More

    ಸ್ಮಶಾನದಲ್ಲಿ ರುದ್ರ ದೇಗುಲ ಅಭಿವೃದ್ಧಿಗೆ ಕ್ರಮ

    ಶಿಕಾರಿಪುರ: ರುದ್ರಭೂಮಿಗಳೆಂದರೆ ಸಾಮಾನ್ಯವಾಗಿ ಜನರಲ್ಲಿ ಭಯದ ವಾತಾವರಣವಿದೆ. ಆದರೆ ಅದು ನಮ್ಮ ಜೀವನದ ವಿದಾಯದ ಸ್ಥಳ. ಇದನ್ನು ಭಯ ಮುಕ್ತವಾಗಿಸಲು ಪಾರ್ಕ್, ರುದ್ರ ದೇವಸ್ಥಾನ ಮುಂತಾದ ಅಭಿವೃದ್ಧಿ ಕಾರ್ಯ ಮಾಡಬೇಕಾದ ಅಗತ್ಯವಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಪಟ್ಟಣದ ಹೊನ್ನಾಳಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಪರೋಪಕಾರಂ ತಂಡ ಸ್ವಚ್ಛತಾ ಕಾರ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಭೇಟಿ ನೀಡಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ಅವರು, ಈ ರುದ್ರಭೂಮಿಯನ್ನು ಹೊಸದುರ್ಗ ತಾಲೂಕಿನ ಬೇಗೂರು ರುದ್ರಭೂಮಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

    ರಾಜ್ಯದ ಹಲವೆಡೆ ರುದ್ರಭೂಮಿಗಳಲ್ಲಿ ಮಕ್ಕಳು ಸಹ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಂತಹ ವಾತಾವರಣ ನಮ್ಮಲ್ಲಿರುವ ರುದ್ರ ಭೂಮಿಗಳಲ್ಲೂ ನಿರ್ವಣವಾಗಬೇಕು. ಎಲ್ಲ ಜನಾಂಗದವರ ವಿಧಿ ವಿಧಾನಗಳಂತೆ ಅಂತ್ಯಸಂಸ್ಕಾರ ನಡೆಯಲು ಇಲ್ಲಿ ಪೂರಕ ವ್ಯವಸ್ಥೆಗಳಾಗಬೇಕು. ಶಿವನ ಆಲಯ, ನೀರಿನ ವ್ಯವಸ್ಥೆ, ಸಂಸ್ಕಾರಕ್ಕೆ ಬೇಕಾದ ವಸ್ತುಗಳು ರುದ್ರಭೂಮಿಯಲ್ಲಿಯೇ ದೊರಕುವಂತಾಗಬೇಕು. ಇಲ್ಲಿ ಧಾರ್ವಿುಕ ವಿಧಿವಿಧಾನಗಳನ್ನು ನಡೆಸಲು ಸಂಬಂಧಪಟ್ಟವರಿಗೆ ಅನುಕೂಲವಾಗಬೇಕು ಎಂದರು.

    ಪರೋಪಕಾರಂ ತಂಡದ ಕೆ.ಎಸ್.ಹುಚ್ಚುರಾಯಪ್ಪ, ಮಧುಕೇಶ್ವರ್, ಲಕ್ಷ್ಮಣ್ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts