More

    ಗಂಡನ ಕೊಲೆ ಮಾಡಿ, ಮಂಚದ ಕೆಳಗೆ ಬಾಕ್ಸ್​ನಲ್ಲಿಟ್ಟು ಅಲ್ಲಿಯೇ ರಾತ್ರಿ ಕಳೆದಳು!

    ಜೈಪುರ: ದಿನವೂ ದೌರ್ಜನ್ಯ ನೀಡುತ್ತಿದ್ದ ಗಂಡನ ಜತೆ ಸಂಸಾರ ಮಾಡಲು ಆಗದೇ, ನಿತ್ಯವೂ ಹಿಂಸೆಯನ್ನು ತಡೆದುಕೊಳ್ಳಲು ಆಗದ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಲೆ ಮಾಡಿ, ಮಂಚದ ಬಾಕ್ಸ್​ನಲ್ಲಿಯೇ ಬಚ್ಚಿಟ್ಟಿದ್ದಿದ ಘಟನೆ ರಾಜಸ್ಥಾನದ ಜೈಪುರದ ಬಳಿ ನಡೆದಿದೆ.

    28 ವರ್ಷದ ನೀರಜಾ ಎಂಬ ಮಹಿಳೆ ತನ್ನ 34 ವರ್ಷದ ಗಂಡ ನಿರ್ಮಲ್ ಸಿಂಗ್ ಎಂಬಾತನನ್ನು ಕೊಲೆ ಮಾಡಿದ್ದಾಳೆ. ನಂತರ ಸುಮಾರು 28 ಗಂಟೆಗಳ ಕಾಲ ಆ ಮೃತದೇಹವನ್ನು ತನ್ನ ಮಂಚದ ಕೆಳಗೆ ಬಾಕ್ಸ್​ನಲ್ಲಿ ಬಚ್ಚಿಟ್ಟು ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಾಳೆ.

    ಅಷ್ಟಕ್ಕೂ ಆಗಿದ್ದೇನೆಂದರೆ, ಸಣ್ಣಪುಟ್ಟ ವಿಷಯಕ್ಕೆ ದಂಪತಿ ನಡುವೆ ಮೇಲಿಂದ ಮೇಲೆ ಜಗಳ ನಡೆಯುತ್ತಿತ್ತು. 2 ದಿನಗಳ ಹಿಂದೆ ಕೂಡ ಭಾರಿ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ವಿಪರೀತಕ್ಕೆ ಹೋಗಿದೆ.

    ಆಗ ಕೋಪದಿಂದ ನೀರಜಾ ಹಗ್ಗದಿಂದ ಗಂಡನ ಕುತ್ತಿಗೆ ಬಿಗಿದು, ಕೊಲೆ ಮಾಡಿದ್ದಾಳೆ. ಆವೇಷದಲ್ಲಿ ಏನೋ ಮಾಡಿಬಿಟ್ಟಿದ್ದಾಳೆ. ನಂತರ ಗಂಡ ಮೃತಪಟ್ಟಿದ್ದನ್ನು ನೋಡಿ ದಿಗ್ಭ್ರಮೆಗೊಂಡು ಏನು ಮಾಡಬೇಕು ಎಂದು ತಿಳಿಯದಾಗಿದೆ.

    ನಂತರ ಬಾಕ್ಸ್​ನಲ್ಲಿ ಗಂಡನ ಶವವನ್ನು ತುಂಬಿ, ಬೆಡ್​ರೂಂನಲ್ಲಿರುವ ಮಂಚದ ಕೆಳಗೆ ಇಟ್ಟಿದ್ದಾಳೆ. ಮಾರನೆಯ ದಿನ ಮೃತದೇಹ ವಾಸನೆ ಬರತೊಡಗಿದಾಗ ಅದನ್ನು ಹೋಗಲಾಡಿಸಲು ಥರ ಥರದ ಪ್ರಯೋಗಗಳನ್ನೂ ಮಾಡಿದ್ದಾಳೆ ಈಕೆ. ಆದರೆ ಅದೇನೇ ಮಾಡಿದರೂ ವಾಸನೆ ಹರಡತೊಡಗಿತು.

    ಇದನ್ನೂ ಓದಿ: ಎಸಿಪಿಯ ಅಕ್ರಮ ಆಸ್ತಿಯ ಒಟ್ಟು ಮೌಲ್ಯ ಕಂಡು ಎಸಿಬಿ ಅಧಿಕಾರಿಗಳೇ ಶಾಕ್​…!

    ಅದೇ ದಿನ, ನಿರ್ಮಲ್ ಸಿಂಗ್​ನ ಸೋದರ ಅಶೋಕ್ ಸಿಂಗ್ ತಮ್ಮನನ್ನು ನೋಡಲು ಬಂದಿದ್ದಾರೆ. ಆತ ನೀರಜಾಳಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಅಷ್ಟರಲ್ಲಿ ವಾಸನೆ ಅಶೋಕ್​ ಅವರಿಗೂ ಬಡಿದಿದೆ. ಇದೇನು ವಾಸನೆ ಎಂದು ಕೇಳಿದಾಗ ಆಕೆ ದಡಬಡಿಸಿದ್ದಾಳೆ. ನಂತರ ಗಂಡನ ಬಗ್ಗೆ ಕೇಳಿದಾದಲೂ ಆಕೆಯಿಂದ ಸರಿಯಾದ ಉತ್ತರ ಬರಲಿಲ್ಲ.

    ಇದರಿಂದ ಸಂದೇಹಗೊಂಡ ಅಶೋಕ್​, ವಾಸನೆ ಬರುವ ದಿಕ್ಕಿನತ್ತ ಹೋಗಿ ಬಾಕ್ಸ್​ನಿಂದ ವಾಸನೆ ಬರುತ್ತಿರುವುದನ್ನು ಖಚಿತಪಡಿಸಿಕೊಂಡು ತೆಗೆದು ನೋಡಿದ್ದಾರೆ!

    ತಕ್ಷಣ ಪೊಲೀಸರಿಗೆ ಫೋನ್ ಮಾಡಿದ ಅಶೋಕ್ ಸಿಂಗ್ ಘಟನೆಯ ಬಗ್ಗೆ ಮಾಹಿತಿ ನೀಡಿದರು.ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ನೀರಜಳನ್ನು ವಶಕ್ಕೆ ಪಡೆದಿದ್ದಾರೆ. ಆ ಸಮಯದಲ್ಲಿ ತನ್ನ ತಪ್ಪನ್ನು ಆಕೆ ಒಪ್ಪಿಕೊಂಡಿದ್ದಾಳೆ.
    ನಿರ್ಮಲ್ ಸಿಂಗ್ ಮತ್ತು ನೀರಜಾಗೆ ಇಬ್ಬರು ಮಕ್ಕಳಿದ್ದು, ಘಟನೆ ನಡೆದಾಗ ಮಕ್ಕಳು ಮನೆಯಲ್ಲಿರಲಿಲ್ಲ ಎನ್ನಲಾಗಿದೆ.

    ಮಂಚಕ್ಕೆ ಬಾ ಎಂದು ಕಳ್ಳಿಗೆ ಆಫರ್​ ನೀಡಿದ ಪೊಲೀಸ್! ಮುಂದೇನಾಯ್ತು ನೋಡಿ…

    ನುಗ್ಗೇಕಾಯಿಯನ್ನು ಹ್ಯಾಷ್​ಟ್ಯಾಗ್​ ಮಾಡಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದೇಕೆ?

    ಅಧಿವೇಶನವೂ ಮುಗಿಯಿತು, ಆರೋಗ್ಯವೂ ಸರಿಯಾಯ್ತು: ಭಾರತಕ್ಕೆ ಬಂದಿಳಿದ ಅಮ್ಮ-ಮಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts