More

    ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದ ಮಡಿಕೇರಿ ಯುವತಿ: ಸ್ಕ್ಯಾನಿಂಗ್‌ ಮಾಡಿದಾಗ ವೈದ್ಯರೇ ಶಾಕ್‌!

    ಮಡಿಕೇರಿ: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದಿದ್ದ ಯುವತಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ವೈದ್ಯರೇ ಶಾಕ್‌ ಆಗಿರುವ ಘಟನೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ನಾಪೋಕ್ಲು ಗ್ರಾಮದ 20 ವರ್ಷದ ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ತೂಕದ ಗಡ್ಡೆ ಇರುವುದು ಸ್ಕ್ಯಾನಿಂಗ್‌ನಿಂದ ಪತ್ತೆಯಾಗಿದ್ದು, ಈ ಆಸ್ಪತ್ರೆಯಲ್ಲಿ ಇಂಥದ್ದೊಂದು ಕೇಸ್‌ ಇದೇ ಮೊದಲು ಎಂದಿದ್ದಾರೆ ವೈದ್ಯರು. ಈ ಯುವತಿ ಕೆಲ ವರ್ಷಗಳಿಂದ ಕೂದಲು ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದಳು. ಮನೆಯವರಿಗೆ ತಿಳಿಯದಂತೆ ಕೂದಲು ತಿನ್ನುತ್ತಿದ್ದಳು. ಇದರಿಂದಾಗಿ ಜೀರ್ಣವಾಗದ ಕೂದಲು ಹೊಟ್ಟೆಯಲ್ಲಿ
    ಸಂಗ್ರಹವಾಗಿ ಒಟ್ಟಿಗೇ ಸೇರಿಕೊಂಡಿದೆ.

    ‘ಯುವತಿ ಯಾವಾಗಲೂ ಹೊಟ್ಟೆ ನೋವು ಎನ್ನುತ್ತಿದ್ದಳು ಎಂದು ಪಾಲಕರು ಮಾಹಿತಿ ನೀಡಿದರು. ಏನು ತಿಂದರೂ ವಾಂತಿ ಮಾಡಿಕೊಳ್ಳುತ್ತಿದ್ದಳಂತೆ, ಆಕೆಯನ್ನು ಪರೀಕ್ಷಿಸಿದಾಗ ರಕ್ತದ ಪ್ರಮಾಣವೂ ಕಡಿಮೆಯಾಗಿತ್ತು. ಕೂದಲು ಇರುವುದು ತಿಳಿದ ಹಿನ್ನೆಲೆಯಲ್ಲಿ ರಕ್ತ ಕೊಡಿಸಿ ಉಪಚರಿಸಿದ ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

    ‘ಟ್ರೆಂಕೊಬಸಾರ್’ ಎಂದು ಇದನ್ನು ಕರೆಯಲಾಗುತ್ತದೆ. ಹೊಟ್ಟೆಯಲ್ಲಿ ಕೂದಲು ಹೆಚ್ಚಾದರೆ ಜೀವಕ್ಕೆ ಅಪಾಯಕಾರಿಯೂ ಆಗಬಹುದು. ಮೂರು ಗಂಟೆ ಶಸ್ತ್ರಚಿಕಿತ್ಸೆ ಮಾಡಿ ಈ ಗೆಡ್ಡೆಯನ್ನು ಹೊರ ತೆಗೆಯಲಾಗಿದೆ ಎಂದು ಅವರು ಹೇಳಿದರು. ಯುವತಿ ಆರೋಗ್ಯದಿಂದ ಇದ್ದು ಡಿಸ್‌ಚಾರ್ಜ್‌ ಮಾಡಲಾಗಿದೆ.

    ರೇಪ್‌ ಕೇಸ್‌ನಿಂದ ಎಸ್ಕೇಪ್‌ ಅಗಿದ್ದ ಶಾಸಕನ ಪುತ್ರ ಸಿಕ್ಕಿಬಿದ್ದ- ಪೊಲೀಸರ ಜತೆ ನಡೆದಿತ್ತು ಅಪ್ಪನ ರಹಸ್ಯ ಮಾತುಕತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts