More

    ಕ್ಲಿನಿಕಲ್ ಅಕ್ರಮ ಬಯಲಿಗೆಳೆದ ಪತ್ರಕರ್ತನ ಭೀಕರ ಹತ್ಯೆಗೆ ಬಿಗ್‌ ಟ್ವಿಸ್ಟ್‌- ಕೊಲೆಗೆ ಕಾರಣವಾಗಿದ್ದು ತ್ರಿಕೋನ ಪ್ರೇಮ!

    ಪಟ್ನಾ: ನಾಲ್ಕು ದಿನಗಳ ಹಿಂದೆ ಪತ್ರಕರ್ತ ಮತ್ತು ಆರ್​ಟಿಐ ಕಾರ್ಯಕರ್ತ ಬುದ್ದಿನಾಥ್ ಝಾ ಅಲಿಯಾಸ್ ಅವಿನಾಶ್ ಝಾ ಅವರ ಅರ್ಧಂಬರ್ಧ ಸುಟ್ಟ ಶವವು ಪತ್ತೆಯಾಗಿತ್ತು. ಮಧುಬನಿಯ ರಸ್ತೆಯ ಬದಿ ಇವರ ಶವವನ್ನು ಎಸೆಯಲಾಗಿತ್ತು. ಕೊಲೆಯಾಗುವ ಕೆಲವು ದಿನಗಳ ಮೊದಲು ಕ್ಲಿನಿಕಲ್‌ ಅಕ್ರಮವೊಂದನ್ನು ಇವರು ಬಯಲು ಮಾಡಿದ್ದರು. ಇದೇ ಅವರ ಕೊಲೆಗೆ ಕಾರಣ ಎನ್ನಲಾಗಿತ್ತು. ಆದರೆ ಇದೀಗ ಈ ಪ್ರಕರಣಕ್ಕೆ ಭಾರಿ ಟ್ವಿಸ್ಟ್‌ ಸಿಕ್ಕಿದ್ದು, ಕೊಲೆಗೆ ತ್ರಿಕೋನ ಪ್ರೇಮ ಕಾರಣ ಎಂದಿದ್ದಾರೆ ಪೊಲೀಸರು.

    ಆಗಿದ್ದೇನೆಂದರೆ, ಕೊಲೆಯಾಗುವ ಎರಡು ದಿನಗಳ ಮುಂಚೆ ಅವರು ಫೇಸ್​ಬುಕ್​​​ನಲ್ಲಿ ಒಂದು ಒಂದು ವರದಿ ಪೋಸ್ಟ್ ಮಾಡಿದ್ದರು. ಕೆಲವೊಂದು ಮೆಡಿಕಲ್ ಕ್ಲಿನಿಕ್​ಗಳ ಬಗ್ಗೆ ಉಲ್ಲೇಖಿಸಿದ್ದ ಅವರು ನಕಲಿ ಕ್ಲಿನಿಕ್‌ ತೆರೆದು ಹೇಗೆ ಮೋಸ ಮಾಡಲಾಗುತ್ತಿದೆ ಎಂದು ವರದಿ ಮಾಡಿದ್ದರು. ಇದರ ಆಧಾರದ ಮೇಲೆ ಹಲವು ಕ್ಲಿನಿಕ್​​ಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗಿತ್ತು.

    ಕೆಲವೊಂದು ಕ್ಲಿನಿಕ್‌ಗಳನ್ನು ಮುಚ್ಚಲು ಆದೇಶಿದ್ದರೆ, ಕೆಲವಕ್ಕೆ ದಂಡ ವಿಧಿಸಲಾಗಿತ್ತು. ಇದರ ಬೆನ್ನಲ್ಲೇ ಬುದ್ಧಿನಾಥ್‌ ಅವರಿಗೆ ಬೆದರಿಕೆ ಕರೆ ಬರತೊಡಗಿದವು ಎನ್ನಲಾಗಿತ್ತು.
    ಎರಡು ದಿನಗಳ ಬಳಿಕ ಇವರನ್ನು ಬರ್ಬರವಾಗಿ ಹತ್ಯೆ ಮಾಡಿ ಶವ ಸುಟ್ಟುಹಾಕಲಾಗಿತ್ತು. ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸಿದಾಗ ರಾತ್ರಿ 9 ರಿಂದ ಹಲವಾರು ಬಾರಿ ಕಿರಿದಾದ ಲೇನ್‌ನಲ್ಲಿರುವ ತನ್ನ ಮನೆಯಿಂದ ಹೊರಗೆ ಬರುವುದು ಮತ್ತು ಹತ್ತಿರದ ಮುಖ್ಯ ರಸ್ತೆಯಲ್ಲಿ ತನ್ನ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು ಅದರಲ್ಲಿ ದಾಖಲಾಗಿತ್ತು. ರಾತ್ರಿ 10.05 ರಿಂದ 101.10 ರ ನಡುವೆ ಅವರನ್ನು , ಸ್ಥಳೀಯ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬರು ನೋಡಿದ್ದಾರೆ. ಅದರ ನಂತರ ಅವರು ನಾಪತ್ತೆಯಾಗಿದ್ದರು. ಕುಟುಂಬಸ್ಥರು ದೂರು ದಾಖಲು ಮಾಡಿದ್ದರು. ಕ್ಲಿನಿಕ್‌ ಕುರಿತ ವರದಿಗೂ, ಈ ಕೊಲೆಗೂ ಸಂಬಂಧವಿದೆಯೇ ಎಂದು ಎಲ್ಲೆಡೆ ಸುದ್ದಿಯಾಗಿದ್ದವು.

    ಆದರೆ ಇದರ ಬೆನ್ನಟ್ಟಿ ಹೋದಾಗ ಕಂಡುಬಂದದ್ದು ತ್ರಿಕೋನ ಪ್ರೇಮ ಕಥನ ಎಂದಿದ್ದಾರೆ ಪೊಲೀಸರು. ಸಿಸಿಟಿವಿ ಹಾಗೂ ಇತರ ಸಾಕ್ಷ್ಯಾಧಾರಗಳ ಮೇಲೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ರೋಷನ್‌ ಕುಮಾರ್‌, ಬಿಟ್ಟು ಕುಮಾರ್‌, ದೀಪಕ್‌ ಕುಮಾರ್‌, ಪವನ್‌ ಕುಮಾರ್‌, ಮನೀಶ್‌ ಕುಮಾರ್‌ ಮತ್ತು ಪೂರ್ಣಕಲಾ ದೇವಿ ಪೊಲೀಸರಿಗೆ ಸೆರೆ ಸಿಕ್ಕಿದ್ದರು.

    ಇವರನ್ನು ವಿಚಾರಿಸಿದಾಗ ತಿಳಿದುಬಂದದ್ದೇನೆಂದರೆ, ಪೂರ್ಣ ಕಲಾ ದೇವಿ ಬುದ್ಧಿನಾಥ್ ಝಾ ಅವರನ್ನು ಪ್ರೀತಿಸುತ್ತಿದ್ದಳು. ಆದರೆ ಈಕೆಯನ್ನು ಪವನ್ ಕುಮಾರ್ ಎಂಬಾತ ಪ್ರೀತಿಸುತ್ತಿದ್ದ. ಆದರೆ ಪವನ್‌ನನ್ನು ಕಂಡರೆ ಪೂರ್ಣ ಕಲಾ ದೇವಿಗೆ ಆಗುತ್ತಿರಲಿಲ್ಲ. ಆದರೆ ತನ್ನ ಹುಡುಗಿ ಝಾ ಜತೆ ಮಾತನಾಡುವುದನ್ನು ಪವನ್‌ ಸಹಿಸಲಿಲ್ಲ. ಈ ಹಿನ್ನೆಲೆಯಲ್ಲಿ ಆತನನ್ನು ಬಿಟ್ಟುಬಿಡುವಂತೆ ಯುವತಿಗೆ ಬೆದರಿಕೆ ಹಾಕುತ್ತಿದ್ದ. ಆದರೆ ಆಕೆ ಅದಕ್ಕೆ ಸುತರಾಂ ಒಪ್ಪಲಿಲ್ಲ. ತಾನು ಬುದ್ದಿನಾಥ್‌ನನ್ನು ಮರೆಯಲು ಸಾಧ್ಯವೇ ಇಲ್ಲ ಎಂದಳು.

    .ಇದೇ ಕಾರಣಕ್ಕೆ ಆತನನ್ನೇ ಮುಗಿಸಲು ಪವನ್‌ಕುಮಾರ್‌ ಹೊಂಚು ಹಾಕಿದ. ತನ್ನ ಸ್ನೇಹಿತರ ಜತೆಗೂಡಿ ಆತನ ಕೊಲೆಗೆ ಪ್ಲ್ಯಾನ್‌ ಮಾಡಿದ. ಈ ನಡುವೆಯೇ ಇನ್ನೊಬ್ಬ ಆರೋಪಿ ರೋಷನ್‌ ಕುಮಾರ್‌ ಅಕ್ರಮವಾಗಿ ಕ್ಲಿನಿಕ್‌ ನಡೆಸುತ್ತಿದ್ದ. ಅದನ್ನು ಮುಚ್ಚುವಂತೆ ಝಾ ಒತ್ತಡ ಹಾಕಿದ್ದ. ಆದ್ದರಿಂದ ಆತನೂ ಇವರನ್ನು ಕೊಲ್ಲುವ ಪ್ಲ್ಯಾನ್‌ ರೂಪಿಸಿದ್ದ. ಹೀಗೆ ಎಲ್ಲರೂ ಸೇರಿ ಈ ಕೊಲೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ.

    ಹುಚ್ಚನ ಸಾವಿಗೆ ಹೂವಿನಹಡಗಲಿಯಲ್ಲಿ ಶೋಕದ ಛಾಯೆ! ಈತ ಎಲ್ಲರಂಥಲ್ಲ… ವಿಐಪಿಗಳಂತೆ ಅಂತ್ಯಸಂಸ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts