More

    ಧಾರವಾಡ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಧಾರವಾಡ ಜಿಲ್ಲಾ ಪಂಚಾಯಿತಿ ಪ್ರಧಾನ ಕಚೇರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಅಳ್ನಾವರ ಹಾಗೂ ಅಣ್ಣಿಗೇರಿ ತಾಲೂಕು ಪಂಚಾಯಿತಿಗಳಿಗೆ ಹಾಗೂ ಅನುಷ್ಠಾನ ಇಲಾಖೆಗಳಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಒಟ್ಟು ಹುದ್ದೆಗಳು: 14

    ಅಭ್ಯರ್ಥಿಗಳು ಸರ್ಕಾರಿ ಕೆಲಸದ ಅವಧಿಯಲ್ಲಿ ಮಾತ್ರ ಆನ್​ಲೈನ್​ ಅರ್ಜಿ ಸಲ್ಲಿಸಬೇಕು. ರಜೆ ದಿನಗಳಲ್ಲಿ ಸಲ್ಲಿಕೆಯಾದ ಅಜಿರ್ಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಹುದ್ದೆಗಳ ನೇಮಕಾತಿ ಅವಧಿಯು 11 ತಿಂಗಳದ್ದಾಗಿದ್ದು, ನಂತರ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಅವಧಿ ಮುಂದುವರಿಸುವ ಬಗ್ಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿರ್ಮಾನ ತೆಗೆದುಕೊಳ್ಳಲಿದ್ದಾರೆ. ಮೆರಿಟ್​ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

    ಹುದ್ದೆ ವಿವರ
    * ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ (ಎಡಿಪಿಸಿ) – 1
    * ಜಿಲ್ಲಾ ಐಇಸಿ ಸಂಯೋಜಕರು (ಡಿಐಇಸಿ) – 1
    * ತಾಲೂಕು ಎಂಐಎಸ್​ ಸಂಯೋಜಕರು (ಟಿಐಎಂಎಸ್​) – 2
    * ತಾಲೂಕು ಐಇಸಿ ಸಂಯೋಜಕರು (ಟಿಐಇಸಿ) – 2
    * ತಾಲೂಕು ಸಂಯೋಜಕರು (ಟಿಸಿ) – 2
    * ಡೇಟಾ ಎಂಟ್ರಿ ಆಪರೇಟರ್ಸ್​ (ಡಿಇಒ) – 2
    * ತಾಂತ್ರಿಕ ಸಹಾಯಕರು (ಕೃಷಿ) – 1
    * ತಾಂತ್ರಿಕ ಸಹಾಯಕರು (ಅರಣ್ಯ) – 2
    * ತಾಲೂಕು ತಾಂತ್ರಿಕ ಸಹಾಯಕರು (ಟಿಎಇ) – 1

    ವಿದ್ಯಾರ್ಹತೆ: ದ್ವೀತಿಯ ಪಿಯುಸಿ, ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಬಿಇ/ ಬಿಟೆಕ್​, ಎಂಬಿಎ, ಫಾರೆಸ್ಟ್ರಿ, ಕೃಷಿಯಲ್ಲಿ ಬಿಎಸ್ಸಿ, ಮಾಸ್​ ಕಮ್ಯುನಿಕೇಷನ್​, ಅಡ್ವರ್ಟೈಸಿಂಗ್​ ಆ್ಯಂಡ್​ ಪಬ್ಲಿಕ್​ ರಿಲೇಷನ್ಸ್​ನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಕಂಪ್ಯೂಟರ್​ ಸೈನ್ಸ್​ನಲ್ಲಿ ಬಿಸಿಎ/ ಬಿಎಸ್ಸಿ ಮಾಡಿದ್ದು, ಎಲ್ಲ ಹುದ್ದೆಗೂ ಕಂಪ್ಯೂಟರ್​ ಜ್ಞಾನ ಕೇಳಲಾಗಿದೆ.

    ವಯೋಮಿತಿ: ಎಲ್ಲ ಹುದ್ದೆಗಳಿಗೂ ಕನಿಷ್ಠ 21 ರಿಂದ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ವೇತನ: ಎಡಿಪಿಸಿಗೆ ಮಾಸಿಕ 38,000 ರೂ., ಡಿಐಇಸಿಗೆ ಮಾಸಿಕ 23,000+2000 ರೂ., ಟಿಐಎಂಎಸ್​ಗೆ ಮಾಸಿಕ 18,000 ರೂ., ಟಿಐಇಸಿಗೆ 18,000+2000 ರೂ., ಟಿಸಿಗೆ 29,000 ರೂ., ಡೇಟಾ ಎಂಟ್ರಿ ಆಪರೇಟರ್​ಗೆ ಮಾಸಿಕ 16,724 ರೂ., ತಾಂತ್ರಿಕ ಸಹಾಯಕರಿಗೆ ಮಾಸಿಕ 24,000 ರೂ. ಹಾಗೂ ಪ್ರಯಾಣಭತ್ಯೆ ಪ್ರತಿ ಕಿಮಿಗೆ 5ರೂ. ನಂತೆ ಗರಿಷ್ಠ ಮಾಸಿಕ 1,500 ರೂ. ವೇತನ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 18.6.2021
    ಅಧಿಸೂಚನೆಗೆ: https://bit.ly/3z1tgw5
    ಮಾಹಿತಿಗೆ: http://zpdharwad.kar.nic.in

    ಸಿಮೆಂಟ್​ ಕಾರ್ಪೋರೇಷನ್‌ನಲ್ಲಿ ಇಂಜಿನಿಯರ್​ಗಳ ನೇಮಕ: 46 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಬಿಬಿಎಂಪಿಯಿಂದ ಆರೋಗ್ಯ ಸಿಬ್ಬಂದಿ ನೇಮಕ- 78 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts