More

    ಕುಲ್‌ಭೂಷಣ್‌ ಜಾಧವ್‌ ಪರ ವಾದಿಸಲು ಭಾರತದ ವಕೀಲರನ್ನು ಬಿಡಲ್ಲ ಎಂದ ಪಾಕ್‌!

    ಇಸ್ಲಾಮಾಬಾದ್ : ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ 2017ರಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ಗೆ ಭಾರತದ ವಕೀಲರನ್ನು ನೇಮಿಸಿಕೊಳ್ಳಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಖಂಡತುಂಡವಾಗಿ ನುಡಿದಿದೆ.

    ಪಾಕಿಸ್ತಾನದಲ್ಲಿ ವಕೀಲಿ ವೃತ್ತಿ ನಡೆಸಲು ಪರವಾನಗಿ ಇರುವ ವಕೀಲರನ್ನು ಮಾತ್ರ ಅವರು ನೇಮಕ ಮಾಡಿಕೊಳ್ಳಲು ಸಾಧ್ಯ. ಅದು ನಮ್ಮ ದೇಶದ ಕಾನೂನು. ಆದ್ದರಿಂದ ಭಾರತದ ವಕೀಲರನ್ನು ನೇಮಕ ಮಾಡಿಕೊಳ್ಳಲು ಅವರಿಗೆ ಅರ್ಹತೆ ಇಲ್ಲ ಎಂದಿದೆ ಪಾಕಿಸ್ತಾನ. ಇದಾಗಲೇ ಕುಲಭೂಷಣ್‌ ಜಾಧವ್‌ ಪರ ವಾದಿಸಲು ಪಾಕಿಸ್ತಾನ ಕೋರ್ಟ್‌ ಮೂವರು ಹಿರಿಯ ವಕೀಲರನ್ನು ಅಮಿಕಸ್‌ ಕ್ಯುರಿಯಾಗಿ ನೇಮಕ ಮಾಡಿದೆ.

    ಇಸ್ಲಾಮಾಬಾದ್ ಕೋರ್ಟ್‌ನಲ್ಲಿ (ಐಎಚ್‌ಸಿ) ನಡೆಯುತ್ತಿರುವ ಜಾಧವ್ ಅವರ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಸ್ಥಳೀಯ ಸಲಹೆಗಾರರನ್ನು ನೇಮಿಸಬೇಕೆಂದು ಭಾರತದ ಬೇಡಿಕೆ ಒಡ್ಡುತ್ತಲೇ ಇದೆ. ಅದನ್ನು ನಿರಾಕರಿಸಿರುವ ಪಾಕಿಸ್ತಾನ ವಿದೇಶಾಂಗ ಕಚೇರಿ ಇದು ಸಾಧ್ಯವಿಲ್ಲ ಎಂದಿದೆ.

    “ಕಮಾಂಡರ್ ಜಾಧವ್ ಅವರನ್ನು ಪ್ರತಿನಿಧಿಸಲು ಭಾರತೀಯ ವಕೀಲರಿಗೆ ಅವಕಾಶ ನೀಡುವಂತೆ ಭಾರತದ ಕಡೆಯಿಂದ ಹಲವಾರು ಸಲ ಬೇಡಿಕೆಗಳು ಬಂವಿದೆ. ಆದರೆ ಪಾಕಿಸ್ತಾನದಲ್ಲಿ ವಕೀಲಿ ವೃತ್ತಿ ನಡೆಸಲು ಪರವಾನಗಿ ಹೊಂದಿರುವವರಿಗೆ ಮಾತ್ರ ಪಾಕಿಸ್ತಾನದ ಕಾನೂನಿನ ಅನ್ವಯ ಅವಕಾಶ ಇರುವ ಕಾರಣ, ಇದು ಸಾಧ್ಯವಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ: ರಷ್ಯಾದಲ್ಲಿದೆ ವಿಶ್ವದ ಭಯಾನಕ ಅಣುಬಾಂಬ್‌: ಸ್ಫೋಟದ ಭೀಕರ ದೃಶ್ಯ ಇಲ್ಲಿದೆ…

    ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯ 2017ರ ಏಪ್ರಿಲ್‌ನಲ್ಲಿ ಕುಲಭೂಷಣ್‌ ಜಾಧವ್‌ ಅವರಿಗೆ ಗಲ್ಲುಶಿಕ್ಷೆ ವಿಧಿಸಿತ್ತು. ಜಾಧವ್‌ಗೆ ಎರಡು ಬಾರಿ ರಾಜತಾಂತ್ರಿಕ ಸಂಪರ್ಕ ಕಲ್ಪಿಸಿದ್ದರೂ ಇಲ್ಲದ ಷರತ್ತುಗಳನ್ನು ವಿಧಿಸಿದ್ದ ಪಾಕಿಸ್ತಾನ, ಇಸ್ಲಾಮಾಬಾದ್‌ ಹೈಕೋರ್ಟ್‌ ಆದೇಶದ ನಂತರ ಮೂರನೇ ಬಾರಿಗೆ ಮುಕ್ತ ರಾಜತಾಂತ್ರಿಕ ಸಂಪರ್ಕ ಕಲ್ಪಿಸಿತ್ತು. ಈಗ ಹೈಕೋರ್ಟ್‌ ಇವರ ಪರ ವಾದಿಸಲು ಮೂವರು ವಕೀಲರನ್ನು ನೇಮಿಸಿದೆ.

    ಸಿಜೆ ಅಖ್ತರ್‌ ಮಿನಾಲ್ಹಾ ನೇತೃತ್ವದ ದ್ವಿಸದಸ್ಯ ಪೀಠವು, ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಅಬಿದ್‌ ಹಸನ್‌ ಮಾಂಟೊ, ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಮಾಜಿ ಮುಖ್ಯಸ್ಥ ಹಮೀದ್‌ ಖಾನ್‌ ಮತ್ತು ಪಾಕಿಸ್ತಾನದ ಮಾಜಿ ಅಟಾರ್ನಿ ಜನರಲ್‌ ಮಖ್ದೂಮ್‌ ಅಲಿ ಖಾನ್‌ ಅವರನ್ನು ಜಾಧವ್‌ ಪ್ರಕರಣದಲ್ಲಿ ವಾದ ಮಂಡಿಸಲು ಅಮಿಕಸ್‌ ಕ್ಯೂರಿಯಾಗಿ ನೇಮಕ ಮಾಡಿದೆ.

    ಆದರೆ ಭಾರತದ ವಕೀಲರನ್ನು ನೇಮಿಸಲು ಅನುಮತಿ ನೀಡಬೇಕು ಎಂದು ಭಾರತ ಕೋರುತ್ತಲೇ ಇದ್ದು, ಅದನ್ನು ಪಾಕಿಸ್ತಾನ ನಿರಾಕರಿಸಿದೆ.

    ರಷ್ಯಾದಲ್ಲಿದೆ ವಿಶ್ವದ ಭಯಾನಕ ಅಣುಬಾಂಬ್‌: ಸ್ಫೋಟದ ಭೀಕರ ದೃಶ್ಯ ಇಲ್ಲಿದೆ…

    ರಷ್ಯಾದಲ್ಲಿದೆ ವಿಶ್ವದ ಭಯಾನಕ ಅಣುಬಾಂಬ್‌: ಸ್ಫೋಟದ ಭೀಕರ ದೃಶ್ಯ ಇಲ್ಲಿದೆ…

    ಕೆಎಸ್‌ಆರ್‌ಟಿಸಿ ಬಸ್‌ ಆಯ್ತು ಹಲವು ವಿಶೇಷತೆಗಳ ಮಹಿಳಾ ಶೌಚಗೃಹ- ದೇಶದಲ್ಲೇ ಪ್ರಥಮ

    ಕರೊನಾ ಶ್ವಾಸಕೋಶಕ್ಕಷ್ಟೇ ಸೀಮಿತವಾಗಿಲ್ಲ: ವೈರಸ್‌ ಭಯಾನಕತೆ ಬಿಚ್ಚಿಟ್ಟಿದ್ದಾರೆ ಏಮ್ಸ್‌ ತಜ್ಞರು

    ಮಸೀದಿ ಮೇಲೆ ದಾಳಿ- ಪರೋಲ್ ಇಲ್ಲದ ಜೀವಾವಧಿ ಶಿಕ್ಷೆ: ಇತಿಹಾಸ ಬರೆದ ಕೋರ್ಟ್‌

    ಚೀನಿಯರಿಗೂ ಬೇಕು ಪ್ರಧಾನಿ ಮೋದಿ: ಚೀನಾದ ಪತ್ರಿಕೆಯ ಸಮೀಕ್ಷೆ ಏನು ಹೇಳಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts