More

    ಕಾಶ್ಮೀರದ ಕಣಿವೆಯಲ್ಲಿ 250ಕ್ಕೂ ಅಧಿಕ ಉಗ್ರರ ಹೊಂಚು! ಭದ್ರತಾಪಡೆಗೆ ಸಿಕ್ಕಿದೆ ಸ್ಫೋಟಕ ಮಾಹಿತಿ

    ನವದೆಹಲಿ: ಕರೊನಾ ಹಾವಳಿ ಇರಲಿ, ಪಾಕಿಸ್ತಾನವನ್ನೇ ಕಪ್ಪು ಪಟ್ಟಿಗೆ ಸೇರಿಸುವ ಭೀತಿಯೇ ಇರಲಿ, ಅಲ್ಲಿಯ ಉಗ್ರರ ಕಣ್ಣು ಮಾತ್ರ ಭಾರತದತ್ತವೇ ನೆಟ್ಟಿದೆ.

    ನಮ್ಮ ಯೋಧರ ಹುಟ್ಟು ಅಡಗಿಸುವ ವಿಫಲ ಯತ್ನಕ್ಕೆ ಕೈಹಾಕುತ್ತಿರುವ ಪಾಕ್​ನ ಉಗ್ರರು ಇದೀಗ ಕಾಶ್ಮೀರ ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ತಯಾರಿಸಿ ನಡೆಸಿದ್ದಾರೆ. 250ಕ್ಕೂ ಹೆಚ್ಚು ಭಯೋತ್ಪಾದಕರು ಕಾಶ್ಮೀರದ ಕಣಿವೆಯಲ್ಲಿ ಅಡಗಿ ಕುಳಿತಿರುವ ಮಾಹಿತಿಯು ಭಾರತೀಯ ಸೇನೆಗೆ ಸಿಕ್ಕಿದೆ.

    ಜಮ್ಮು-ಕಾಶ್ಮೀರ ಪ್ರಾಂತ್ಯದಲ್ಲಿ ಶಾಂತಿ ಕದಡಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲು ಚೀನಾ ಮತ್ತು ಪಾಕಿಸ್ತಾನ ಕೈಜೋಡಿಸಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದ ಬೆನ್ನಲ್ಲೇ ಈ ಆಘಾತಕಾರಿ ಸಂಗತಿಯನ್ನು ಭಾರತೀಯ ಸೇನೆ ಬಹಿರಂಗಗೊಳಿಸಿದೆ.

    ಇದನ್ನೂ ಓದಿ: ಕಪ್ಪು ಬಣ್ಣದ ಭೀತಿಯಲ್ಲಿ ಪಾಕ್​ ಗಡಗಡ: 21ನೇ ತಾರೀಖು ಮುಹೂರ್ತ ಫಿಕ್ಸ್​? ವಿನಾಶದಿಂದ ಹೊರಬರಲು ಸರ್ಕಸ್​

    ಉಗ್ರರನ್ನು ಹೊಡೆದುರುಳಿಸಲು ಯೋಧರು ಸಕಲ ರೀತಿಯಲ್ಲಿ ಸಜ್ಜಾಗಿರುವುದಾಗಿ ಮೂಲಗಳು ತಿಳಿಸಿವೆ. ಚೀನಾದ ಕುಮ್ಮಕ್ಕಿನಿಂದ ಪಾಕಿಸ್ತಾನದ ಉಗ್ರರು ಗಡಿಯಲ್ಲಿ ನುಸುಳಲು ಮುಂದಾಗಿರುವುದಾಗಿ ಸೇನೆ ಭಾರತೀಯ ಸೇನಾ ಪಡೆಯ ಉನ್ನತ ಸೇನಾಕಾರಿ ಮೇಜರ್ ಜನರಲ್ ಅಮರ್‍ದೀಪ್ ಸಿಂಗ್ ಔಜ್ಲಾ ತಿಳಿಸಿದ್ದಾರೆ.

    ಚಳಿಗಾಲದ ವೇಳೆ ಹಿಮ ಸುರಿಯುವುದನ್ನೇ ಉಗ್ರಗಾಮಿಗಳು ಕಾಯುತ್ತಿದ್ಧಾರೆ. ಈ ಪ್ರತಿಕೂಲ ಹವಾಮಾನದ ದುರ್ಲಾಭ ಪಡೆದು ಕಾಶ್ಮೀರದೊಳಗೆ ನುಸುಳಲು ಉಗ್ರಗಾಮಿಗಳು ಸಜ್ಜಾಗಿದ್ದಾರೆ. ಆದರೆ ಅವರನ್ನು ಹಿಮ್ಮೆಟ್ಟಿಸುವುದು ನಮಗೆ ತಿಳಿದಿದೆ. ಚಳಿಗಾಲದಲ್ಲಿ ಗಡಿ ರಕ್ಷಣೆಗೆ ಅಗತ್ಯವಾದ ಸಕಲ ಸೌಲಭ್ಯಗಳೂ ನಮ್ಮಲ್ಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಪಾಕಿಸ್ತಾನ ಮತ್ತು ಚೀನಾ ಚೀನಾ ಗಡಿಗಳಲ್ಲಿ ಕ್ಯಾತೆ ತೆಗೆಯಲು ನಿರಂತರವಾಗಿ ಯತ್ನಿಸುತ್ತಿವೆ, ಅವುಗಳಿಗೆ ದಿಟ್ಟ ಉತ್ತರ ಕೊಡುತ್ತಿದ್ದೇವೆ ಎಂದಿದ್ದಾರೆ.

    ರಜನೀಕಾಂತ್​ ವಿರುದ್ಧ ಹೈಕೋರ್ಟ್​ ಗರಂ- ದಂಡಕ್ಕೆ ಬೆದರಿದ ಸೂಪರ್​ಸ್ಟಾರ್​!

    ಲಂಚ ಪ್ರಕರಣದಲ್ಲಿ ಬಂಧನ: ಜೈಲಿನಲ್ಲೇ ತಹಶೀಲ್ದಾರ್​ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts