More

    ಸೆಕ್ಸ್‌ ಮಾಡುವಾಗ ಮದ್ವೆ ಯೋಚನೆ ಬರಲಿಲ್ವಾ? ಅವನದ್ದು ಕಾಮ ಎನ್ನೋದೂ ತಿಳಿಯಲಿಲ್ವಾ?

    ಸೆಕ್ಸ್‌ ಮಾಡುವಾಗ ಮದ್ವೆ ಯೋಚನೆ ಬರಲಿಲ್ವಾ? ಅವನದ್ದು ಕಾಮ ಎನ್ನೋದೂ ತಿಳಿಯಲಿಲ್ವಾ?ಪ್ರಶ್ನೆ: ಮೇಡಂ ನನಗೀಗ ಸಾಯುವುದೊಂದೇ ದಾರಿಯಾಗಿದೆ. ಏನು ಮಾಡಬೇಕು ಎಂದೇ ತೋಚುತ್ತಿಲ್ಲ. ಕಾಲೇಜಿನಲ್ಲಿ ಇರುವಾಗ ಒಬ್ಬನನ್ನು ಪ್ರೀತಿಸಿದೆ. ಅವನೂ ನನ್ನನ್ನು ಪ್ರೀತಿಸುವ ನಾಟಕವಾಡಿದ. ಮದುವೆಯಾಗುತ್ತೇನೆ, ನಿನ್ನನ್ನು ಪ್ರೀತಿಸುತ್ತೇನೆ ಎಂದು ಕರೆದ. ಅವನನ್ನು ನಂಬಿ ನಾಲ್ಕೈದು ವರ್ಷ ಅವನ ದೇಹ ಸಂಪರ್ಕ ಬೆಳೆಸಿದೆ. ಮದುವೆ ಮುಂದಕ್ಕೆ ಹಾಕುತ್ತಾ ಬಂದವ ಈಗ ಹೇಳದೇ ಬೇರೆ ಮದುವೆಯಾಗಿ ಸುಖವಾಗಿದ್ದಾನೆ. ನಾನೇನು ಮಾಡಲಿ? ಸಾಯಬೇಕೆಂದು ಎನಿಸುತ್ತಿದೆ. ಈ ನೋವಿನಲ್ಲೇ ಊಟ-ತಿಂಡಿಯನ್ನೂ ಸರಿಯಾಗಿ ಮಾಡುತ್ತಿಲ್ಲ. ತುಂಬ ಸುಸ್ತೆನಿಸುತ್ತಿದೆ. ತಲೆಯ ಕೂದಲು ಉದುರಿ ತುಂಬ ತೆಳ್ಳಗಾಗಿದೆ.

    ಮುಖದ ಮೇಲೆ ಮೊಡವೆ ಮತ್ತು ಕಲೆಗಳು, ಬ್ಲಾಕ್‍ಹೆಡ್ಸ್, ವೈಟ್ ಹೆಡ್ಸ್ ಕೂಡ ಹೆಚ್ಚಾಗಿವೆ. ಬಣ್ಣವೂ ಮಾಸಿ ಹೋಗುತ್ತಿದೆ. ಇಷ್ಟಲ್ಲದೆ ಬಿಳಿಸೆರಗು ಜಾಸ್ತಿ ಹೋಗುತ್ತದೆ. ದಯವಿಟ್ಟು ಇದಕ್ಕೆಲ್ಲ ಪರಿಹಾರ ತಿಳಿಸಿ ಮೇಡಂ.

    ಉತ್ತರ: ಈ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲ ಕಳೆದುಕೊಂಡವರಂತೆ ಚಿಂತಿಸುತ್ತಿರುವಿರಲ್ಲ. ಇಷ್ಟು ವರ್ಷ ದೇಹ ಸಂಪರ್ಕ ಬೆಳೆಸಿದ್ದಿಯಲ್ಲ, ಪ್ರೇಮಕ್ಕೂ, ಕಾಮಕ್ಕೂ ವ್ಯತ್ಯಾಸ ಗೊತ್ತಾಗಲಿಲ್ವಾ? ಕರೆದಾಗಲೆಲ್ಲಾ ಹೋಗಿ ದೈಹಿಕ ಸಂಪರ್ಕದಲ್ಲಿರುವಾಗ ಎಚ್ಚರ ಇರಲಿಲ್ಲವೇ? ದೈಹಿಕ ಸಂಪರ್ಕಕ್ಕೆ ಹೋದಾಗ ಮದುವೆಯ ಬಗ್ಗೆ ಪ್ರಶ್ನಿಸಲಿಲ್ಲವೇ?

    ಅವನು ನಿಮ್ಮನ್ನು ಪ್ರೀತಿಸಿಲ್ಲ, ಕಾಮಿಸಿದ್ದಾನೆ. ಇರಲಿ. ಈಗ ಕೊರಗುವುದರಿಂದ ಯಾವ ಪ್ರಯೋಜನವೂ ಇಲ್ಲ. ಅವನು ಹೇಗೆ ನಿಮ್ಮನ್ನು ಮರೆತು ಮತ್ತೊಂದು ಮದುವೆಯಾಗಿ ಸಂತೋಷವಾಗಿದ್ದಾನೋ ನೀನು ಕೂಡ ಆಗಿದ್ದೆಲ್ಲವನ್ನೂ ಕೆಟ್ಟ ಕನಸು ಎಂದು ಮರೆತುಬಿಡುವುದು ಬಿಟ್ಟರೆ ಏನೂ ಮಾಡಲು ಆಗುವುದಿಲ್ಲ.

    ಕೊರಗಿ ಕುಳಿತುಕೊಳ್ಳುವ ಬದಲು ದೈಹಿಕವಾಗಿ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಯೋಚಿಸಬೇಕಿದೆ. ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡಿ. ಊಟ-ತಿಂಡಿಯನ್ನು ಸರಿಯಾಗಿ ಮಾಡದಿರುವುದು ಮತ್ತು ಚಿಂತೆಯಿಂದ ಸುಸ್ತು, ತಲೆಗೂದಲು ಉದುರುವುದು, ಬಿಳಿಸೆರಗು ಇವೆಲ್ಲವೂ ಕಾಣಿಸಿಕೊಂಡಿವೆ. ದಿನಕ್ಕೆ ಮೂರು ಲೀ. ನೀರು ಕುಡಿ. ಸೊಪ್ಪು, ತರಕಾರಿ, ಹಣ್ಣುಗಳನ್ನು ಸೇವಿಸಿ. ಮುಖವನ್ನು ದಿನಕ್ಕೆ 3-4 ಬಾರಿ ಬಿಸಿನೀರಿನಿಂದ ಮುಖ ತೊಳೆ. ಬೇವಿನಪುಡಿ, ಮೆಂತ್ಯಪುಡಿ, ನೆಲ್ಲಿಕಾಯಿ ಪುಡಿಯನ್ನು ಸಮಭಾಗ ತೆಗೆದುಕೊಂಡು ಗುಲಾಬಿ ಜಲದಲ್ಲಿ ಬೆರೆಸಿ ಲೇಪಿಸಿಕೊಂಡು ಒಂದು ಗಂಟೆಯ ನಂತರ ಮುಖ ತೊಳೆದಲ್ಲಿ ಮೊಡವೆ ಕಲೆಗಳು ಮಾಯವಾಗುತ್ತವೆ.

    ಬೆಡ್‌ರೂಮ್‌ಗೆ ಬಂದ ಏಲಿಯನ್‌: ಪುರುಷನಿಗಿಂತಲೂ ಇವೇ ಬೆಸ್ಟ್‌- ವಿಚಿತ್ರ ಅನುಭವ ಬಿಚ್ಚಿಟ್ಟ ನಟಿ!

    ಮಕ್ಕಳಾಗದೇ ಇರುವುದಕ್ಕೆ ವೀರ್ಯ ಕೌಂಟಿಂಗ್ ಕಡಿಮೆ ಇರುವುದೊಂದೇ ಕಾರಣವಲ್ಲ…

    ಅವಳ ಜತೆ ಮೊದಲು ಸಿಕ್ತಿದ್ದ ಸುಖ ಈಗ ಸಿಕ್ತಿಲ್ಲ, ಅವಳೂ ಇಂಟರೆಸ್ಟ್‌ ತೋರಿಸ್ತಿಲ್ಲ… ಮದುವೆ ಮುರಿದುಬಿಡಲೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts