More

    ಮಹಿಳೆಯರಿಗೆ ಬಿಗ್‌ ಶಾಕ್‌ ಕೊಟ್ಟ ಸರ್ಕಾರ: ಮುಂಬೈ ರೈಲು ಆರಂಭದಾದರೂ ಸ್ತ್ರೀಯರಿಗೆ ಪ್ರವೇಶವಿಲ್ಲ

    ಮುಂಬೈ: ಬಹುತೇಕ ರಾಜ್ಯಗಳು ಲಾಕ್‌ಡೌನ್ ಹೇರಿವೆ. ಕರೊನಾ ವೈರಸ್‌ ಸಂಖ್ಯೆ ಕುಸಿತ ಕಂಡುಬರುತ್ತಿರುವ ರಾಜ್ಯಗಳಲ್ಲಿ ನಿಧಾನವಾಗಿ ಲಾಕ್‌ಡೌನ್‌ ತೆರವುಗೊಳಿಸಿ ಒಂದೊಂದೇ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.

    ಅದೇ ರೀತಿ ಮಹಾರಾಷ್ಟ್ರದಲ್ಲಿಯೂ ಲಾಕ್‌ಡೌನ್‌ ಅನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಇಲ್ಲಿಯವರೆಗೆ ಲೋಕಲ್‌ ಟ್ರೇನ್‌ಗಳ ಓಡಾಟಕ್ಕೆ ಅನುಮತಿ ಇರಲಿಲ್ಲ. ಈಗ ಅನ್‌ಲಾಕ್‌ ಮಾಡುತ್ತಿರುವ ಕಾರಣ, ಇವುಗಳ ಓಡಾಟಕ್ಕೆ ಅನುಮತಿ ಕಲ್ಪಿಸಲಾಗುತ್ತಿದೆ. ಆದರೆ ಅಚ್ಚರಿಯ ವಿಷಯ ಎಂದರೆ ಮಹಿಳೆಯರು ಟ್ರೇನ್‌ಗಳಲ್ಲಿ ಪ್ರವೇಶಿಸುವುದಕ್ಕೆ ಕಡಿವಾಣ ಹಾಕಲಾಗಿದೆ.

    ಮಹಾರಾಷ್ಟ್ರ ಸರ್ಕಾರ ಮಹಿಳೆಯರ ಓಡಾಟಕ್ಕೆ ಅನುಮತಿ ನೀಡಿದ್ದರೂ ಬೃಹನ್‌ ಮುಂಬೈ ಮಹಾನಗರಪಾಲಿಕೆ (ಬಿಎಂಸಿ) ಇದಕ್ಕೆ ಕಡಿವಾಣ ಹಾಕಿದ್ದು, ಇದೀಗ ಇದು ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ಆರೋಗ್ಯ ಕಾರ್ಯಕರ್ತರು ಸೇರಿದಂತೆ ನಿಯಮಿತ ವರ್ಗಕ್ಕೆ ಮಾತ್ರ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಉಳಿದ ಮಹಿಳೆಯರು ಓಡಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

    ಈ ಕುರಿತು ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಸ್ಥಳೀಯ ಆಡಳಿತಗಳು ಕರೊನಾ ಸಮಸ್ಯೆಗಳನ್ನು ನಿಭಾಯಿಸುತ್ತಿವೆ. ಆದ್ದರಿಂದ ಮಹಿಳೆಯರಿಗೆ ಪ್ರವೇಶ ನಿರಾಕರಿಸಿರುವ ಹಿಂದೆ ಮಹಾನಗರ ಪಾಲಿಕೆ ನಿರ್ಧಾರ ಮಾಡಿದ್ದು, ಆ ಬಗ್ಗೆ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದಿದೆ. ಅದೇ ಇನ್ನೊಂದೆಡೆ, ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಂಡಿರುವ ಹಿಂದಿರುವ ಕಾರಣವನ್ನು ಮಹಾನಗರಪಾಲಿಕೆ ಇನ್ನೂ ಎಲ್ಲಿಯೂ ವಿವರಣೆ ನೀಡಿಲ್ಲ.

    ಇನ್ನು ಮುಂಬೈನಲ್ಲಿ ಇಂದಿನಿಂದ (ಜೂನ್‌ 7) ಮಧ್ಯಾಹ್ನ 4 ಗಂಟೆವರೆಗೆ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಯಾವುದೇ ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡಿಲ್ಲ. ಮಾಲ್ ಮತ್ತು ಚಿತ್ರಮಂದಿರಗಗಳು ಬಂದ್ ಆಗಿಯೇ ಇರಲಿವೆ. ಜಿಮ್, ಸ್ಪಾಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ.

    ಮದುವೆಯಾಗ್ತಾನೆಂದು ಎಲ್ಲಾ ಕಳೆದುಕೊಂಡೆ…. ಅವನಿಗೆ ಗಲ್ಲು ಶಿಕ್ಷೆ ಕೊಡಿಸಿ… ಆತ್ಮಹತ್ಯೆಗೂ ಮುನ್ನ ಯುವತಿ ವಿಡಿಯೋ…

    ಧಾರವಾಡ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಆಸ್ಪತ್ರೆಯಲ್ಲಿ ಮಲಯಾಳಿ ಮಾತನಾಡಿದರೆ ಶಿಕ್ಷೆ ಎಂದು ಬೆಳಗ್ಗೆ ಸುತ್ತೋಲೆ- ಮಧ್ಯಾಹ್ನ ವಾಪಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts