More

    ಮಸೀದಿ ಮೇಲೆ ದಾಳಿ- ಪರೋಲ್ ಇಲ್ಲದ ಜೀವಾವಧಿ ಶಿಕ್ಷೆ: ಇತಿಹಾಸ ಬರೆದ ಕೋರ್ಟ್‌

    ಕ್ರೈಸ್ಟ್‌ಚರ್ಚ್‌(ನ್ಯೂಜಿಲೆಂಡ್‌): ಇಲ್ಲಿನ ಎರಡು ಮಸೀದಿಗಳ ಮೇಲೆ ದಾಳಿ ನಡೆಸಿ 51 ಮಂದಿ ಸಾವಿಗೆ ಕಾರಣನಾಗಿದ್ದ ಬ್ರೆಂಟನ್ ಹ್ಯಾರಿಸನ್ ಟ್ಯಾರಂಟ್‌ಗೆ ಪರೋಲ್‌ ಇಲ್ಲದ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

    ಇದರರ್ಥ ಸಾಮಾನ್ಯವಾಗಿ ಜೈಲು ಶಿಕ್ಷೆಗೆ ಒಳಗಾಗಿರುವವರಿಗೆ ತುರ್ತು ಅಗತ್ಯ ಕಂಡುಬಂದಲ್ಲಿ (ಮನೆಯಲ್ಲಿ ಯಾರದ್ದಾದರೂ ಸಾವು, ಮದುವೆ, ಸಮಾರಂಭ ಇತ್ಯಾದಿ ಸಂದರ್ಭಗಳಲ್ಲಿ) ಕೆಲವು ದಿನಗಳ ಮಟ್ಟಿಗೆ ಪರೋಲ್‌ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್‌ನಲ್ಲಿ ಪರೋಲ್‌ ಇಲ್ಲದ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ.

    2019ರ ಮಾರ್ಚ್‌ ತಿಂಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ಸೇರಿದ್ದ ಜನಸಮೂಹದ ಮೇಲೆ ಈತ ದಾಳಿ ನಡೆಸಿದ್ದ. ಈ ಸಮಯದಲ್ಲಿ 51 ಮಂದಿ ಮೃತಪಟ್ಟಿದ್ದರು.

    ಇದನ್ನೂ ಓದಿ: ಕರೊನಾ ಎನ್ನುವುದು ಸುಳ್ಳು ಎಂದು ‘ಬುದ್ಧಿ’ ಹೇಳುತ್ತಿದ್ದಾಕೆ ಇದೇ ವೈರಸ್‌ನಿಂದ ಸತ್ತುಹೋದಳು! 

    ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕ್ಯಾಮರೋನ್ ಮ್ಯಾಂಡರ್ ಆಸ್ಟ್ರೇಲಿಯಾ ಮೂಲದ ಅಪರಾಧಿ 29 ವರ್ಷದ ಬ್ರೆಂಟನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

    ‘ಬ್ರೆಂಟನ್ ಅಪರಾಧ ಕ್ರೂರವಾಗಿದೆ. ಆತನ ಅಪರಾಧಕ್ಕೆ ಜೀವಾವಧಿ ಶಿಕ್ಷೆಯೂ ಕಡಿಮೆ. ಒಂದು ಮಾರಕ ಸಿದ್ಧಾಂತಕ್ಕಾಗಿ ಆತ ಹಲವರಿಗೆ ಹಾನಿ ಉಂಟು ಮಾಡಿದ್ದಾನೆ. ಆತ ಅಮಾನವೀಯ ಕೃತ್ಯ ಎಸಗಿದ್ದಾನೆ. ಆ ದಾಳಿಯಲ್ಲಿ ಮೂರು ವರ್ಷದ ಮಗುವು ಕೂಡ ಮೃತಪಟ್ಟಿದೆ. ಈ ಹಿನ್ನೆಲೆಯಲ್ಲಿ ಪರೋಲ್‌ ಇಲ್ಲದ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿದೆ’ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

    ನಾನು ರಾಜಕೀಯಕ್ಕೆ ಬರಲೆ? ಯದುವೀರ್‌ ಟ್ವೀಟ್‌… ಕಮೆಂಟಿಗರ ಉತ್ತರ ಏನು ಗೊತ್ತಾ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts