ಸಿನಿಮಾ

ಬೇಸಿಗೆಯಲ್ಲಿ ಹೀಗಿರಲಿ ನಿಮ್ಮ ಕೂದಲಿನ ಆರೈಕೆ: ಟಿಪ್ಸ್ ಹಾಗೂ ಟ್ರಿಕ್ಸ್​

ಬೆಂಗಳೂರು: ಪ್ರತಿಯೊಂದು ಆರೋಗ್ಯ ಸಮಸ್ಯೆಗೂ ಪರಿಹಾರ ಇದ್ದೇ ಇದೆ. ಹಲವಾರು ಜನರು ಇತ್ತೀಚೆಗೆ ಕೂದಲಿಗೆ ಸಂಬಂಧಿಸಿದ ತೊಂದರೆಗಳನ್ನು ಎದರಿಸುತ್ತಿದ್ದಾರೆ. ಕೂದಲು ಉದರುವಿಕೆ, ಬಿಳಿ ಕೂದಲಿನ ಸಮಸ್ಯೆ, ಹೊಟ್ಟಿನ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಬೇಸಿಗೆಯಲ್ಲಿ ಕೂದಲಿನ ಕಾಳಜಿಯನ್ನು ವಹಿಸುವುದು ಮುಖ್ಯವಾಗಿದೆ.

ಬಿಸಿಲು, ಶಾಖ, ಆರ್ದ್ರತೆಯು ಕೂದಲಿಗೆ ಹೆಚ್ಚು ಹಾನಿಯನ್ನು ಉಂಟು ಮಾಡುತ್ತವೆ. ಪ್ರತಿಯೊಬ್ಬ ವ್ಯಕ್ತಿಯ ಕೂದಲು ಭಿನ್ನತೆಯನ್ನು ಹೊಂದಿದ್ದು, ಎಲ್ಲರೂ ತಮ್ಮ ಕೂದಲಿಗೆ ತಕ್ಕಂತೆ ಆರೈಕೆ ಹಾಗೂ ಕಾಳಜಿಯನ್ನು ವಹಿಸುವುದು ಉತ್ತಮ. ಅದಕ್ಕಾಗಿ ಹಲವು ಕ್ರಮಗಳನ್ನು ಅನುಸರಿಸಬಹುದಾಗಿದೆ.

ಇದನ್ನೂ ಓದಿ: ನಕಲಿ ಬೆರಳಚ್ಚು ಪ್ರತಿ ಬಳಸಿ ಹಣ ದೋಚುತ್ತಿದ್ದ ಖದೀಮರು; ಯುಪಿ ಪೊಲೀಸರ ಭರ್ಜರಿ ಕಾರ್ಯಾಚರಣೆ

ತಲೆಗೆ ಶಾಂಪು ಹಾಕಿದ ನಂತರ ತೊಳೆಯಲು ತಣ್ಣನೆಯ ನೀರನ್ನು ಬಳಸಬೇಕು. ಬಿಸಿ ನೀರು ಕೇವಲ ನಮ್ಮ ಚರ್ಮವನ್ನು ಅಷ್ಟೇ ಅಲ್ಲ ಕೂದಲು ಹಾಗೂ ನೆತ್ತಿಯನ್ನು ಸಹ ಹಾನಿ ಮಾಡುತ್ತದೆ. ತಣ್ಣನೆಯ ನೀರು ನಮ್ಮ ಕೂದಲನ್ನು ಸದೃಢಗೊಳಿಸುವುದರ ಜತೆಗೆ ಹೊಳೆಯುವಂತೆ ಮಾಡುತ್ತದೆ. ಅಲ್ಲದೇ ಕೂದಲನ್ನು ದೀರ್ಘಕಾಲದವರೆಗೆ ಒದ್ದೆಯಾಗಿರಿಸುವುದು ಅನಾರೋಗ್ಯಕ್ಕೆ ದಾರಿ ಮಾಡಕೊಡಬಹುದು.

ಕೂದಲನ್ನು ಸೆಟ್​ ಮಾಡಲು ಅಥವಾ ಬೇಗ ಒಣಗಿಸಲು ಹೇರ್​ ಡ್ರೈಯರ್​ ಅನ್ನು ಅತಿಯಾಗಿ ಬಿಸಿ ಮಾಡಬೇಡಿ. ನೆತ್ತಿಯ ಮಸಾಜ್​ ರಕ್ತ ಪರಿಚಲನೆಯನ್ನು ಉತ್ತೇಜಿಸುವುದರಿಂದ ಇದು ಕೂದಲನ್ನು ಪೋಷಿಸಲು ಸಹಾಯಕವಾಗಿದೆ. ಸರಿಯಾದ ಮಸಾಜ್​ ಹಾಗೂ ಚಿಕಿತ್ಸಾ ಕ್ರಮ ಕೂದಲಿಗೆ ಉತ್ತಮ ಪೋಷಣೆಯನ್ನು ನೀಡುತ್ತದೆ. ಕನಿಷ್ಠ ಎರಡು ಅಥವಾ ಮೂರು ಬಾರಿ ಹೇರ್ ಮಸಾಜ್ ಮಾಡುವುದರಿಂದ ಕೂದಲಿಗೆ ಹೊಳಪು ನೀಡುತ್ತದೆ.

ಒಂದು ವೇಳೆ ನೀವು ಈಗಾಗಲೇ ಪಾಲಿಸುತ್ತಿರುವ ಕೇಶ ವಿನ್ಯಾಸ ಸಡಿಲಗೊಳ್ಳುತ್ತಿದ್ದರೆ, ಇದಕ್ಕಾಗಿ ಹಗುರವಾದ ಸೆಟ್ಟಿಂಗ್ ಸ್ಪ್ರೇ ಅಥವಾ ಕೋಲ್ಡ್ ಶಾಟ್‌ನೊಂದಿಗೆ ಕೇಶವಿನ್ಯಾಸವನ್ನು ಮರು ಹೊಂದಿಸಿಕೊಳ್ಳಬಹುದಾಗಿದೆ. (ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್