More

    ಕೊನೆಗೂ ಬದುಕಲಿಲ್ಲ ಕಿಡ್ನಾಪ್‌ ಆದ ಮೈಸೂರಿನ ಬಾಲಕ: ಶೋಕಿಗಾಗಿ ಬಲಿ ಪಡೆದ ಕೊಲೆಗಾರ?

    ಮೈಸೂರು: ಕಳೆದ ಗುರುವಾರ ಪಟಾಕಿ ತರಲು ಹೋಗಿದ್ದ ಮೈಸೂರು ಜಿಲ್ಲೆಯ ಬಾಲಕನ ಅಪಹರಣ ಪ್ರಕರಣ ಇದೀಗ ಹುಣಸೂರು ತಾಲೂಕಿನ ಹನಗೋಡು ಜನರನ್ನು ದುಃಖದಲ್ಲಿ ಮುಳುಗಿಸಿದೆ.

    ಕಾರ್ತಿಕ್ ಎಂಬ 10 ವರ್ಷದ ಬಾಲಕ ಕೊಲೆಯಾಗಿದ್ದಾನೆ. ತರಕಾರಿ ಹೋಲ್‌ಸೆಲ್ ಉದ್ಯಮಿ ನಾಗರಾಜ್ ಅವರ ಮಗನಾಗಿದ್ದ ಕಾರ್ತಿಕ್‌ ರಾತ್ರಿ 7.30ರ ವೇಳೆ ಪಟಾಕಿ ತರಲು ಹೋದ ಸಮಯದಲ್ಲಿ ಕಿಡ್ನಾಪ್‌ ಆಗಿದ್ದ.

    ನಂತರ ತಂದೆಗೆ ಕರೆ ಮಾಡಿ 4 ಲಕ್ಷ ರೂ. ತರುವಂತೆ ಫೋನ್ ಕಾಲ್ ಮಾಡಿದ್ದರು. ಕುಟುಂಬಸ್ಥರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅಂದು ರಾತ್ರಿಯಿಂದಲೇ ತನಿಖೆ ಶುರು ಮಾಡಲಾಗಿತ್ತು. ಇದು ತಿಳಿಯುತ್ತಲೇ ದುಷ್ಕರ್ಮಿಗಳು ಬಾಲಕನನ್ನು ಕೊಂದು ಎಸೆದು ಹೋಗಿದ್ದಾರೆ.

    ಐಪಿಎಲ್ ಬೆಟ್ಟಿಂಗ್ ಸೇರಿದಂತೆ ಹಲವಾರು ಚಟಕ್ಕೆ ಬಿದ್ದಿದ್ದ ದಾಸನಪುರ ನಿವಾಸಿ ಜವರಯ್ಯ ಈ ಕೃತ್ಯ ಎಸಗಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಶೋಕಿಗೆ ಬಿದ್ದು ಈತ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಸಾಲ ತೀರಿಸಲು ಬಾಲಕನ ಅಪಹರಣ ಮಾಡಿ ಕೊನೆಗೆ ಸಿಕ್ಕಿಬೀಳುವ ಭಯದಿಂದ ಕೊಲೆ ಮಾಡಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿದ ಶಾಸಕ ಎಚ್.ಪಿ.ಮಂಜುನಾಥ್, ‘ಬಾಲಕನ ತಂದೆ ನಾಗರಾಜ್ ನನ್ನ ಸ್ನೇಹಿತ. ಕಾರ್ತಿಕ್ ಅಪಹರಣವಾದ ತಕ್ಷಣ ನನಗೆ ವಿಚಾರ ಗೊತ್ತಾಗಿ ಎಸ್ಪಿ, ಎಎಸ್ಪಿಗೆ ಮಾತನಾಡಿದ್ದೆ. ಪೊಲೀಸ್ ಅಧಿಕಾರಿಗಳು ಕಿಡ್ನಾಪ್ ಆಗಿರುವುದು ಗೊತ್ತಾದ ಮರು ಕ್ಷಣದಿಂದಲೇ ತೀವ್ರ ಹುಡುಕಾಟ ನಡೆಸಿದ್ದರು. ಪೊಲೀಸರ ಅಷ್ಟೆಲ್ಲ ಶ್ರಮದ ನಡುವೆಯೂ ಬಾಲಕ ಉಳಿಯಲಿಲ್ಲ. ಇದುವರೆಗೆ ಮೂರ್ನಾಲ್ಕು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಈ ಪೈಕಿ ಜವರಯ್ಯನ ಬಗ್ಗೆ ಹೆಚ್ಚು ಶಂಕೆ ಇದೆ’ ಎಂದಿದ್ದಾರೆ.

    ‘ಜವರಯ್ಯ ಈ ಹಿಂದೆ ಐಸ್​ ಕ್ರೀಮ್ ಮಾರಾಟ ಮಾಡುತ್ತಿದ್ದ. ಈಗ ಐಪಿಎಲ್ ಬೆಟ್ಟಿಂಗ್, ವ್ಯಭಿಚಾರ ಏನೇನೋ ಇತ್ತು ಅಂತಿದ್ದಾರೆ. ಸಾಲ ತೀರಿಸುವ ಸಲುವಾಗಿ ಕಿಡ್ನಾಪ್ ಮಾಡಿದ್ದ ಅಂತ ಗೊತ್ತಾಗಿದೆ. ಇನ್ನಷ್ಟು ಮಾಹಿತಿ ಪೊಲೀಸ್ ತನಿಖೆಯಿಂದ ಹೊರ ಬರಬೇಕಿದೆ’ ಎಂದು ಮಂಜುನಾಥ್‌ ಮಾಹಿತಿ ನೀಡಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡುವ ಮೂಲಕ ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್‌)

    VIDEO: ‘ಪವರ್‌ ಸ್ಟಾರ್‌… ಯೇ… ಪವರ್‌ಸ್ಟಾರ್‌’ ಎಂದು ಕರೆದ ಪುಟಾಣಿ: ಪುನೀತ್‌ ರಿಯಾಕ್ಷನ್‌ಗೆ ಅಭಿಮಾನಿಗಳು ಫಿದಾ…

    ಡ್ರಗ್ಸ್‌ ಕೇಸ್‌ನಲ್ಲಿ ಶಾರುಖ್‌ ಪುತ್ರ ಸಿಕ್ಕಿಬೀಳ್ತಿದ್ದಂತೆಯೇ ರಾಹುಲ್‌ ಬರೆದರು ಪತ್ರ: ಜಾಲತಾಣದಲ್ಲಿ ಭಾರಿ ವೈರಲ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts