More

    ಸಿಇಸಿಯಿಂದ ಕೆಎಂಇಆರ್‌ಸಿ ಕಾಮಗಾರಿ ಮೇಲ್ವಿಚಾರಣೆ

    ಚಿತ್ರದುರ್ಗ: ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆ(ಸಿಇಪಿಎಂಐಝೆಡ್)ಯಡಿ ಅನುಮೋದನೆಗೆ ಬಾಕಿ ಇ ರುವ ಕಾಮಗಾರಿಗಳ ವಿಸ್ತತ ಯೋಜನಾ ವರದಿಯನ್ನು ಶೀಘ್ರ ಸಿದ್ಧಪಡಿಸಿ ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮಕ್ಕೆ(ಕೆಎಂಇ ಆ ರ್‌ಸಿ) ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಡಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
    ಡಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,ಸುಪ್ರಿಂಕೋರ್ಟ್ ಸ್ಥಾಪಿತ ಸೆಂಟ್ರಲ್ ಎಂ ಪವರ್‌ಕಮಿಟಿ(ಸಿಇಸಿ)ಕಾಮಗಾರಿಗಳ ಮೇಲ್ವಿಚಾರಣೆ ನಡೆಸಲಿದೆ. ಎಚ್ಚರಿಕೆಯಿಂದ ಯಾವುದೇ ಲೋಪಗಳಾಗದಂತೆ ಕಾಮಗಾರಿ ಅನು ಷ್ಠಾನಗೊಳಿಸಬೇಕೆಂದು ಎಚ್ಚರಿಸಿದರು.
    ಕಾಮಗಾರಿ ದಾಖಲೆಗಳು ಸಮರ್ಪಕವಾಗಿರ ಬೇಕು. ಕಾಮಗಾರಿ ಆರಂಭಕ್ಕೂ ಮುನ್ನ ಸ್ಥಳದ ಹಾಗೂ ಕಾಮಗಾರಿ ಪೂರ್ಣ ಬಳಿಕ ಅದರ ಪೋಟೊ ಮತ್ತು ವಿಡಿಯೋ ಇರಬೇಕು ಹಾಗೂ ಕೆಎಂಇಆರ್‌ಸಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸ ಬೇಕು. ಅನುಷ್ಠಾನ ಸಂದರ್ಭ ದಲ್ಲಿ ಸಂದೇಹಗಳಿದ್ದರೆ ಕೆಎಂಇಆರ್‌ಸಿಯಿಂದ ನಿರ್ದೇಶನ ಪಡೆಯ ಬೇಕು. ಯಾವುದೇ ಕಾರಣಕ್ಕೂ ಯೋಜನೆಗಳನ್ನು ಹಗುರವಾಗಿ ಕಾಣಬಾರದು.
    ಬದಲಾವಣೆಗೆ ಜನಪ್ರತಿನಿಧಿಗಳಿಂದ ಒತ್ತಡ ಕೇಳಿ ಬಂದರೆ, ಅವರಿಗೆ ಮನವರಿಕೆ ಮಾಡಿಕೊಡಿ ಅಥವಾ ಅವರ ಸಲಹೆಗಳನ್ನು ಕೆಎಂಇ ಆರ್‌ಸಿಗೆ ಸಲ್ಲಿಸಿ,ತಮ್ಮ ಹಂತದಲ್ಲಿ ಯಾವುದೇ ಬದಲಾವಣೆ ಬೇಡ. ಒಂದು ವೇಳೆ ಬದಲಾವಣೆಯಾದರೆ ಅದು ಗಂಭೀರ ಲೋಪವಾಗ ಲಿದೆ ಎಂದರು.
    ಪ್ರತ್ಯೇಕ ವಿಭಾಗ
    ಡಿಎಂಎಫ್ ಹಾಗೂ ಕೆಎಂಇಆರ್‌ಸಿ ಕಾಮಗಾರಿಗಳ ಮೇಲ್ವಿಚಾರಣೆಗೆ ಡಿಸಿ ಕಚೇರಿಯಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗುವುದು. ಪ್ರತಿ ವಾರಕೊಮ್ಮೆ ಇಲಾಖಾವಾರು ಪ್ರಗತಿ ಪರಿಶೀಲಿಸಲಾಗುವುದೆಂದು ಡಿಸಿ ಹೇಳಿದರು. ಲೋಕೋಪಯೋಗಿ, ಸಣ್ಣ ನೀರಾವರಿ, ತೋಟ ಗಾರಿಕೆ, ಕೌಶಲಾಭಿವೃದ್ಧಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಅರಣ್ಯ, ತೋಟಗಾರಿಕೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಕಾ ಮಗಾರಿಗಳ ಪ್ರಗತಿ ಪರಿಶೀಲಿಸಲಾಯಿತು.
    ಜಿಪಂ ಸಿಇಒ ಎಸ್.ಜೆ.ಸೋಮಶೇಖರ್,ಮುಖ್ಯಯೋಜನಾಧಿಕಾರಿ ಸತೀಶ್‌ರೆಡ್ಡಿ,ಡಿಸಿಎಫ್ ಟಿ.ರಾಜಣ್ಣ,ಲೋಕೋಪಯೋಗಿ ಇ ಲಾಖೆ ಇಇ ಮಲ್ಲಿಕಾರ್ಜುನ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್,ತೋಟಗಾರಿಕೆ ಇ ಲಾಖೆ ಉಪನಿರ್ದೇಶಕಿ ಜಿ.ಸವಿತಾ,ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಒ.ಪರಮೇಶ್ವರಪ್ಪ ಮತ್ತಿತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts