More

    ಮುಕೇಶ್​ ಅಂಬಾನಿ ಪತ್ನಿಯಾದ್ರು ಪ್ರೊಫೆಸರ್​- ವಿದ್ಯಾರ್ಥಿಗಳು ಕೆಂಡಾಮಂಡಲ; ಭಾರಿ ಪ್ರತಿಭಟನೆ

    ಲಖನೌ: ಜಗತ್ತಿನ ಟಾಪ್​ಮೋಸ್ಟ್​ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಉದ್ಯಮಿ ಮುಕೇಶ್​ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರನ್ನು ಉತ್ತರ ಪ್ರದೇಶದಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ವಿಸಿಟಿಂಗ್ ಪ್ರೊಫೆಸರ್ ಆಗಿ ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ.

    ಇದರ ಬೆನ್ನಲ್ಲೇ ಇದೀಗ ವಿದ್ಯಾರ್ಥಿಗಳ ಭಾರಿ ಪ್ರತಿಭಟನೆ ಶುರುವಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿರುವ ಉಪ ಕುಲಪತಿ ರಾಕೇಶ್ ಭಟ್ನಾಗರ್ ಅವರ ನಿವಾಸದ ಮುಂದೆ ಅನೇಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

    ಈ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಿರುವ ವಿದ್ಯಾರ್ಥಿಗಳು ಈ ನಿರ್ಧಾರವನ್ನು ಬದಲಿಸುವಂತೆ ಕೋರಿಕೊಂಡಿದ್ದಾರೆ. ಮುಕೇಶ್​ ಅಂಬಾನಿಯವರು ಶ್ರೀಮಂತ ಎನ್ನುವ ಕಾರಣಕ್ಕೆ ಅವರ ಪತ್ನಿಯನ್ನು ತಮ್ಮ ಕಾಲೇಜಿಗೆ ನೇಮಕ ಮಾಡಿಕೊಂಡಿರುವುದು ಸರಿಯಿಲ್ಲ. ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ವಿದ್ಯಾರ್ಥಿಗಳು ಕೋರಿದ್ದಾರೆ.

    ಶ್ರೀಮಂತ ವ್ಯಕ್ತಿಯ ಪತ್ನಿಯಾಗಿರುವುದು ದೊಡ್ಡ ಸಾಧನೆಯಲ್ಲ. ಇಂತಹ ವ್ಯಕ್ತಿಗಳು ನಮಗೆ ಆದರ್ಶಪ್ರಾಯವಾಗಿರಲು ಕೂಡ ಸಾಧ್ಯವಿಲ್ಲ. ನೀವು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವುದಾದರೆ ಅರುಣಿಮಾ ಸಿನ್ಹಾ, ಬಚೇಂದ್ರಿ ಪಾಲ್, ಮೇರಿ ಕೋಮ್ ಅಥವಾ ಕಿರಣ್ ಬೇಡಿ ಅವರಂತಹ ಅನುಕರಣೀಯ ಮಹಿಳೆಯರನ್ನು ಆಹ್ವಾನಿಸಿ’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

    ಆದರೆ ನೀತಾ ಅವರನ್ನು ನೇಮಕ ಮಾಡಿಕೊಳ್ಳುವ ನಿರ್ಧಾರದ ಬಗ್ಗೆ ಸಮರ್ಥನೆ ನೀಡಿರುವ ಮಹಿಳಾ ಅಧ್ಯಯನ ಕೇಂದ್ರದ ಸಮನ್ವಯ ಅಧಿಕಾರಿ ನಿಧಿ ಶರ್ಮಾ, ನೀತಾ ಅಂಬಾನಿ ಒಬ್ಬ ಉದ್ಯಮಿ. ಅವರು ನಮ್ಮ ಕೇಂದ್ರವನ್ನು ಸೇರಿಕೊಂಡರೆ ಅವರ ಅನುಭವದಿಂದ ಪೂರ್ವಾಂಚಲ ಭಾಗದ ವಿದ್ಯಾರ್ಥಿನಿಯರಿಗೆ ಉತ್ತಮ ಪ್ರಯೋಜನವಾಗಲಿದೆ. ಈ ವಿಶ್ವವಿದ್ಯಾಲಯದಲ್ಲಿ ಅವರೇ ಹೆಚ್ಚಿಗೆ ಇರುವ ಕಾರಣ, ನೀತಾ ಅವರು ತಮ್ಮ ಅನುಭವದ ಮಾತುಗಳಿಂದ ಈ ಭಾಗದ ಯುವತಿಯರಿಗೆ ಸ್ಫೂರ್ತಿ ನೀಡಲಿದ್ದಾರೆ ಎಂದಿದ್ದಾರೆ.

    ಪತ್ನಿ ಇರುವಾಗಲೇ ಇನ್ನೊಬ್ಬಳ ಜತೆ ಲೈಂಗಿಕ ಸಂಪರ್ಕ ಹೊಂದಿದರೆ ಕಾನೂನು ಏನು ಹೇಳುತ್ತದೆ?

    ಡಿಎನ್​ಎಯಲ್ಲಿ ಗೊತ್ತಾಯ್ತು ಅಪ್ಪನ 30 ಮಕ್ಕಳ ಭಯಾನಕ ಸತ್ಯ… ತಂಗಿಯಲ್ಲಿ ಒಬ್ಳು ಇವನದ್ದೇ ಲವರ್​!

    ಅತ್ತೆ- ಸೊಸೆ ಜಗಳದಲ್ಲಿ ಹೈರಾಣಾಗಿದ್ದೇನೆ, ಯಾರ ಪರ ವಹಿಸಲೂ ಆಗ್ತಿಲ್ಲ- ಪ್ಲೀಸ್​ ದಾರಿ ತೋರಿ…

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts