More

    ಮೊದಲು ಸೋಂಕಿತರ ಚಿಕಿತ್ಸೆ- ನಂತರ ಮದುವೆ ಎಂದು ಎರಡು ಬಾರಿ ವಿವಾಹ ಮುಂದೂಡಿದ ನರ್ಸಿಂಗ್‌ ಅಧಿಕಾರಿ

    ಬೆಂಗಳೂರು: ಕರೊನಾ ಸೋಂಕಿತರ ಚಿಕಿತ್ಸೆ, ಆರೈಕೆಗಾಗಿ ಒಂದಲ್ಲ, ಎರಡನೇ ಬಾರಿ ತನ್ನ ಮದುವೆ ಮುಂದೂಡಿಕೊಂಡ ನರ್ಸಿಂಗ್ ಅಧಿಕಾರಿ. ಈ ಪಿಡುಗಿನ ಅಪಾಯದಿಂದ ಜನರು ಮುಕ್ತರಾದ ಮೇಲಷ್ಟೇ ಮದುವೆಯಾಗುವ ಸಂಕಲ್ಪ ಮಾಡಿದ್ದಾರೆ.

    ಬೆಂಗಳೂರಿನ ಸರ್ ಸಿ.ವಿ.ರಾಮನ್ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ನವೀನ್ ತೆಗೆದುಕೊಂಡ ತೀರ್ಮಾನವಿದು. ಇದು, ಶುಶ್ರೂಷಕರು, ವೈದ್ಯ ವೃಂದ ಮಾತ್ರವಲ್ಲ, ಸ್ವತಃ ವೈದ್ಯರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಗಮನಸೆಳೆದು, ಧನ್ಯತೆಯೊಂದಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    ಇಂದು ವಿಶ್ವ ದಾದಿಯರ ದಿನ. ಈ ಹಿನ್ನೆಲೆಯಲ್ಲಿ ಡಾ.ಕೆ.ಸುಧಾಕರ್ ಅವರು ಹಲವು ಶುಶ್ರೂಷಕರೊಂದಿಗೆ ವಿಡಿಯೋ ಸಂವಾದ ನಡೆಸಿ, ಶುಭ‌ ಹಾರೈಸಿದ್ದಾರೆ. ಈ ಸಂವಾದದಲ್ಲಿ ಸರ್ ಸಿ.ವಿ.ರಾಮನ್ ಆಸ್ಪತ್ರೆಯ ನವೀನ್ ಭಾಗಿಯಾದ ವೇಳೆ, ಅವರು ತಮ್ಮ ಮದುವೆ ಮುಂದೂಡಿದ ವಿಷಯವನ್ನು ಸುಧಾಕರ್ ಪ್ರಸ್ತಾಪಿಸಿದರು.

    ಹೌದು ಎಂದ ನವೀನ್, ಕಳೆದ ವರ್ಷವಷ್ಟೇ ಅಲ್ಲ ಸರ್, ಈ ಬಾರಿಯೂ ಮುಂದೂಡಿರುವೆ. ಕರೊನಾ ಸೋಂಕಿನಿಂದ ಜನರು ಮುಕ್ತರಾಗುವ ತನಕ ಮದುವೆ ಮಾಡಿಕೊಳ್ಳದಿರಲು ನಿರ್ಧರಿಸಿರುವೆ.

    ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಧಾಕೃಷ್ಣ ಅವರು ಕಳೆದ ಮಾರ್ಚ್ 11ರಿಂದ ಕರೊನಾ ವಾರ್ಡ್ ನ , ಏರ್ ಪೋರ್ಟ್ ನಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಬೆಂಗಾವಲು ಜವಾಬ್ದಾರಿ ನೀಡಿದ್ದಾರೆ. ಆವತ್ತಿನಿಂದ ಈವರೆಗೂ ಒಂದು ದಿನವೂ ರಜೆ ಪಡೆದಿಲ್ಲ. ಬೇಕಿದ್ದರೆ ನನ್ನ ಹಾಜರಿ ಪುಸ್ತಕ ಪರಿಶೀಲಿಸಬಹುದು.

    ಬೆಳಗ್ಗೆ 7 ಗಂಟೆಗೆ ಆಸ್ಪತ್ರೆ ಕರ್ತವ್ಯಕ್ಕೆ ಹಾಜರಾದರೆ ರಾತ್ರಿ 10ಕ್ಕೆ ಮನೆಗೆ ಮರಳುವೆ. ಬಿಬಿಎಂಪಿ ವಾರ್ ರೂಮ್ ನೊಂದಿಗೆ ಸಮ್ವಯದ ಕೆಲಸ ಒಪ್ಪಿಸಿದ್ದು, ಮನೆಗೆ ಮರಳಿದ ನಂತರ ಸಂಪರ್ಕದಲ್ಲಿರುವೆ.

    ಆಸ್ಪತ್ರೆಗೆ ಬಂದಿದ್ದ 26 ವರ್ಷದ ಯುವಕನೊಬ್ಬ ನನ್ನ ಹೆಗಲ ಮೇಲೆ ಕುಸಿದು ಬಿದ್ದ, 52 ವರ್ಷದ ಮತೊಬ್ಬರು ನನಗಿಂತ ಹಿರಿಯರು, ಆಕ್ಸಿಜನ್ ಬೆಡ್ ಗಾಗಿ ನನ್ನ ಕಾಲು ಹಿಡಿದುಕೊಳ್ಳಲು ಬಂದಿದ್ದರು. 55 ವರ್ಷದೊಳಗಿನವರು ಪ್ರಾಣ ಬಿಡುತ್ತಿದ್ದಾರೆ. ಈ ನೋವು, ದುಃಖ ಸಹಿಸಿಕೊಂಡು ಆರೈಕೆ ಮಾಡುವುದು ದೊಡ್ಡ ಸವಾಲು ಎಂದು ನವೀನ್ ಗದ್ಗಿತ ಕಂಠದಲ್ಲಿ ಭಾವುಕರಾಗಿ ಹೇಳಿದಾಗ ಡಾ.ಸುಧಾಕರ್ ಅರೆಕ್ಷಣ ಮೌನವಹಿಸಿದರು. ನಂತರ ನಿಮ್ಮಂತಹವರ ಸಮರ್ಪಣಾ ಮನೋಭಾವದ ಸೇವೆಯು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜಯ ಗಳಿಸುವ ವಿಶ್ವಾಸವಿದೆ ಎಂದು ಪ್ರಶಂಸಿಸಿ ಹುರಿದುಂಬಿಸಿದರು.

    ತೆರೆಮರೆಯ ಹೀರೋಗಳು
    ಜತೆಗೆ ಸರ್ಕಾರ ನಿಮ್ಮ ಜತೆಗಿದ್ದು, ನೈತಿಕ‌ ಬಲ ಹಾಗೂ ಸ್ಫೂರ್ತಿ ತುಂಬುತ್ತದೆ. ಇದೇ ಕಾರಣಕ್ಕೆ ನರ್ಸಿಂಗ್ ಅಧಿಕಾರಿ ಎಂದು ಗೌರವಯುತ ಪದನಾಮ ನೀಡಿ, ವಿಶೇಷ ಭತ್ಯೆ‌ ( ರಿಸ್ಕ್ ಅಲೋಯನ್ಸ್) ನೀಡಲು ನಿರ್ಧರಿಸಿದೆ.

    ಸರ್ಕಾರ ನೀಡಿದ ಈ‌ ನೆರವು ಸಾಂಕೇತಿಕವಾಗಿದ್ದು, ನೀವೇ ನಿಜವಾದ ತೆರೆಯ ಹಿಂದಿನ ಹೀರೋಗಳು ಎಂದು ಸುಧಾಕರ್ ಬೆನ್ನುತಟ್ಟಿ ಪ್ರೋತ್ಸಾಹಿಸಿದರು.

    ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ನರ್ಸ್, ದಿನದ ಕರ್ತವ್ಯ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ತನ್ನ ಗಂಡ‌ ಬಿಸಿ ನೀರು ಕಾಯಿಸಿ ಸ್ನಾನಕ್ಕೆ ರೆಡಿ ಮಾಡುವುದು, ಸೋಂಕಿತರ ಚಿಕಿತ್ಸೆಯ ಅನುಭವಗಳನ್ನು ಹಂಚಿಕೊಂಡರು. ಹಾಗೆಯೇ ಆಸ್ಪತ್ರೆಯಲ್ಲಿ 1,000 ಹಾಸಿಗೆಗಳಿಗೆ ಆಮ್ಲಜನಕ ಪೂರೈಸುವ ಸಾಮರ್ಥ್ಯದ ಪ್ಲಾಂಟ್ ಇರುವುದು, ಸುಧಾಕರ್ ಅವರೇ ಈ ಪ್ಲ್ಯಾಂಟ್ ಗೆ ಚಾಲನೆ ನೀಡಿದ್ದನ್ನು ನೆನಪಿಸಿದರು.

    ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯ ನರ್ಸ್‌ ತರಬೇತಿ ಬಲದಿಂದಾಗಿ 1 ವರ್ಷದಿಂದ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು, ತಮಗೆ ಸೋಂಕು ತಗುಲಿಲ್ಲ ಎಂದು ಹೇಳಿದರೆ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ನರ್ಸ್,‌ ನಮ್ಮ ವಿಜ್ಞಾನಿಗಳು ಏನೆಲ್ಲ ಕಂಡು ಹಿಡಿದಿದ್ದಾರೆ. ಮಾರಕ ವೈರಾಣು ನಿವಾರಕ ಔಷಧವನ್ನು ಶೋಧಿಸಲಿ ಎಂದು ಪ್ರಾರ್ಥಿಸಿ, ಜನರ ಸಾವು- ನೋವು ಕರುಳು ಹಿಂಡುತ್ತದೆ ಎನ್ನುತ್ತಾ ಭಾವುಕರಾದರು.

    ಮೊದಲ ರಾತ್ರಿಯೇ ಎಲ್ಲ ವಿಷಯ ಹೇಳಿದಾಗ ಪತ್ನಿ ಒಪ್ಪಿಕೊಂಡ ಮೇಲೂ ಚಿಂತೆಪಡುವಿರೇಕೆ?

    ಸೋಂಕಿತರ ಜೀವ ಹಿಂಡುತ್ತಿರುವ ‘ಬ್ಲ್ಯಾಕ್ ಫಂಗಸ್‌‘ಗೆ ಮಹಾರಾಷ್ಟ್ರ ಸುಸ್ತು- ಪ್ರತ್ಯೇಕ ಆಸ್ಪತ್ರೆ ಮೀಸಲು

    ಕೈಗೆ ಮಗು ಬಂದಾಗಿದೆ- 2ನೇ ಅಲೆಯಲಿ ಶುರುವಾದ ಖಿನ್ನತೆಯಿಂದ ಬಾಣಂತಿಯರು ಹೊರಬರುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts