More

    ಬಡ್ತಿಯಲ್ಲಿನ ಅಸಮಾಧಾನ? ಐಪಿಎಸ್​ ಅಧಿಕಾರಿ ದಿಢೀರ್​ ರಾಜೀನಾಮೆ

    ಬೆಂಗಳೂರು: ಹಿರಿಯ ಐಪಿಎಸ್​ ಅಧಿಕಾರಿ, ರಾತ್ರೋರಾತ್ರಿ ಎಡಿಜಿಪಿ ಶ್ರೇಣಿಯ ಡಾ.ಪಿ. ರವೀಂದ್ರನಾಥ್ ಅವರು ನಿನ್ನೆ ರಾತ್ರಿ ಏಕಾಏಕಿಯಾಗಿ ರಾಜೀನಾಮೆ ಸಲ್ಲಿಸಿದ್ದು, ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

    ರಾತ್ರಿ 10.30ಕ್ಕೆ ಕಂಟ್ರೋಲ್ ರೂಂಗೆ ತೆರಳಿ ಅಲ್ಲಿದ್ದ ಸಿಬ್ಬಂದಿ ಕೈಗೆ ಇವರು ರಾಜೀನಾಮೆ ಪತ್ರ ಕೊಟ್ಟಿರುವುದಾಗಿ ವರದಿಯಾಗಿದೆ. ಆದರೆ ಕಾರಣ ಮಾತ್ರ ಇದುವರೆಗೆ ಸ್ಪಷ್ಟವಾಗಿಲ್ಲ. ಮಾತ್ರವಲ್ಲದೇ ಅವರು ಏಕೆ ರಾಜೀನಾಮೆ ನೀಡಿದರು ಎಂಬ ಬಗ್ಗೆ ಡಿಜಿಐಜಿಪಿ ಪ್ರವೀಣ್ ಸೂದ್ ಅವರಿಗೂ ಸ್ಪಷ್ಟವಾಗಿಲ್ಲ ಎನ್ನಲಾಗಿದೆ.

    ಆದರೆ ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ, ಸೀನಿಯಾರಿಟಿಯನ್ನು ಕಡೆಗಣಿಸಿ ತಮಗಿಂತ ಕಿರಿಯರಿಗೆ ಬಡ್ತಿ ನೀಡಿರುವುದು ಡಾ.ಪಿ.ರವೀಂದ್ರನಾಥ್​ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ತಮಗಿಂತ ಸೇವೆಯಲ್ಲಿ ಕಿರಿಯರಾಗಿರುವ ಸುನೀಲ್ ಕುಮಾರ್‌ ಅವರಿಗೆ ಎಡಿಜಿಪಿ ಶ್ರೇಣಿಯಿಂದ ಡಿಜಿಪಿ ಶ್ರೇಣಿಗೆ ಬಡ್ತಿ ನೀಡಿರುವುದರಿಂದ ರವೀಂದ್ರನಾಥ್​ ಅವರು ನೊಂದುಕೊಂಡಿರುವುದಾಗಿ ತಿಳಿದುಬಂದಿದೆ.

    ಇದನ್ನೂ ಓದಿ: ಅಬ್ಬಾ! ಶ್ರೀರಾಮನ ಮೇಲೆ ಇದೆಂಥ ಪ್ರೀತಿ… ಕೋಲಾರದ ಪಾಚಾಸಾಬ್​ರ ಭಕ್ತಿಗೆ ಅವರೇ ಸಾಟಿ…

    ಸುನೀಲ್​ಕುಮಾರ್​ ಅವರಿಗೆ ನಿನ್ನೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ರವೀಂದ್ರನಾಥ್ ಮತ್ತು ಸುನೀಲ್​ಕುಮಾರ್​ ಅವರು ಒಂದೇ ಬ್ಯಾಚ್ ಅಧಿಕಾರಿಗಳು. ಆದರೆ ರ್ಯಾಂಕಿಂಗ್‌ನಲ್ಲಿ ರವೀಂದ್ರನಾಥ್ ಹಿರಿಯರು. ಆದರೆ ತಮಗೆ ಬಡ್ತಿ ನೀಡದೇ ಕಿರಿಯರಿಗೆ ನೀಡಿದ್ದಾರೆ ಎಂದು ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

    ಆದರೆ ತಮಗೆ ರಾಜೀನಾಮೆ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಎಂದು ಪ್ರವೀಣ್​ ಸೂದ್​ ಹೇಳಿದ್ದಾರೆ. ರವೀಂದ್ರನಾಥ್ ನಿನ್ನೆ (ಬುಧರವಾ) ಸಂಜೆ ಸುಮಾರು ಆರು ಗಂಟೆವರೆಗೆ ನನ್ನ ಜತೆ ಇದ್ದರು. ನಂತರ ನಾನು ಕಾರ್ಯನಿಮಿತ್ತ ಬೇರೆಡೆ ಹೋಗಿದ್ದೆ. ವಿಷಯ ಏನು ಎಂದು ಈಗ ತಿಳಿದುಕೊಳ್ಳಬೇಕಿದೆ ಎಂದಿದ್ದಾರೆ.

    ನನ್ನ ಸೇವೆ ಮಾಡಿ ಸದ್ಗತಿ ಪಡೆಯಿರಿ ಎಂದು ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ‘ಗುರು’ಗೆ 120 ವರ್ಷ ಜೈಲು!

    ಮಾಸ್ಕ್​ ಏಕೆ ಧರಿಸಿಲ್ಲ ಎಂದು ಕೇಳಿದವನನ್ನು 27 ಬಾರಿ ಚಾಕುವಿನಿಂದ ತಿವಿದ ಅಕ್ಕ-ತಂಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts