More

    ದೀದಿಯಿಂದ ‘ಮಾ’ಗೆ ಬಡ್ತಿ ಪಡೆದ ಮಮತಾ: ಪಶ್ಚಿಮ ಬಂಗಾಳದ ತುಂಬಾ ಸಾಂಬಾರ್​, ಮೊಟ್ಟೆ ಕರಿ ಘಮಲು…

    ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಇದೀಗ ‘ಮಾ’ದ್ದೇ ಸುದ್ದಿ. ದೀದೀ ಎಂದೇ ಪ್ರಚಲಿತದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ‘ಮಾ’ ಎಂದೇ ಪ್ರಸಿದ್ಧಿಪಡೆದಿದ್ದಾರೆ. ಇದಕ್ಕೆ ಕಾರಣ, ಇವರು ಶುರು ಮಾಡಿರುವ ಕ್ಯಾಂಟೀನ್​.

    ಇನ್ನೇನು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮೀಪವಾಗುತ್ತಿದೆ. ಇದರ ಬೆನ್ನಲ್ಲೇ ಮಮತಾ ಅವರು ‘ಮಾ’ ಎನ್ನುವ ಹೆಸರಿನ ಕ್ಯಾಂಟೀನ್​ ಶುರು ಮಾಡಿದ್ದಾರೆ. ಕಡಿಮೆ ದುಡ್ಡಿನಲ್ಲಿ ಬಡವರಿಗೆ ಶುರು ಮಾಡಿರುವ ಈ ಕ್ಯಾಂಟೀನ್​ನಿಂದಾಗಿ ಮಮತಾ ಬ್ಯಾನರ್ಜಿಯವರು ಸದ್ಯ ದೀದಿಯಿಂದ ಮಾಗೆ ಬಡ್ತಿ ಪಡೆದಿದ್ದಾರೆ.

    ಜನಸಾಮಾನ್ಯರಿಗೆ ಉತ್ತಮವಾದ ಆಹಾರ ನೀಡುವ ಮೂಲಕ ಈ ಕ್ಯಾಂಟೀನ್​ ಗಮನಸೆಳೆಯುತ್ತಿದೆ ಎನ್ನಲಾಗಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಈ ಕ್ಯಾಂಟೀನ್ ತೆರೆಯಾಲಾಗಿದೆ. ಮಧ್ಯಾಹ್ನ 12.30 ರಿಂದ 3.00 ಗಂಟೆಯವರೆಗೆ ಕಾರ್ಯ ನಿರ್ವಹಿಸುವ ಈ ಕ್ಯಾಂಟೀನ್​ನಲ್ಲಿ 5 ರೂಪಾಯಿಗೆ ಊಟ ನೀಡಲಾಗುತ್ತಿದೆ. ಇದರಲ್ಲಿ ಅನ್ನ, ಸಾಂಬಾರ್, ಕರಿ ಮತ್ತು ಮೊಟ್ಟೆ ಕರಿ ನೀಡಲಾಗುತ್ತಿದೆ.

    ನಾನು ಊಟಕ್ಕಾಗಿ 35 ರೂಪಾಯಿಯನ್ನು ಖರ್ಚು ಮಾಡಬೇಕಾಗಿತ್ತು. ಆದರೆ ಇದೀಗ ‘ಮಾ’ ಕ್ಯಾಂಟೀನ್ ಬಡವರಿಗೆ ದೇವರಂತೆ ಬಂದಿದೆ. ಕೇವಲ 5 ರೂಪಾಯಿಗೆ ಊಟ ನೀಡುತ್ತಿದೆ. ಈ ಆಹಾರವು ಬಹಳ ಚೆನ್ನಾಗಿದೆ ಎಂದು ಹೊಗಳಲಾಗುತ್ತಿದೆ.

    ಇದಾಗಲೇ ಮಮತಾ ಬ್ಯಾನರ್ಜಿಯವರು ‘ಮಾ’ ಕ್ಯಾಟೀಂನ್ ಗಾಗಿ 100 ಕೋಟಿ ರೂಪಾಯಿಯನ್ನು ಬಜೆಟ್​ನಲ್ಲಿ ಕಾಯ್ದಿರಿಸಿದ್ದಾರೆ.

    ರಾಷ್ಟ್ರೀಯ ಮುಕ್ತ ಶಾಲೆಯಲ್ಲಿದೆ ಹಲವಾರು ಹುದ್ದೆ- ನೇರ ಸಂದರ್ಶನದಿಂದ ಪಡೆಯಿರಿ ಉದ್ಯೋಗ

    ಪತಿ, ಪ್ರೇಮಿ ಹಾಗೂ ಪಾಲಕರ ಚಾಯ್ಸ್​… ಆಯ್ಕೆ ಮಾಡಲಾಗದೇ ಕುಗ್ಗಿಹೋಗಿದ್ದೇನೆ… ಏನು ಮಾಡಲಿ?

    ಆರು ಗಂಟೆಯಲ್ಲಿ ಮೂರು ಬಾರಿ ಕಂಪಿಸಿದ ಭೂಮಿ: ಸುನಾಮಿ ಎಚ್ಚರಿಕೆ- ಎತ್ತರ ಪ್ರದೇಶಕ್ಕೆ ಸ್ಥಳಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts