More

    ಮಂತ್ರಿಮಾಲ್‌ಗೆ ಬೀಳುತ್ತಾ ಬೀಗ? ಕಟ್ಟಲಿಲ್ಲ 32 ಕೋಟಿ ರೂ. ತೆರಿಗೆ- ನೋಟಿಸ್‌ಗೂ ಗಪ್‌ಚುಪ್‌; ಇದೀಗ ಪೇಚಿಗೆ!

    ಬೆಂಗಳೂರು: ಕರ್ನಾಟಕದ ಪ್ರತಿಷ್ಠ ಮಾಲ್‌ಗಳಲ್ಲಿ ಒಂದಾಗಿರುವ ಬೆಂಗಳೂರಿನ ಮಂತ್ರಿಮಾಲ್‌ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಕರೊನಾ ಹಿನ್ನೆಲೆಯಲ್ಲಿ ಬಂದ್‌ ಆಗಿ ಇದಾಗಲೇ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಅನುಭವಿಸಿರುವ ಮಂತ್ರಿಮಾಲ್‌ ಕರೊನಾಕ್ಕಿಂತಲೂ ಮುಂಚೆಯೇ ತೆರಿಗೆ ಕಟ್ಟದ ಕಾರಣದಿಂದಾಗಿ ಇದೀಗ ಸಿಕ್ಕಿಬಿದ್ದಿದಿದೆ.

    ಕಳೆದ ಮೂರು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಂತ್ರಿ ಮಾಲ್‌ಗೆ ಇದೇ ಸೋಮವಾರದವರೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಡುವು ನೀಡಿದೆ. ಒಂದು ವೇಳೆ ಹಣವನ್ನು ಪಾವತಿ ಮಾಡದೇ ಹೋದರೆ ಮಾಲ್‌ ಮುಚ್ಚುವುದಾಗಿ ಎಚ್ಚರಿಕೆ ನೀಡಿದೆ.

    ಅಷ್ಟಕ್ಕೂ ಮಂತ್ರಿಮಾಲ್‌ ಉಳಿಸಿಕೊಂಡಿರುವ ತೆರಿಗೆ ಮೊತ್ತ ಎಷ್ಟು ಗೊತ್ತೆ? ಬರೋಬ್ಬರಿ 32 ಕೋಟಿ ರೂಪಾಯಿ! ಇದರಲ್ಲಿ 22 ಕೋಟಿ ರೂಪಾಯಿ ಅಸಲಿ ಹಾಗೂ 10 ಕೋಟಿ ರೂಪಾಯಿ ತೆರಿಗೆ ಸೂಕ್ತ ಸಮಯದಲ್ಲಿ ಪಾವತಿ ಮಾಡದೇ ಇರುವುದಕ್ಕೆ ಬಡ್ಡಿ. ಒಟ್ಟು 32 ಕೋಟಿ ರೂಪಾಯಿಗಳನ್ನು ಬರುವ ಸೋಮವಾರದ ಒಳಗೆ ಬಿಬಿಎಂಪಿಗೆ ಅದು ನೀಡಬೇಕಿದೆ.

    ಇದಾಗಲೇ ಮಾಲ್‌ ಮಾಲೀಕರು 10 ಕೋಟಿ ರೂಪಾಯಿ ಚೆಕ್‌ ನೀಡಿದ್ದರು. ಆದರೆ ಅಷ್ಟು ಮೊತ್ತ ಬ್ಯಾಂಕ್‌ನಲ್ಲಿ ಇಲ್ಲದ ಕಾರಣ, ಚೆಕ್‌ ಬೌನ್‌ ಆಗಿದೆ. ಹೀಗೆ ಎರಡು ಬಾರಿ ಚೆಕ್‌ ಬೌನ್ಸ್‌ ಮಾಡಿಕೊಂಡಿದ್ದು, ಈ ಮಾಲ್‌ ಮಾಲೀಕ ಇನ್ನಷ್ಟು ಪೇಚಿಗೆ ಸಿಲುಕಿದ್ದಾರೆ.

    ಚೆಕ್‌ ಬೌನ್ಸ್‌ ಆಗಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಬಿಬಿಎಂಪಿ ಮಾಲೀಕರಿಗೆ ನೋಟಿಸ್‌ ನೀಡಿತ್ತು. ಆದರೆ ಮಾಲೀಕರು ಗಪ್‌ಚುಪ್‌ ಆಗಿ ನೋಟಿಸ್‌ಗೆ ಉತ್ತರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ಕೊನೆಯ ಎಚ್ಚರಿಕೆ ನೀಡಲಾಗಿದೆ.

    ‘ಕಮಲ’ ಪುತ್ರ ‘ಕೈ’ ಸದಸ್ಯ- ಕೆಲವೇ ಕ್ಷಣಗಳಲ್ಲಿ ನಡೆಯಲಿದೆ ಅಧಿಕೃತ ಸೇರ್ಪಡೆ

    ಕೈಯಲ್ಲಿ ಪಿಸ್ತೂಲ್‌- ಉಸಿರುಬಿಟ್ರೆ ಶೂಟ‌್ಔಟ್‌: 8 ವರ್ಷ ಕಾರುಬಾರು ನಡೆಸಿದ್ದ ಖತರ್ನಾಕ್‌ ಕಳ್ಳ ಸಿಕ್ಕಿಬಿದ್ದ

    ತಿಮ್ಮಪ್ಪನ ದರ್ಶನ ಪಡೆದು ಬರುತ್ತಿದ್ದ ವೇಳೆ ಹಾವೇರಿಯಲ್ಲಿ ಅಪಘಾತ: ರಕ್ಷಣಾಸಿಬ್ಬಂದಿ ಹರಸಾಹಸ

    ಪತ್ನಿ ತಿಂಗಳಲ್ಲಿ 15-20 ದಿನ ಬೋಲ್ಟ್‌ ಹಾಕಿ ಒಬ್ಬಳೇ ಮಲಗ್ತಾಳೆ- ಜೀವನ ಸಾಕಾಗಿದೆ; ಏನ್‌ ಮಾಡ್ಲಿ ಮೇಡಂ…

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts