More

    VIDEO: ನನ್ನನ್ನು ಕೊಂದುಬಿಡಿ… ಪ್ಲೀಸ್​ ಮಕ್ಕಳನ್ನು ಬಿಟ್ಟುಬಿಡಿ- ಮಂಡಿಯೂರಿ ಕುಳಿತ ಸಿಸ್ಟರ್​!

    ಮ್ಯಾನ್ಮಾರ್​: ಮ್ಯಾನ್ಮಾರ್‌ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಅಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಈ ಕಾರಣಕ್ಕಾಗಿ ಮ್ಯಾನ್ಮಾರ್‌ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ.

    ಫೆಬ್ರವರಿ 1ರಂದು ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಪದಚ್ಯುತ ಮಾಡಿದ ಬಳಿಕ ಈ ಹಿಂಸಾಚಾರ ನಡೆಯುತ್ತಿದೆ. ಅದೇ ಇನ್ನೊಂದೆಡೆ, ಸೇನಾ ದಂಗೆ ನಡೆದು ಮತ್ತೆ ಪ್ರಜಾಪ್ರಭುತ್ವ ಸ್ಥಾಪನೆಗೆ ಒತ್ತಾಯಿಸಿ ಹೋರಾಟಗಳು ನಡೆಯುತ್ತಿವೆ. ಪ್ರಜಾಪ್ರಭುತ್ವವನ್ನು ಮರಳಿಸುವುದಕ್ಕೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ ಮಿಲಿಟರಿ ಪಡೆಯಿಂದ ಬಲಪ್ರಯೋಗ, ಅಶ್ರುವಾಯು, ಜಲಫಿರಂಗಿ, ರಬ್ಬರ್ ಗುಂಡುಗಳು ಮತ್ತು ಜೀವಂತ ಗುಂಡುಗಳನ್ನು ಬಳಸಿ, ಬಲಪ್ರಯೋಗವನ್ನು ನಿರಂತರವಾಗಿ ಹೆಚ್ಚುತ್ತಲೇ ಸಾಗಿವೆ.

    ಈ ಬಗ್ಗೆ ಭೀಕರ ದಿನಗಳನ್ನು ನೆನಪಿಸಿಕೊಂಡಿರುವ ಪೊಲೀಸ್ ಲ್ಯಾನ್ಸ್ ಕಾರ್ಪೋರಲ್, ಫೆಬ್ರವರಿ 27 ರಂದು ಮ್ಯಾನ್ಮಾರ್ ಪಟ್ಟಣ ಖಂಪತ್‌ನಲ್ಲಿ ಗುಂಪು ಚದುರಿಸಲು ಪ್ರತಿಭಟನಾಕಾರರತ್ತ ಸಬ್‌ಮಷಿನ್ ಗನ್ನಿಂದ ಗುಂಡು ಹಾರಿಸಲು ಆದೇಶಿಸಿದ್ದರು. ಸಾಯುವವರೆಗೂ ಗುಂಡು ಹಾರಿಸಲು ಆದೇಶವಿತ್ತು. ಆದರೆ, ನಾನು ಆ ಕ್ರೂರ ಆದೇಶವನ್ನು ನಿರಾಕರಿಸಿದೆ ಎಂದು ಹೇಳಿದ್ದಾರೆ. ಇದನ್ನು ಪಾಲಿಸಲು ಅವರಿಗೆ ಮನಸ್ಸಾಗದೇ ರಾಜೀನಾಮೆ ಕೊಟ್ಟು ಭಾರತಕ್ಕೆ ಬಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ಈ ರೀತಿ ಅಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಅಂಥದ್ದೇ ಒಂದು ಸಂದರ್ಭದ ಫೋಟೋ ಇದೀಗ ವೈರಲ್​ ಆಗಿದೆ.
    ಅದೇನೆಂದರೆ, ಕ್ಯಾಥೋಲಿಕ್ ಸನ್ಯಾಸಿನಿಯೊಬ್ಬರು ಬಿಳಿಯ ಡ್ರೆಸ್ ಧರಿಸಿದ್ದು, ಮಂಡಿಯೂರಿ ಕುಳಿತು ಬೇಡಿಕೊಳ್ಳುತ್ತಿರುವ ದೃಶ್ಯವಿದು. ಪ್ರತಿಭಟನಾ ನಿರತರ ಮೇಲೆ ದಾಳಿ ನಡೆಸಲು ಸಿದ್ಧವಾಗಿದ್ದ ಮಿಲಿಟರಿ ಎದುರು ಆಕೆ ಬೇಡಿಕೊಳ್ಳುತ್ತಿರುವ ದೃಶ್ಯವಿದಾಗಿದೆ.

    ಮಂಡಿಯೂರಿ ಕುಳಿತ ಸಿಸ್ಟರ್… ಮಕ್ಕಳನ್ನು ಗುಂಡಿಟ್ಟು ಕೊಲ್ಲಬೇಡಿ, ಚಿತ್ರಹಿಂಸೆ ಕೊಡಬೇಡಿ, ಬದಲಿಗೆ ನನ್ನನ್ನು ಗುಂಡಿಟ್ಟು ಕೊಲ್ಲಿ ಎಂದು ಬೇಡಿಕೊಳ್ಳುತ್ತಿರುವ ದೃಶ್ಯ ಇದಾಗಿದೆ.

    ಪೊಲೀಸರು ಪ್ರತಿಭಟನಾಕಾರರ ಗುಂಪಿನತ್ತ ಗುಂಡು ಹಾರಿಸಲು ಆರಂಭಿಸಿದರು. ಅಲ್ಲಿಯೇ ಇದ್ದ ಮಕ್ಕಳನ್ನೂ ಅವರು ಬಿಡಲಿಲ್ಲ. ಆ ಸಮಯದಲ್ಲಿ ಮಕ್ಕಳು ಗಾಬರಿಯಿಂದ ಮುಂದೆ ಓಡಿದರು. ಇದರಿಂದ ಅಲ್ಲಿಯೇ ಇದ್ದ ಸಿಸ್ಟರ್​ ಅಲ್ಲಿಯೇ ಕುಳಿತು ಬಿಟ್ಟು ಈ ರೀತಿ ಕೇಳಿಕೊಂಡಿದ್ದಾರೆ.

    45 ವರ್ಷದ ಸನ್ಯಾಸಿನಿಯಾಗಿರುವ ಇವರ ಎದುರಿಗೇ ಗುಂಡು ಹಾರಿಸಿದಾಗ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಮಕ್ಕಳು ಭಯಭೀತರಾಗಿ ಕೆಂಗೆಟ್ಟು ಹೋಗಿದ್ದಾರೆ. ಅಂಥ ಸಂದರ್ಭದಲ್ಲಿ ಹೀಗೆ ಬೇಡಿಕೊಳ್ಳುತ್ತಿರುವ ದೃಶ್ಯವಾಗಿರುವ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

    ಇಲ್ಲಿದೆ ನೋಡಿ ವಿಡಿಯೋ: ಕೃಪೆ ದಿ ಟ್ರಿಬ್ಯೂಟ್​

    2+3+4 ನಿಗೂಢ ಫಾರ್ಮುಲಾ ಹೇಳಿ ತಲೆಗೆ ಹುಳುಬಿಟ್ಟ ಜಾರಕಿಹೊಳಿ- ಬೆಂಬಲಿಗರು ಬಿಡಿಸಿದರು ಈ ಒಗಟು!

    ಸುಂದರ ಆಂಟಿಯ ಮಾತಿಗೆ ಮರುಳಾದ 73ರ ಅಜ್ಜ ಮದ್ವೆನೂ ಆದ… ರಾತ್ರಿ ನಡೆಯಿತೊಂದು ದುರಂತ!

    ಟೈಪಿಂಗ್​, ಷಾರ್ಟ್​ಹ್ಯಾಂಡ್​ ಕಲಿತಿರುವಿರಾ? ಕೋರ್ಟ್​ನಲ್ಲಿವೆ 18 ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts