More

    ಶಿಸ್ತು ಕಾಪಾಡಲು ಹೋಗಿ ಕೆಲಸ ಕಳೆದುಕೊಂಡ ಶಿಕ್ಷಕಿ…

    ನೋಯ್ಡಾ: ಶಿಸ್ತು ಕಾಪಾಡಲು ಹೋಗಿ ಶಿಕ್ಷಕಿ ತನ್ನ ಕೆಲಸವನ್ನು ಕಳೆದುಕೊಂಡ ಘಟನೆ ಉತ್ತರ ಪ್ರದೇಶ ನೋಯ್ಡಾದ ಸೆಕ್ಟರ್ ನಂ.168ರ ಶಾಲೆಯೊಂದರಲ್ಲಿ ನಡೆದಿದೆ.

    ಇದನ್ನೂ ಓದಿ: ರಾಹುಲ್ ಗಾಂಧಿಗೆ ಹಿನ್ನಡೆ: ಮೋದಿ ಉಪನಾಮ ಪ್ರಕರಣದ ಮೇಲ್ಮನವಿ ವಜಾಗೊಳಿಸಿದ ಗುಜರಾತ್​ ಹೈಕೋರ್ಟ್

    ಬುಧವಾರದಂದು ಶಾಂತಿ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಈ ಘಟನೆ ಜರುಗಿದ್ದು. ಸುಷ್ಮಾ ಎಂಬ ಶಿಕ್ಷಕಿಯು ಕೆಲಸವನ್ನು ಕಳೆದುಕೊಂಡಿದ್ದಾಳೆ. ಶಾಲೆಯ ಶಿಸ್ತು ಪ್ರಭಾರಿ ಸುಷ್ಮಾ, ಕಳೆದ ಹಲವು ದಿನಗಳಿಂದ ತಮ್ಮ ಕೂದಲನ್ನು ಟ್ರಿಮ್ ಮಾಡುವಂತೆ ವಿದ್ಯಾರ್ಥಿಗಳನ್ನು ಹೇಳುತ್ತಿದ್ದರು. ಈ ಮಾತನ್ನು ವಿದ್ಯಾರ್ಥಿಗಳು ನಿರ್ಲಕ್ಷಿಸಿದ್ದರು.

    ಕೊನೆಗೆ ಬುಧವಾರದಂದು ಶಿಕ್ಷಕಿಯು ಸುಮಾರು 15 ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸುವ ಸಲುವಾಗಿ ತಾವೇ ಅವರ ಕೂದಲನ್ನು ಶಿಸ್ತಿನಿಂದ ಕತ್ತರಿಸಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿ ಗುರುವಾರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

     ಇದನ್ನೂ ಓದಿ: ರಾಜಕೀಯ ಪ್ರೇರಿತ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡಬೇಡಿ: ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಸಂದೇಶ

    ಕೊನೆಗೆ ಶಾಲಾ ಆಡಳಿತ ಮಂಡಳಿಯು ಶಿಕ್ಷಕರ ಸೇವೆಯನ್ನು ತಕ್ಷಣವೇ ವಜಾಗೊಳಿಸಿದ್ದು, ಇಂತಹ ಘಟನೆಗಳು ಪುನರಾವರ್ತನೆಯಾಗುವುದಿಲ್ಲ. ನಮ್ಮದು ಪ್ರತಿಷ್ಠಿತ ಸಂಸ್ಥೆಯಾಗಿದ್ದು. ನಾವು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಶಾಲೆಯ ಅಧ್ಯಕ್ಷರು ಹೇಳಿದರು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts