More

    ವಿಶ್ವದ ಹಲವು ಸುಂದರಿಯರಿಗೆ ಕರೊನಾ ಸೋಂಕು: ಭಾರತದ ಬೆಡಗಿಗೂ ಪಾಸಿಟಿವ್‌: ‘ಮಿಸ್‌ ವರ್ಲ್ಡ್‌’ ಸ್ಪರ್ಧೆ ಮುಂದಕ್ಕೆ

    ನವದೆಹಲಿ: ಮೊನ್ನೆಯಷ್ಟೇ ಭುವನ ಸುಂದರಿ (ಮಿಸ್‌ ಯೂನಿವರ್ಸ್‌) ಸ್ಪರ್ಧೆ ಮುಗಿದು ಭಾರತದ ಕುವರಿ ಆಯ್ಕೆಯಾಗಿ ಸಂತಸದಲ್ಲಿ ಇರುವ ನಡುವೆಯೇ ವಿಶ್ವ ಸುಂದರಿ-2021ರ (ಮಿಸ್‌ ವರ್ಲ್ಡ್‌) ಸ್ಪರ್ಧೆಗೂ ಸಕಲ ಸಿದ್ಧತೆ ನಡೆಸಲಾಗಿತ್ತು. ಆದರೆ ಭಾರತದ ಸುಂದರಿಯೂ ಸೇರಿದಂತೆ ಹಲವರು ದೇಶದ ಸುಂದರಿಯರಿಗೆ ಕರೊನಾ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಸ್ಪರ್ಧೆಯನ್ನು ಮುಂದೂಡಲಾಗಿದೆ.

    ಭಾರತದಿಂದ ಆಯ್ಕೆಯಾಗಿರುವ ಹೈದರಾಬಾದ್‌ನ ಮಾನಸಾ ವಾರಣಾಸಿ ಅವರಿಗೂ ಸೋಂಕು ದೃಢಪಟ್ಟಿದೆ. ಇವರ ಜತೆಗೆ ಇದೆ ದೇಶಗಳ ಒಟ್ಟೂ 17 ಸುಂದರಿಯರಿಗೆ ಕರೊನಾ ತಗುಲಿರುವ ಹಿನ್ನೆಲೆಯಲ್ಲಿ ಸ್ಪರ್ಧೆಯನ್ನು ಮುಂದೂಡಲಾಗಿದೆ. ಸೋಂಕಿತ ಸ್ಪರ್ಧಿಗಳು ಸದ್ಯ ಪೋರ್ಟೊ ರಿಕೊದಲ್ಲಿ ಐಸೊಲೇಷನ್‌ ಆಗಿದ್ದಾರೆ.

    ಇತರ ಸ್ಪರ್ಧಿಗಳು, ಸ್ಪರ್ಧೆಗೆ ಆಗಮಿಸುವವರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮಿಸ್‌ ವರ್ಲ್ಡ್‌ ಫೈನಲ್ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ತಿಂಗಳ ಒಳಗೆ ಸ್ಪರ್ಧೆ ನಡೆಯಲಿದೆ. ಅಲ್ಲಿಯವರೆಗೆ ಎಲ್ಲಾ ಸೋಂಕಿತ ಸುಂದರಿಯರು ಹುಷಾರಾಗುವ ಸಾಧ್ಯತೆ ಇದೆ ಎಂದು ಮಿಸ್‌ ವರ್ಲ್ಡ್‌ ಸಂಸ್ಥೆ ತಿಳಿಸಿದೆ.

    ಈ ಕುರಿತು ಮಾಹಿತಿ ನೀಡಿರುವ ಭಾರತದ ಮಿಸ್‌ ಇಂಡಿಯಾ ಸಂಸ್ಥೆ, ಮಾನಸಾ ಈ ಸ್ಪರ್ಧೆಗಾಗಿ ಸಾಕಷ್ಟು ತಯಾರಿ ನಡೆಸಿದ್ದಾರೆ. ಊಟ, ನಿದ್ದೆ ತೊರೆದಿದ್ದಾರೆ. ಬಹಳ ಕಷ್ಟಪಟ್ಟು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಈ ಸಮಯದಲ್ಲಿಯೇ ಸೋಂಕು ತಗುಲಿರುವುದು ಬೇಸರ ತಂದಿದೆ. ಆದರೆ ಆದಷ್ಟು ಬೇಗ ಅವರು ಗುಣಮುಖರಾಗಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದಿದ್ದಾರೆ.

    ಬಿಳಿ ಕೂದಲಿನಲ್ಲಿಯೇ ಮದುವೆಯಾದ ನಟನ ಮಗಳು: ಸಹಜ ಸೌಂದರ್ಯಕ್ಕೆ ಮನಸೋತ ನೆಟ್ಟಿಗರು

    ಮಾಲ್‌ಗೆ ಬೆಂಕಿ: ಷಾಪಿಂಗ್‌ ಮಾಡುತ್ತಿದ್ದ 27 ಮಂದಿ ಸಜೀವ ದಹನ- ಹಲವರ ಸ್ಥಿತಿ ಚಿಂತಾಜನಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts