More

    ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೇ ಮೀನು ವ್ಯಾಪಾರಕ್ಕಿಳಿದ ಪ್ರಸಿದ್ಧ ನಟ: ಅಪ್ಪನ ಹಾದಿ ತುಳಿದು ಕಣ್ಣೀರು…

    ಕೋಲ್ಕತಾ: ಲಾಕ್‌ಡೌನ್‌ ಎನ್ನುವುದು ಅದೆಷ್ಟೋ ಮಂದಿಯ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಅದರಲ್ಲಿಯೂ ಒಂದೇ ಉದ್ಯೋಗದ ಮೇಲೆ ಅವಲಂಬಿತರಾಗಿ ಬೇರೆ ಏನನ್ನೂ ಮಾಡುವುದು ತಿಳಿಯದವರ ಪಾಲಿಗಂತೂ ಕರೊನಾ ಅಕ್ಷರಶಃ ನರಕವನ್ನೇ ತೋರಿಸಿಬಿಟ್ಟಿದೆ.

    ಕರೊನಾ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಷ್ಟೋ ನಟರ ಬದುಕು ಕೂಡ ಬೀದಿಗೆ ಬಂದಿದೆ. ಬಂಗಾಳಿಯ ಪ್ರಸಿದ್ಧ ನಟ ಅರಿಂದರ್ ಪ್ರಮಣಿಕ್‍ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಕಿರುತೆರೆಯಲ್ಲಿ ಮನೆಮಾತಾಗಿರುವ ಈ ನಟನೀಗ ಕೆಲಸವಿಲ್ಲದೇ ಮೀನು ಮಾರಾಟಕ್ಕೆ ಇಳಿದಿದ್ದಾರೆ. ಮಾರಾಟದ ಕುರಿತು ಯಾವುದೇ ಅಭ್ಯಾಸವಿಲ್ಲದಿದ್ದರೂ, ಬದುಕು ಇದನ್ನು ಕಲಿಸುತ್ತಿದೆ ಎಂದು ಕಣ್ಣೀರಾಗಿದ್ದಾರೆ ನಟ.

    ಇವರ ತಂದೆ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಅದರಲ್ಲಿ ಅನುಭವಿಸುತ್ತಿದ್ದ ನಷ್ಟದಿಂದಾಗಿ, ಮಗನಿಗೆ ಈ ವೃತ್ತಿಯಿಂದ ದೂರವಿರಿಸಬೇಕು ಎನ್ನುವುದು ಅವರ ಆಸೆಯಾಗಿತ್ತು. ಪ್ರಮಣಿಕ್‌ ಅವರಿಗೆ ಬಾಲ್ಯದಿಂದಲೂ ನಟನಾಗುವ ಹುಚ್ಚು. ಅದೇ ದಾರಿಯಲ್ಲಿ ಸಾಗಿ ಕೊನೆಗೂ ಕಿರುತೆರೆಯಲ್ಲಿ ಮಿಂಚಿದರು. ಮಗ ಪ್ರಸಿದ್ಧಿಗೆ ಬರುತ್ತಿದ್ದಂತೆಯೇ ಅಪ್ಪ ತರಕಾರಿ ವ್ಯಾಪಾರ ಮಾಡುವುದನ್ನು ನಿಲ್ಲಿಸಿದರು.

    ಇಷ್ಟು ವರ್ಷ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಇದೀಗ ಉದ್ಯೋಗ ಇಲ್ಲದೆಯೇ ಮೀನು ವ್ಯಾಪಾರಕ್ಕೆ ಇಳಿದಿದ್ದಾರೆ. ತಂದೆ ತಮ್ಮಂತೆ ಮಗ ಆಗಬಾರದು ಎಂದು ಅಂದುಕೊಂಡಿದ್ದರು. ಆದರೆ ಅವರದ್ದೇ ಹಾದಿಯನ್ನು ತುಳಿಯುವ ಅನಿವಾರ್ಯತೆ ಉಂಟಾಗಿದೆ, ಇದರಿಂದ ತಂದೆಗೆ ತೀವ್ರವಾಗಿ ನೋವಾಗಿದೆ ಎಂದು ನಟ ಕಣ್ಣೀರು ಹಾಕಿದರು. ತಮಗೆ ವ್ಯಾಪಾರದ ಗಂಧಗಾಳಿಯೂ ಇಲ್ಲ. ಆದರೂ ಜೀವನ ಬಂಡಿಯನ್ನು ಸಾಗಿಸಲು ಇದು ಅನಿವಾರ್ಯವಾಗಿದೆ ಎಂದು ಹೇಳಿದರು.

    ಎಸ್‌ಎಸ್‌ಎಲ್‌ಸಿ ಪರೀಕ್ಷೆ ಭವಿಷ್ಯ ಹೈಕೋರ್ಟ್‌ ಕೈಯಲ್ಲಿ: ಎಕ್ಸಾಂ ನಡೆಸದಂತೆ ಕೋರಿ ಪಿಐಎಲ್‌

    ಆಮೀರ್‌ ಖಾನ್‌ ಡಿವೋರ್ಸ್‌ ಸುದ್ದಿ ಕೇಳಿ ‘ಥ್ಯಾಂಕ್‌ ಗಾಡ್‌’ ಎಂದ ನಟಿ ಸೋನಂ ಕಪೂರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts