More

    ಬೇರೆಯವರ ಫೋಟೋ, ವಿಡಿಯೋ ಇನ್ಮುಂದೆ ಟ್ವಿಟರ್‌ನಲ್ಲಿ ಹಂಚಿಕೊಳ್ಳುವಂತಿಲ್ಲ- ಹೊಸ ನಿಯಮದಲ್ಲಿ ಏನಿದೆ ನೋಡಿ…

    ನವದೆಹಲಿ: ಇನ್ನುಮುಂದೆ ಟ್ವಿಟರ್‌ನಲ್ಲಿ ಯಾರೇ ಆಗಲೇ ಬೇರೆ ವ್ಯಕ್ತಿಯ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಆ ವ್ಯಕ್ತಿಯ ಅನುಮತಿ ಇಲ್ಲದೆಯೇ ಹಂಚಿಕೊಳ್ಳುವಂತಿಲ್ಲ. ಈ ಕುರಿತು ಟ್ವಿಟರ್‌ ಪ್ರಕಟಣೆ ಹೊರಡಿಸಿದೆ.

    ಇಲ್ಲಿಯವರೆಗೆ ಯಾರು ಯಾರದ್ದೇ ಫೋಟೋ ಅಥವಾ ಅವರಿಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್‌ ಮಾಡಬಹುದಿತ್ತು. ಆದರೆ ಇನ್ನುಮುಂದೆ ಆ ರೀತಿ ಆಗುವುದಿಲ್ಲ ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ.
    ಇದಕ್ಕೂ ಮುನ್ನ ಟ್ವಿಟರ್‌ ಬೇರೆಯವರ ಫೋನ್ ನಂಬರ್, ವಿಳಾಸ, ಗುರುತಿನ ಚೀಟಿಯಂತಹ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಷೇಧಿಸಿತ್ತು. ಇದೀಗ ಫೋಟೋ ಮತ್ತು ವಿಡಿಯೋಗಳಿಗೂ ಈ ನಿಯಮ ಜಾರಿ ಮಾಡಲಾಗಿದೆ.

    ಈ ಕುರಿತು ಬ್ಲಾಗ್ ಪೋಸ್ಟ್‌ನಲ್ಲಿ ಸ್ಪಷ್ಟ ಮಾಹಿತಿ ನೀಡಿರುವ ಟ್ವಿಟರ್‌, ಟ್ವಿಟರ್‌ ಬಳಕೆದಾರರು ಪ್ರತಿ ಬಾರಿ ಫೋಟೋ ಅಥವಾ ವೀಡಿಯೋ ಅಪ್ಲೋಡ್ ಮಾಡುವಾಗಲೂ ನಾವು ಪರಾಮರ್ಶೆ ಮಾಡಲು ಆಗುವುದಿಲ್ಲ. ಒಂದು ವೇಳೆ ಚಿತ್ರಿತ ವ್ಯಕ್ತಿಗಳು ಅಥವಾ ಅಧಿಕೃತ ಪ್ರತಿನಿಧಿಗಳು ತಮ್ಮ ಖಾಸಗಿ ಚಿತ್ರ ಅಥವಾ ವೀಡಿಯೋವನ್ನು ಹಂಚಿಕೊಳ್ಳಲು ತಾವು ಒಪ್ಪಿಗೆ ನೀಡಿಲ್ಲ ಎಂದು ನಮಗೆ ಸೂಚಿಸಿದಾಗ, ನಾವು ಅದನ್ನು ಯಾವುದೇ ಸೂಚನೆ ಇಲ್ಲದೆಯೇ ತೆಗೆದುಹಾಕುತ್ತೇವೆ ಎಂದು ಟ್ವೀಟರ್ ಹೇಳಿದೆ.

    ಮೈಕ್ರೋಬ್ಲಾಗಿಂಗ್ ಕಂಪೆನಿ ಟ್ವಿಟ್ಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ಸೋಮವಾರ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿದಿದ್ದು, ಟ್ವೀಟರ್‌ನ ನೂತನ ಸಿಇಒ ಆಗಿ ಭಾರತೀಯ ಮೂಲದ ಪರಾಗ್ ಅಗರ್‌ವಾಲ್ ಅಧಿಕಾರ ವಹಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇಂಥದ್ದೊಂದು ಹೊಸ ನಿಯಮ ಜಾರಿಗೊಳಿಸಲಾಗಿದೆ.

    ಪ್ರೀತಿಗೆ ಪಾಲಕರ ವಿರೋಧ- ಕೈಕೈ ಹಿಡಿದು ಕಪಿಲಾ ನದಿಗೆ ಹಾರಿದ ಚಾಮರಾಜನಗರದ ಅಪ್ರಾಪ್ತರು!

    VIDEO: ಆಸ್ತಿ ಪಡೆದು ಹೆತ್ತವರನ್ನು ಬೀದಿಗೆ ತಳ್ಳಿದ ಪುತ್ರರು! ರಕ್ಷಣೆ ಕೊಟ್ಟ ಪುತ್ರಿಯರಿಗೂ ಚಿತ್ರಹಿಂಸೆ ನೀಡಿದ ‘ವಂಶೋದ್ಧಾರಕರು’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts