More

    ಶ್ರೀ ಸ್ವರ್ಣಾಂಬಾ ದೇವಿ ಅದ್ದೂರಿ ತೆಪ್ಪೋತ್ಸವ

    ಕಡೂರು: ಮಲ್ಲೇಶ್ವರದ ಗ್ರಾಮ ದೇವತೆ ಶ್ರೀ ಸ್ವರ್ಣಾಂಬಾ ದೇವಿ ತೆಪ್ಪೋತ್ಸವ ಸೋಮವಾರ ಅದ್ದೂರಿಯಾಗಿ ನಡೆಯುವುದರೊಂದಿಗೆ ಏಳು ದಿನಗಳ ಜಾತ್ರಾಮಹೋತ್ಸವ ಸಂಪನ್ನಗೊಂಡಿತು.

    ಬೆಳಗ್ಗೆ ಮೂಲಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದ ನಂತರ ಸ್ವರ್ಣಾಂಬಾ ದೇವಿಯ ಉತ್ಸವಮೂರ್ತಿಗೆ ಸೇವಂತಿಗೆ, ಮಲ್ಲಿಗೆ, ಕಮಲ, ಕನಕಾಂಬರ ಮುಂತಾದ ಹೂಗಳನ್ನು ಬಳಸಿ ಪುಷ್ಪಯಾಗ ನಡೆಸಲಾಯಿತು. ಬುಟ್ಟಿಗಟ್ಟಲೆ ಹೂಗಳನ್ನು ಸಮರ್ಪಿಸಲಾಯಿತು.
    ಸಂಜೆ ದೇವಸ್ಥಾನದ ಮುಂದಿನ ಸ್ವರ್ಣಪುಷ್ಕರಿಣಿಯಲ್ಲಿ ಸ್ವರ್ಣಾಂಬಾ ದೇವಿಗೆ ತೆಪ್ಪೋತ್ಸವ ನಡೆಸಲಾಯಿತು. ಅಲಂಕೃತ ತೆಪ್ಪದಲ್ಲಿ ಸ್ವರ್ಣಾಂಬಾ ದೇವಿಯೊಡನೆ ಶ್ರೀ ಅರಳಿಮರದಮ್ಮ, ಚೌಡ್ಲಾಪುರದ ಶ್ರೀ ಕರಿಯಮ್ಮ ದೇವಿ ಮತ್ತು ಕೆಂಚರಾಯಸ್ವಾಮಿಯನ್ನು ಪ್ರತಿಷ್ಠಾಪಿಸಿ ಪುಷ್ಕರಿಣಿಯಲ್ಲಿ ಮೂರು ಸುತ್ತು ತೆಪ್ಪ ಎಳೆಯಲಾಯಿತು. ಬಳಿಕ ದೇವಿಗೆ ಅಷ್ಟಾವಧಾನ ಸೇವೆ ನಡೆಸಿದ ನಂತರ ದೇವರನ್ನು ಗ್ರಾಮದೊಳಗಿನ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಊರಿನ ಆಲಯ ಪ್ರವೇಶ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆಯಲ್ಲಿ ಸಾಲಾಗಿ ಕರ್ಪೂರ ಬೆಳಗುತ್ತ ಉತ್ಸವದ ಜತೆ ಹೆಜ್ಜೆಹಾಕಿದರು.
    ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ. ಎಂ.ಟಿ.ಸತ್ಯನಾರಾಯಣ ಮಾತನಾಡಿ, ಭಕ್ತರ ಸಹಕಾರದಿಂದ ಜಾತ್ರೆ ಅದ್ದೂರಿಯಾಗಿ ನಡೆಯಿತು ಎಂದರು.
    ಧರ್ಮದರ್ಶಿ ಮಂಡಳಿ ಗೌರವಾಧ್ಯಕ್ಷ ಎಂ.ಟಿ.ಹನುಮಂತಯ್ಯ, ಕಾರ್ಯದರ್ಶಿ ಎಂ.ವೈ.ಚಂದ್ರಶೇಖರ, ಸದಸ್ಯರಾದ ಎಂ.ಆರ್.ಧರ್ಮಣ್ಣ, ಮಾಲತೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts