More

    ಮತ್ತೊಂದು ಭೀಕರ ಅಪಘಾತ: 13 ಮಂದಿ ಸಾವು- 18 ಮಂದಿ ಸ್ಥಿತಿ ಚಿಂತಾಜನಕ

    ಕೊಲ್ಕತಾ: ಪ್ರವಾಸಕ್ಕೆ ಹೊರಟ ಬಾಲ್ಯ ಸ್ನೇಹಿತೆಯರ ಪೈಕಿ 11 ಮಂದಿ ಧಾರವಾಡದ ಸಮೀಪ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ನೆನಪು ಹಸಿರಾಗಿರುವ ಬೆನ್ನಲ್ಲೇ ಇದೀಗ ಟಾಟಾ ಮ್ಯಾಜಿಕ್ ಮತ್ತು ಮಾರುತಿ ವ್ಯಾನ್ ಮುಖಾಮುಖಿ ಡಿಕ್ಕಿಯಾಗಿ 13 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಭಯಾನಕ ಘಟನೆ ನಡೆದಿದೆ.

    ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿ ಜಲ್ದಡ್ಕ ಬ್ರಿಡ್ಜ್ ಬಳಿ. ಹಿಮದಿಂದ ರಸ್ತೆ ಕಾಣದಿದ್ದ ಹಿನ್ನೆಲೆಯಲ್ಲಿ ಈ ವಾಹನಗಳು ಮುಖಾಮುಖಿ ಡಿಕ್ಕಾಗಿರುವುದಾಗಿ ವರದಿಯಾಗಿದೆ. ಎರಡೂ ವಾಹನಗಳು ನಜ್ಜುಗುಜ್ಜಾಗಿವೆ.

    ಜಲ್‌ಪೈಗುರಿ ಜಿಲ್ಲೆಯ ದುಪ್​ಗುರಿಗೆ ಹೊರಟಿದ್ದ ಟಾಟಾ ಮ್ಯಾಜಿಕ್ ವಾಹನ ಲಾರಿಗೆ ಡಿಕ್ಕಿ ಹೊಡೆದ ಕಾರಣ ಲಾರಿ ಚಾಲಕ ನಿಯಂತ್ರಣ ತಪ್ಪಿ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮಿನಿವ್ಯಾನ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಾಥಮಿಕ ಮಾಹಿತಿಯ ಪ್ರಕಾರ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದು, 18 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ನಾಲ್ಕು ಮಂದಿಯನ್ನು ಜಲ್‌ಪೈಗುರಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‌ಗೆ, ಮೂವರನ್ನು ಉತ್ತರ ಬಂಗಾಲದ ವೈದ್ಯಕೀಯ ಕಾಲೇಜ್‌ಗೆ, ಒಬ್ಬರನ್ನು ಜಲ್‌ಪೈಗುರಿ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

    ಹುಕ್ಕಾ ಬಾರ್​ನಲ್ಲಿ ಡಿಶುಂ ಡಿಶುಂ: ಗಲಾಟೆ ನಡುವೆ ಯುವತಿ ಸುಸ್ತೋ ಸುಸ್ತು- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಉನ್ನತ ಹುದ್ದೆಗಾಗಿ ಯುವರಾಜ್​ಗೆ ಲಂಚ ನೀಡಿದ ನಿವೃತ್ತ ನ್ಯಾಯಮೂರ್ತಿ ವಿರುದ್ಧ ದೂರು

    VIDEO: ಹೆಡ್‌ಫೋನ್‌ನಿಂದ ಕುತ್ತು: ಮಹಿಳೆ ಮೇಲೆ ಹತ್ತಿದ ರೈಲು- ಸಿಸಿಟಿಯಲ್ಲಿ ಭಯಾನಕ ದೃಶ್ಯ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts