More

    ಪ್ರಧಾನಿಗೆ ಬಹಿರಂಗ ಪತ್ರ: ರೈತರ ಸ್ಮಾರಕ, ಸಚಿವರ ವಜಾ ಸೇರಿದಂತೆ ಆರು ಬೇಡಿಕೆ ಇಟ್ಟ ಮೋರ್ಚಾ: ಏನೇನಿವೆ ಇದರಲ್ಲಿ?

    ನವದೆಹಲಿ : ಬಹು ವಿವಾದಿತ ಮೂರು ಕೃಷಿ ಕಾನೂನನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ಮೋದಿಯವರು ಘೋಷಿಸಿದ್ದರೂ, ಅದನ್ನು ಸಂಸತ್ತು ಅಂಗೀಕರಿಸುವವರೆಗೆ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಇದಾಗಲೇ ರೈತರು ಹೇಳಿದ್ದಾರೆ. ಈ ನಡುವೆಯೇ ಸಂಯುಕ್ತ ಕಿಸಾನ್ ಮೋರ್ಚಾವು ಭಾನುವಾರ ಪ್ರಧಾನಿಗೆ ಬಹಿರಂಗ ಪತ್ರ ಬರೆದಿದೆ.

    ತಮ್ಮ ಆರು ಬೇಡಿಕೆಗಳ ಬಗ್ಗೆ ಸರ್ಕಾರವು ತಕ್ಷಣವೇ ಸ್ಪಂದಿಸಿಬೇಕು. ಈ ಬಗ್ಗೆ ಮಾತುಕತೆ ನಡೆಸಬೇಕು. ಎಂಎಸ್‌ಪಿ ಖಾತರಿ ಕಾನೂನನ್ನು ಒಳಗೊಂಡಿರುವ ತಮ್ಮ ಆರು ಬೇಡಿಕೆಗಳ ಬಗ್ಗೆ ಸರ್ಕಾರ ಚರ್ಚೆ ನಡೆಸಿದರೆ ಮಾತ್ರ ಪ್ರತಿಭಟನೆಯನ್ನು ನಿಲ್ಲಿಸುವುದಾಗಿ ತಿಳಿಸಿದ್ದಾರೆ. ಇಲ್ಲದಿದ್ದರೆ ಚಳವಳಿ ಮುಂದುವರೆಯಲಿದೆ ಎಂದಿದೆ.

    sanyukta-kisan-morcha-wrote-an-open-letter-to-pm-modi

    ಆರು ಬೇಡಿಕೆಗಳೇನು?
    * ಸರ್ಕಾರವು ಎಲ್ಲಾ ರೈತರಿಗೆ C2+50% ಸೂತ್ರದ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು. ರೈತರು ಪ್ರಸ್ತಾಪಿಸಿದ ‘ವಿದ್ಯುತ್ ತಿದ್ದುಪಡಿ ಮಸೂದೆ, 2020/2021’ ಕರಡನ್ನು ಹಿಂದಕ್ಕೆ ಪಡೆಯಬೇಕು.

    * ಬೆಳೆ ತ್ಯಾಜ್ಯ ಸುಡುವ ರೈತರ ಮೇಲಿನ ದಂಡದ ನಿಬಂಧನೆಗಳನ್ನು ತೆಗೆದು ಹಾಕಬೇಕು

    * ಆಂದೋಲನದಲ್ಲಿ ತಮ್ಮ ಪಾತ್ರಕ್ಕಾಗಿ ದೆಹಲಿ, ಹರಿಯಾಣ, ಚಂಡೀಗಢ ಮತ್ತು ಉತ್ತರಪ್ರದೇಶದಂತಹ ರಾಜ್ಯಗಳ ಸಾವಿರಾರು ರೈತರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯಬೇಕು.

    * ಎಂಟು ಜನರ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು, ಅವರನ್ನು ತಕ್ಷಣವೇ ಬಂಧಿಸಬೇಕು.

    * ಪ್ರತಿಭಟನೆ ವೇಳೆ ಮೃತಪಟ್ಟ ಸುಮಾರು 700 ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು

    * ಈ ರೈತರ ಸ್ಮರಣಾರ್ಥ ಹುತಾತ್ಮರ ಸ್ಮಾರಕ ನಿರ್ಮಿಸಿ, ಸಿಂಗು ಗಡಿಯಲ್ಲಿ ಭೂಮಿ ಮಂಜೂರು ಮಾಡಬೇಕು.

    ಹಿರಿಯ ವಿರಶೈವ ಲಿಂಗಾಯಿತ ಜಗದ್ಗುರು ಡಾ. ಸಂಗನ ಬಸವ ಮಹಾಸ್ವಾಮಿಗಳು ಲಿಂಗೈಕ್ಯ

    ನ.26ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆತಂಕ! ಯಾವ್ಯಾವ ಭಾಗಗಳಲ್ಲಿ ಏನೇನು? ಹವಾಮಾನ ಇಲಾಖೆ ಮಾಹಿತಿ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts