ಮನೆಯಂಗಳದ ಸಸಿ ಕಿತ್ತಳೆಂದು ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ದಂಪತಿ!

fire
ಸಾಂದರ್ಭಿಕ ಚಿತ್ರ
Published on

ಬೆಗುಸರಾಯ್ (ಬಿಹಾರ): ಮನೆಯ ಅಂಗಳದಲ್ಲಿ ಬೆಳೆದಿದ್ದ ಸಸಿಯೊಂದನ್ನು ಆಟವಾಡುತ್ತಿದ್ದ ಬಾಲಕಿ ಕಿತ್ತ ಸಿಟ್ಟಿಗೆ ಆಕೆಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುವ ಭೀಕರ ಘಟನೆ ಬಿಹಾರದ ಬೆಗುಸರಾಯ್​ ಎಂಬಲ್ಲಿ ನಡೆದಿದೆ.

12 ವರ್ಷದ ಬಾಲಕಿಯನ್ನು ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದಾನೆ ಸಿಖಂದರ್ ಯಾದವ್ ಎಂಬ ಪಾಪಿ. ಬೇಗುಸರಾಯ್ ಜಿಲ್ಲೆಯ ಸಿವರಾಣ ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ.

12 ವರ್ಷದ ಬಾಲಕಿ ಈತನ ಮನೆಯ ಎದುರು ಆಟವಾಡುತ್ತಿದ್ದಳು. ಈ ವೇಳೆ ಸಿಖಂದರ್ ಮನೆಯ ಎದುರಿಗೆ ಇದ್ದ ಒಂದು ಸಸಿ ಆಕೆಯ ಗಮನ ಸೆಳೆದಿದೆ. ಅದನ್ನು ಕೀಳಬಾರದು ಎನ್ನುವುದನ್ನೂ ತಿಳಿಯದ ಬಾಲಕಿ ನೋಡಲು ಚೆನ್ನಾಗಿದ್ದ ಕಾರಣ ಅದನ್ನು ಕಿತ್ತುಬಿಟ್ಟಿದ್ದಾಳೆ.

ಸಸಿ ಕಿತ್ತದ್ದನ್ನು ಕಂಡು ಕೆಂಡಾಮಂಡಲನಾದ ಸಿಕಂದರ್​ ಮಾತ್ರವಲ್ಲದೇ ಆತನ ಪತ್ನಿ ಮತ್ತು ಆತನ ಮಗಳು ಬಾಲಕಿ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಸಾಲದು ಎಂಬಂತೆ ಸಿಕಂದರ್​ ಮನೆಯಲ್ಲಿದ್ದ ಸೀಮೆ ಎಣ್ಣೆ ತಂದು ಬಾಲಕಿಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಇದಕ್ಕೆ ಪತ್ನಿ ಮತ್ತು ಮಗಳೂ ಸಾಥ್​ ನೀಡಿದ್ದಾರೆ!

ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ಹೇಳಿದ್ದಾರೆ. ಸಿಖಂದರ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬೇಗುಸರಾಯ್ ಪೊಲೀಸ್ ವರಿಷ್ಠಾಧಿಕಾರಿ ನಿಶಿತ್ ಪ್ರಿಯಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net