More

    ಜೀವ ಉಳಿಸಿದ ಸರ್ಕಾರಕ್ಕೆ ಹೇಗೆ ಥ್ಯಾಂಕ್ಸ್​ ಹೇಳುವುದೋ ತಿಳಿಯುತ್ತಿಲ್ಲ; ಇನ್ಮುಂದೆ ನಮ್ಮ ಮಗು ‘ಆಪರೇಷನ್​ ಗಂಗಾ’

    ಯೂಕ್ರೇನ್​: ಯೂಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕಾಪಾಡುವ ನಿಟ್ಟಿನಲ್ಲಿ ಭಾರತ ಸರ್ಕಾರ ಆಪರೇಷನ್​ ಗಂಗಾ ಯೋಜನೆ ರೂಪಿಸಿದ್ದು, ಇದಾಗಲೇ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ಭಾರತೀಯ ನಾಗರಿಕರನ್ನು ರಕ್ಷಿಸಿದೆ. ಇನ್ನೂ ಈ ಯೋಜನೆ ಚಾಲ್ತಿಯಲ್ಲಿ ಇದ್ದು, ಭಾರತಕ್ಕೆ ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ.

    ಯೂಕ್ರೇನ್​ನಲ್ಲಿ ನಡೆಯುತ್ತಿರುವ ಭಯಾನಕ ಯುದ್ಧವನ್ನು ಕಣ್ಣಾರೆ ಕಂಡು, ಅಲ್ಲಿಂದ ಜೀವಂತವಾಗಿ ಮರಳುತ್ತೆವೆಯೋ, ಇಲ್ಲವೋ ಎಂಬ ಭರವಸೆಯನ್ನೇ ಕಳೆದುಕೊಂಡಿದ್ದ ಅದೆಷ್ಟೋ ಮಂದಿ ಕೇಂದ್ರ ಸರ್ಕಾರಕ್ಕೆ ಕೃತಜ್ಱತೆ ಸಲ್ಲಿಸುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಕೇರಳದ ಅಭಿಜಿತ್. ಇವರು ಮತ್ತು ಇವರ 9 ತಿಂಗಳ ಗರ್ಭಿಣಿ ಪತ್ನಿ ಯೂಕ್ರೇನ್​ನಲ್ಲಿ ಸಿಕ್ಕಿಬಿದ್ದಿದ್ದರು. ಕೀವ್​ನಲ್ಲಿ ರೆಸ್ಟೋರೆಂಟ್​ ನಡೆಸುತ್ತಿದ್ದಾರೆ ಈ ದಂಪತಿ.

    ಅವರನ್ನು ಆಪರೇಷನ್​ ಗಂಗಾ ಮೂಲಕ ಪೋಲ್ಯಾಂಡ್‍ನ ರೆಜ್‍ಜೋವ್ನಲ್ಲಿ ಭಾರತೀಯ ರಾಯಭಾರಿ ಕಚೇರಿ ಸ್ಥಾಪಿಸಿರುವ ಆಶ್ರಯ ತಾಣಕ್ಕೆ ಕರೆತರಲಾಗಿದ್ದು, ಅಲ್ಲಿಯ ಆಸ್ಪತ್ರೆಗೆ ತುಂಬು ಗರ್ಭಿಣಿ ಪತ್ನಿಯನ್ನು ಸೇರಿಸಲಾಗಿದೆ. ನನ್ನ ಹೆಂಡತಿ ಮತ್ತು ಮಗು ಆರೋಗ್ಯದಿಂದಿದ್ದಾರೆ, ನಾವು ಬದುಕಿ ಬರುತ್ತೇವೆ ಎಂಬ ಆಸೆಯೇ ಉಳಿದುಕೊಂಡಿರಲಿಲ್ಲ. ಯುದ್ಧದಂಥ ಭೀಕರ ಸ್ಥಿತಿಯಲ್ಲಿಯೂ ಭಾರತ ಸರ್ಕಾರ ನಮ್ಮ ಜೀವವನ್ನು ಕಾಪಾಡಿದ್ದಕ್ಕೆ ಅದೆಷ್ಟು ಧನ್ಯವಾದ ಸಲ್ಲಿಸಬೇಕೋ ತಿಳಿಯುತ್ತಿಲ್ಲ.

    ‘ನನ್ನ ಹೆಂಡತಿಯ ಹೆರಿಗೆಗೆ ಮಾರ್ಚ್ 26ರ ದಿನವನ್ನು ನಿಗದಿ ಪಡಿಸಲಾಗಿದೆ, ಮತ್ತು ನಾನು ಹುಟ್ಟಲಿರುವ ಆ ನನ್ನ ಮಗುವಿಗೆ, ಭಾರತ ಸರಕಾರ ಆರಂಭಿಸಿರುವ ರಕ್ಷಣಾ ಕಾರ್ಯಾಚರಣೆಯ ಹೆಸರನ್ನು ಆಧರಿಸಿ ಗಂಗಾ ಎಂಬ ಹೆಸರನ್ನು ಇಡಲು ನಿರ್ಧರಿಸಿದ್ದೇನೆ. ಅದಕ್ಕೆ ಆಪರೇಷನ್​ ಗಂಗಾ ಎಂದೇ ಕರೆಯುತ್ತೇವೆ ಎಂದಿದ್ದಾರೆ. ಪತ್ನಿಗೆ ಡೆಲವರಿ ಅವಧಿ ಸಮೀಪ ಬಂದಿದ್ದ ಹಿನ್ನೆಲೆಯಲ್ಲಿ ವೈದ್ಯಕೀಯ ಸುರಕ್ಷತೆಯ ಕಾರಣಗಳಿಂದಾಗಿ ಪೋಲ್ಯಾಂಡ್‍ನಲ್ಲಿಯೇ ಉಳಿಯಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

    ಕಾಮತೃಷೆ ತೀರಿಸಿಕೊಳ್ಳಲು ಕಳ್ಳತನ ಮಾಡ್ತಿದ್ದ 70 ವರ್ಷದ ಅಜ್ಜ ಅಂದರ್​! ಈತನ ಮೊಬೈಲ್​ನಲ್ಲಿದೆ ರಹಸ್ಯ

    VIDEO: ಯೂಕ್ರೇನ್​ನಿಂದ ತಪ್ಪಿಸಿಕೊಳ್ತಿರುವಾಗ ಗುಂಡು ಭುಜ ಹೊಕ್ಕಿತು, ಕಾಲು ಮುರಿದಿದೆ- ವಿದ್ಯಾರ್ಥಿಯ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts