ್ರೋರಾತ್ರಿ ಮನೆಮಾತಾದವಳು.

    ಸಬ್‌ವೇ ಗ್ರೇಟ್ ಒಂದರ ಮೇಲೆ ನಿಂತುಕೊಂಡು ಈಕೆ ಕೊಟ್ಟಿರುವ ಪೋಸ್​ ಇಂದಿಗೂ ಎಲ್ಲೆಡೆ ಕಾಣಬಹುದಾಗಿದೆ. ಹಲವಾರು ಮಂದಿಯ ಮನೆಗಳ ಗೋಡೆಗಳ ಮೇಲೆಯೂ ಈಕೆಯ ಇದೇ ಭಂಗಿಯ ಫೋಟೋ ಇದ್ದರೆ, ಹಲವಾರು ಕಡೆಗಳಲ್ಲಿ ಇದೇ ಭಂಗಿಯ ಮೂರ್ತಿಗಳನ್ನೂ ಕೆತ್ತಲಾಗಿದೆ.

    ಕೇವಲ 36 ವರ್ಷ ಬದುಕಿದ್ದ ಈ ಮಾದಕನಟಿ ಅಷ್ಟು ಚಿಕ್ಕವಯಸ್ಸಿನಲ್ಲಿಯೇ ಇಷ್ಟೊಂದು ವಿಖ್ಯಾತಿ ಗಳಿಸಿದ್ದಳು. ಇವಳ ಇದೇ ರೀತಿಯ ಪೋಸ್​ನಂತ ತಮ್ಮ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದು ಹಪಹಪಿಸುವವರು ಸಹಸ್ರಾರು ಮಂದಿ. ಆದರೆ ಆ ಪೋಸ್​ ಮಾತ್ರ ಇದುವರೆಗೂ ಯಾರಿಂದಲೂ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.

    ಸುಪ್ರಸಿದ್ಧ ನಟಿ ಮರ್ಲಿನ್‌ ಮನ್ರೋಳನ್ನು ನೆನಪಿಸಿದ ಗೂಬೆ- ವಿಡಿಯೋ ವೈರಲ್​

    ಆದರೆ ಗೂಬೆಯೊಂದು ಇದೀಗ ಫೋಟೋಗೆ ಪೋಸ್​ ನೀಡಿದ್ದು, ಅದು ಮರ್ಲಿನ್​ ಮನ್ರೋಳನ್ನೇ ನೆನಪಿಸುವಂತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದೆ. ಹಾಗೆ ನೋಡಿದರೆ ಮರ್ಲಿನ್​ ನಿಂತ ಭಂಗಿಗೂ ಈ ಗೂಬೆ ಕುಳಿತ ಭಂಗಿಗೂ ಅಂಥದ್ದೇನು ಹೋಲಿಕೆಯಿಲ್ಲ. ಆದರೆ ಕೆಲ ಸೆಕೆಂಡುಗಳ ಕಾಲ ಮರ್ಲಿನ್​ ಪೋಸ್​ ಕೊಟ್ಟ ಜಾಗದ ಸಮೀಪ ಕೂತಲ್ಲೇ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಅನೇಕ ಮಂದಿಯ ಕಣ್ಣಿಗೆ ಮರ್ಲಿನ್​ನನ್ನು ನೆನಪಿಸುತ್ತಿದೆಯಂತೆ.

    ಖುದ್ದು ಮನುಷ್ಯರಲ್ಲೇ ಸಾಕಷ್ಟು ಮಂದಿ ಇದೇ ಪೋಸ್ ‌ಅನ್ನು ಅನುಕರಿಸಲು ವಿಫಲರಾಗಿರುವಾಗ ಗೂಬೆಯೊಂದು ಹೀಗೆ ಪರ್ಫೆಕ್ಟ್‌ ಆಗಿ ಪೋಸ್‌ ಕೊಟ್ಟಿದೆ ಎಂದು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. 37 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಗೂಬೆಯು ತನ್ನ ರೆಕ್ಕೆಗಳನ್ನು ಸೊಗಸಾಗಿ ಹರಡಿರುವುದನ್ನು ಇಲ್ಲಿ ನೋಡಬಹುದಾಗಿದೆ.

    ತಂಗಿಯ ಮದುವೆಗೆ ಮೃತಪಟ್ಟ ತಂದೆಯನ್ನು ಕರೆತಂದ ಅಕ್ಕ- ಸಹೋದರಿ ಪ್ರೀತಿಗೆ ವಿವಾಹ ಮಂಟಪದಲ್ಲಿ ಕಣ್ಣೀರಧಾರೆ

    ‘ಹಿಂದುಸ್ತಾನದಲ್ಲಿ ಮುಸ್ಲಿಂ ಆಗಿ ಹುಟ್ಟಿರುವ ಹೆಮ್ಮೆ ನನ್ನದು- ಸ್ನೇಹಪರತೆ ಮೋದಿಯಿಂದ ಕಲಿಯಬೇಕು’

    ಕೈದಿ ಜತೆ ಲವ್​, ಅಧಿಕಾರಿಯ ಕೈ ಬೆಚ್ಚಗೆ ಮಾಡಿ ಜೈಲಲ್ಲೇ ಸೆಕ್ಸ್​, ಮುಂದೆ ಆದದ್ದೆಲ್ಲಾ ಅನಾಹುತ…!

    ಎಟಿಎಂಗೆ ಹಾಕಬೇಕಿದ್ದ ಹಣದೊಂದಿಗೆ ಆಂಟಿ ಜತೆ ಎಸ್ಕೇಪ್​ ಆದ ಇಬ್ಬರು ಮಕ್ಕಳ ತಂದೆ!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts