More

    ಜನರ ದೂರು ಆಲಿಸದ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ: ತಾವೂ ಸಂಬಳ ಪಡೆಯಲಿಲ್ಲ, ಬೇರೆಯವರಿಗೂ ಕೊಡಲಿಲ್ಲ!

    ಭೋಪಾಲ್‌ (ಮಧ್ಯಪ್ರದೇಶ): ಸರ್ಕಾರಿ ಅಧಿಕಾರಿಗಳು ಎಂದರೆ ಮೊದಲಿಗೆ ಜನಸಾಮಾನ್ಯರಿಗೆ ನೆನಪಿಗೆ ಬರುವುದು ಭ್ರಷ್ಟಾಚಾರ. ದೊಡ್ಡ ದೊಡ್ಡ ಇಲಾಖೆಗಳಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ತುಂಬಾ ನಿಷ್ಠೆ, ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ಬಹುತೇಕರು ಭ್ರಷ್ಟಾಚಾರದಲ್ಲಿ ತೊಡಗಿರುವ ಕಾರಣ, ಇಂಥದ್ದೊಂದು ಮಾತು ಕೇಳಿಬರುತ್ತದೆ.

    ಆದರೆ ಇಲ್ಲೊಬ್ಬ ಐಎಎಸ್‌ ಅಧಿಕಾರಿ ತಮ್ಮ ಸಂಬಳವನ್ನೇ ತಡೆಹಿಡಿದಿರುವ ಅಪರೂಪದ ಘಟನೆ ನಡೆದಿದೆ. ಮಧ್ಯಪ್ರದೇಶದ ಜಬಲ್‌ಪುರದ ಡಿಸ್ಟ್ರಿಕ್ಟ್​ ಮ್ಯಾಜಿಸ್ಟ್ರೇಟ್ (ಐಎಎಸ್‌ ಅಧಿಕಾರಿ) ಕರ್ಮವೀರ ಶರ್ಮ ಅವರು ಇಂಥದ್ದೊಂದು ಕಾರ್ಯ ಮಾಡಿದ್ದು, ಭಾರಿ ಸುದ್ದಿಯಾಗಿದ್ದಾರೆ.

    ಜನರ ದೂರು ಪರಿಹಾರ ಮಾಡುವಲ್ಲಿ ವಿಳಂಬವಾದ ಕಾರಣ ಅವರು ತಮ್ಮ ಸಂಬಳವನ್ನೇ ಅವರು ತಡೆಹಿಡಿದಿದ್ದಾರೆ. ಆಯಾ ತಿಂಗಳಿನಲ್ಲಿ ಇಂತಿಷ್ಟು ಜನರ ಸಮಸ್ಯೆ ಪರಿಹಾರ ಮಾಡುವ ಗುರಿಯನ್ನು ಇವರು ಹೊಂದಿದ್ದು, ಅಷ್ಟು ಪ್ರಮಾಣದ ಜನರ ಕುಂದು ಕೊರತೆ ಪರಿಹರಿಸಲು ಸಾಧ್ಯವಿಲ್ಲದ ಕಾರಣ ಬೇಸರಗೊಂಡು ಸಂಬಳವೇ ಬೇಡ ಎಂದು ಹೇಳಿದ್ದಾರೆ. ಕೆಲಸ ಪೂರ್ಣಗೊಳಿಸಿದ ಮೇಲೆ ಈ ಸಂಬಳ ಪಡೆಯುವುದಾಗಿ ಹೇಳಿದ್ದಾರೆ.

    ಮುಖ್ಯಮಂತ್ರಿಗಳ ಸಹಾಯವಾಣಿ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲಾ ಬಾಕಿ ಕೆಲಸಗಳು ಪೂರ್ಣಗೊಳ್ಳುವವರೆಗೆ ಸಂಬಳ ಪಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಅವರ ಈ ಘೋಷಣೆ ಅಷ್ಟಕ್ಕೇ ನಿಂತಿಲ್ಲ. ಈ ರೀತಿ ಕುಂದು ಕೊರತೆ ಪರಿಹರಿಸದೇ ಇರಲು ಇಡೀ ಇಲಾಖೆಯೇ ಕಾರಣ ಎಂಬುದನ್ನು ಅರಿತಿರುವ ಅವರು, ತಮ್ಮ ಜತೆ ಇಡೀ ಇಲಾಖೆಯ ಅಧಿಕಾರಿಗಳ ವೇತನವನ್ನು ಸಹ ತಡೆಹಿಡಿದಿದ್ದಾರೆ!
    100 ದಿನಗಳಿಗಿಂತ ಹೆಚ್ಚು ಕೆಲಸ ಬಾಕಿಯಿರುವ ಪ್ರಕರಣಗಳಲ್ಲಿ, ಸಮಸ್ಯೆಗಳನ್ನು ಪರಿಹರಿಸುವವರೆಗೆ ಅಧಿಕಾರಿಗಳು ತಮ್ಮ ವೇತನವನ್ನು ಪಡೆಯುವಂತಿಲ್ಲ ಎಂದು ಆದೇಶ ನೀಡಿದ್ದಾರೆ. ಅಲ್ಲದೆ, ಅವರ ಎಲ್ಲಾ ಇನ್‌ಕ್ರಿಮೆಂಟ್‌ಗಳನ್ನು ತಡೆಹಿಡಿಯುವಂತೆ ಆದೇಶಿಸಿದ್ದಾರೆ.
    ನಂತರ ಈ ಕುರಿತು ಮಾತನಾಡಿರುವ ಅವರು, ಮುಖ್ಯಮಂತ್ರಿಗಳ ಸಹಾಯವಾಣಿ ವ್ಯವಸ್ಥೆ ಕಾರ್ಯವೈಖರಿ ಬಗ್ಗೆ ಅಸಮಾಧಾನವಿದೆ. ಈ ವಿಚಾರಕ್ಕೆ ನಾನೇ ನೈತಿಕ ಹೊಣೆ ಹೊರುತ್ತೇನೆ, ಆದ್ದರಿಂದ ನನ್ನ ಸಂಬಳ ಸೇರಿದಂತೆ ಇಲಾಖೆಯ ಅಧಿಕಾರಿಗಳ ಸಂಬಳ ತಡೆಹಿಡಿದಿದ್ದೇನೆ ಎಂದಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನುಮುಂದೆ ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಣೆ ಮಾಡಲು ಇದು ಸಹಾಯವಾಗುತ್ತದೆ ಎಂದಿದ್ದಾರೆ.

    ಕೋವಿಡ್ ಅವಧಿಯಲ್ಲಿ ಸಿಎಂ ಸಹಾಯವಾಣಿ ತಿಂಗಳಿಗೆ 10 ಸಾವಿರಕ್ಕೂ ಹೆಚ್ಚು ದೂರುಗಳನ್ನು ಪರಿಹರಿಸಿದೆ. ಈಗ ಸಂಖ್ಯೆ ಎಂಟು ಸಾವಿರಕ್ಕೆ ಇಳಿದಿದೆ ಎಂದಿರುವ ಅವರು 100 ದಿನಗಳಿಂದ ಬಾಕಿ ಉಳಿದಿರುವ ದೂರುಗಳ ವಿಲೇವಾರಿಗೆ ಡಿಸೆಂಬರ್ 31ರವರೆಗೆ ಗಡುವು ವಿಧಿಸಿದ್ದಾರೆ.

    ಗಂಡ ಇನ್ನೊಂದು ಸಂಬಂಧ ಹೊಂದಿದ್ರೆ ತಪ್ಪಾಗಲ್ವಾ? ಕಾನೂನು ಪ್ರಕಾರ ಪತ್ನಿ ಏನೇನು ಮಾಡ್ಬೋದು?

    VIDEO: ಮಹಾಮಸ್ತಕಾಭಿಷೇಕದ ವೇಳೆ ಕಣ್ಣುಬಿಟ್ಟ ಅಯ್ಯಪ್ಪ? ಮಣಿಕಂಠನ ವಿಡಿಯೋ ನೋಡಿ ಪುಳಕಗೊಂಡ ಭಕ್ತಾದಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts