More

    ಮೋರ್ಚಾಗಳು ಪಕ್ಷದ ಭದ್ರ ಬುನಾದಿಗಳು: ಬಿ.ವೈ.ರಾಘವೇಂದ್ರ

    ಶಿವಮೊಗ್ಗ: ಪಕ್ಷದ ಸಂಘಟನೆಗೆ ಬಲ ನೀಡುವಲ್ಲಿ ಮೋರ್ಚಾಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಈ ದಿಸೆಯಲ್ಲಿ ಆಲೋಚನೆ ನಡೆಸಿ ಎಲ್ಲ ಸಮುದಾಯದವರ ಜತೆಗೆ ಸಂಪರ್ಕ ಸಾಧಿಸಿ ಪಕ್ಷಕ್ಕೆ ಮತ್ತಷ್ಟು ಬಲ ನೀಡಬೇಕಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕರೆ ನೀಡಿದರು.

    ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಭಾನುವಾರ ಬಿಜೆಪಿ ಶಿವಮೊಗ್ಗ ನಗರ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂತ್ಯೋದಯ ಪರಿಕಲ್ಪನೆಯಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಅನೇಕ ಯೋಜನೆಗಳ ಕುರಿತು ಜನರಿಗೆ ಮನದಟ್ಟು ಮಾಡುವ ಕೆಲಸ ಎಲ್ಲ ಮೋರ್ಚಾಗಳದ್ದಾಗಿದೆ ಎಂದರು.
    ವಿಶ್ವದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಹಾಗೂ ದೇಶದಲ್ಲಿಯೇ ಅತೀ ಹೆಚ್ಚು ಸಂಸದರು ಮತ್ತು ಶಾಸಕರನ್ನು ಹೊಂದಿರುವುದು ಬಿಜೆಪಿಯಾಗಿದೆ. ಪಕ್ಷಕ್ಕೆ ಭದ್ರ ಬುನಾದಿಗೆ ವಿವಿಧ ಮೋರ್ಚಾಗಳು ಕಾರಣವಾಗಿದ್ದು ವಿವಿಧ ಮೋರ್ಚಾಗಳ ಮೂಲಕ ಆಯಾ ಸಮುದಾಯಕ್ಕೆ ನ್ಯಾಯ ಕೊಡಲಾಗುತ್ತಿದೆ ಎಂದರು.
    ಕಳೆದೈದು ವರ್ಷಗಳಲ್ಲಿ ದೇವರು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಲಾಗಿದೆ. ಇದುವರೆಗೆ ಮಾಡಿರುವ ಕೆಲಸಗಳನ್ನು ಜನರಿಗೆ ತಲುಪಿಸುವುದು ಕಾರ್ಯಕರ್ತರ ಹೊಣೆಯಾಗಿದೆ. ಜನರಿಂದ ಪಡೆದು ಜನರಿಗೆ ವಾಪಸ್ ಕೊಡುವ ಕೆಲಸ ಕಾಂಗ್ರೆಸ್‌ನಿಂದ ಆಗುತ್ತಿದ್ದು ಚುನಾವಣೆಯಲ್ಲಿ ಹೇಳಿದ್ದೇ ಒಂದಾದರೆ ಈಗ ಮಾಡುತ್ತಿರುವುದು ಮತ್ತೊಂದು. ವಿಶ್ವಾಸ ಇರಬೇಕು, ಆದರೆ ಅತಿಯಾದ ವಿಶ್ವಾಸದಿಂದ ಪಶ್ಚಾತ್ತಾಪ ಪಡುವಂತಾಗಬಾರದು. ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
    ಮಾಜಿ ಎಂಎಲ್‌ಸಿ ಎಂ.ಬಿ.ಭಾನುಪ್ರಕಾಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್.ದತ್ತಾತ್ರಿ, ಎಂಎಲ್‌ಸಿ ಡಿ.ಎಸ್.ಅರುಣ್, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ, ಡಾ. ಧನಂಜಯ ಸರ್ಜಿ, ದೀನದಯಾಳು, ಎಂ.ಬಿ.ಹರಿಕೃಷ್ಣ, ಗಾಯತ್ರಿ ಮಲ್ಲಪ್ಪ, ಎನ್.ಕೆ.ಜಗದೀಶ್, ಎನ್.ಜೆ.ನಾಗರಾಜ್, ಸುವರ್ಣಾ ಶಂಕರ್, ಎಸ್.ಜ್ಞಾನೇಶ್ವರ್, ಆರತಿ ಆ.ಮ. ಪ್ರಕಾಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts