More

    ಎಸ್‌ಎಸ್‌ಎಲ್‌ಸಿಯಿಂದ ವಿವಿಧ ಪದವಿ: ಕರಾವಳಿ ನಿರ್ವಹಣೆ ಕೇಂದ್ರದಲ್ಲಿ 107 ಹುದ್ದೆಗಳಿಗೆ ಅರ್ಜಿ ಆಹ್ವಾನ

    ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣೆ ಕೇಂದ್ರ (ನ್ಯಾಷನಲ್​ ಸೆಂಟರ್​ ಫಾರ್​ ಸಸ್ಟೇನಬಲ್​ ಕೋಸ್ಟಲ್​ ಮ್ಯಾನೇಜ್​ಮೆಂಟ್​- ಎನ್​ಸಿಎಸ್​ಸಿಎಂ) ಸಂಶೋಧನಾ ಸಂಸ್ಥೆಯಾಗಿದ್ದು, ಪರಿಸರ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಸಂಸ್ಥೆಯ ಚೆನ್ನೈ ಟಕಕ್ಕೆ ಪ್ರಾಜೆಕ್ಟ್​ ಆಧಾರಿತ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ.
    ಒಟ್ಟು ಹುದ್ದೆಗಳು: 103

    ಎನ್​ಸಿಎಸ್​ಸಿಎಂನಲ್ಲಿ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ಷೇತ್ರ ಚೆನ್ನೈ ಆಗಿರಲಿದ್ದು, ನಂತರದ ದಿನಗಳಲ್ಲಿ ದೇಶಾದ್ಯಂತ ಇರುವ ಎನ್​ಸಿಎಸ್​ಸಿಎಂನ ಯಾವುದೇ ಟಕಕ್ಕಾದರೂ ವರ್ಗ ಮಾಡಬಹುದಾಗಿದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಅರ್ಜಿ ಸಲ್ಲಿಸಬಹುದು. ಒಬ್ಬ ಅಭ್ಯರ್ಥಿ ಯಾವುದಾದರೂ 2 ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ, ಕೌಶಲ, ಮೀಸಲಾತಿ ಆಧರಿಸಿ 1:10ರ ಅನುಪಾತದಲ್ಲಿ ಶಾರ್ಟ್​ಲಿಸ್ಟ್​ ಮಾಡಿ ದಾಖಲೆ ಪರಿಶೀಲನೆ ನಡೆಸಿ, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

    ಹುದ್ದೆ ವಿವರ
    * ಪ್ರಾಜೆಕ್ಟ್​ ಅಸೋಸಿಯೇಟ್​ ಐಐಐ – 2 * ಪ್ರಾಜೆಕ್ಟ್​ ಸೈಂಟಿಸ್ಟ್​ ಐಐಐ – 2 * ಪ್ರಾಜೆಕ್ಟ್​ ಸೈಂಟಿಸ್ಟ್​ ಐಐ – 7 * ಪ್ರಾಜೆಕ್ಟ್​ ಸೈಂಟಿಸ್ಟ್​ ಐ – 13 * ಪ್ರಾಜೆಕ್ಟ್​ ಅಸೋಸಿಯೇಟ್​ ಐಐಐ – 34 * ಪ್ರಾಜೆಕ್ಟ್​ ಅಸೋಸಿಯೇಟ್​ ಐಐ – 20 * ಪ್ರಾಜೆಕ್ಟ್​ ಅಸೋಸಿಯೇಟ್​ ಐ – 7 * ರಿಸರ್ಚ್​ ಅಸಿಸ್ಟೆಂಟ್​ – 2 *ಟೆಕ್ನಿಕಲ್​ ಇಂಜಿನಿಯರ್​ ಐ್ಖ – 1 * ಟೆಕ್ನಿಕಲ್​ ಇಂಜಿನಿಯರ್​ ಐಐ- 2 * ಟೆಕ್ನಿಕಲ್​ ಅಸಿಸ್ಟೆಂಟ್​ ಐ್ಖ – 3 * ಟೆಕ್ನಿಕಲ್​ ಅಸಿಸ್ಟೆಂಟ್​ ಐ – 2 * ಅಡ್ಮಿನಿಸ್ಟ್ರೆಟೀವ್​ ಅಸೋಸಿಯೇಟ್​ ಐಐಐ- 1 * ಅಡ್ಮಿನಿಸ್ಟ್ರೆಟೀವ್​ ಅಸಿಸ್ಟೆಂಟ್​ ಐ್ಖ- 1 *ಅಡ್ಮಿನಿಸ್ಟ್ರೆಟೀವ್​ ಅಸಿಸ್ಟೆಂಟ್​ ಐಐ – 2* ಅಡ್ಮಿನಿಸ್ಟ್ರೆಟೀವ್​ ಅಸಿಸ್ಟೆಂಟ್​ ಐ – 2 * ಮಲ್ಟಿ ಟಾಸ್ಕಿಂಗ್​ ಸ್ಟಾ್​ – 3

    ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ, ಯಾವುದೇ ಪದವಿ, ನ್ಯಾಚುರಲ್​ ಸೈನ್ಸ್​/ ಎನ್ವಿರಾನ್​ಮೆಂಟಲ್​ ಸೈನ್ಸ್​/ ಮರೈನ್​ ಬಯಾಲಜಿ/ ಮರೈನ್​ ಸೈನ್ಸ್​/ ಲೈ್​ ಸೈನ್ಸ್​ ಹಾಗೂ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಬಿಇ/ಬಿಟೆಕ್​, ಪಿಎಚ್​.ಡಿ ಮಾಡಿದ್ದು, ಪದವಿಗಳಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. ವೃತ್ತಿ ಅನುಭವ ಅವಶ್ಯ. ಕಂಪ್ಯೂಟರ್​ ಜ್ಞಾನ ಕೇಳಲಾಗಿದೆ.
    ವಯೋಮಿತಿ: ಹುದ್ದೆಗೆ ಅನುಗುಣವಾಗಿ ಗರಿಷ್ಠ 35 ರಿಂದ 50 ವರ್ಷ ವಯೋಮಿತಿ ಇದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ವೇತನ: ಹುದ್ದೆಗೆ ಅನುಗುಣವಾಗಿ ಮಾಸಿಕ 15,000 ರೂ. ನಿಂದ 67,000 ರೂ. ವರೆಗೆ ಇದ್ದು, ವೇತನ ಜತೆ ಮನೆ ಬಾಡಿಗೆ ಭತ್ಯೆ ಸಹ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 23.2.2022
    ಅಧಿಸೂಚನೆಗೆ: https://bit.ly/339ZvxV

    ಮಾಹಿತಿಗೆ: http://www.ncscm.res.in

    ಪದವೀಧರರರಾ? ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾಲಿ ಇವೆ 48 ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts